Atlee: ಜವಾನ್ ಚಿತ್ರದಿಂದ ಮನೆಮಾತಾದ ನಿರ್ದೇಶಕ ಅಟ್ಲಿ ಅವರ ಒಟ್ಟು ಆಸ್ತಿ ಎಷ್ಟು…? ಶ್ರೀಮಂತ ನಿರ್ದೇಶಕ.

ಕೋಟಿ ಕೋಟಿ ಸಂಪಾದನೆಯ ನಿರ್ದೇಶಕ ಅಟ್ಲಿ, ಇವರ ಒಟ್ಟು ಆಸ್ತಿ ಎಷ್ಟಿರಬಹುದು.

Atlee Kumar Net Worth: ಅಟ್ಲಿ (Atlee) ಅವರು ಈಗ ಬಹುಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು. ಇವರು ದೊಡ್ಡ ನಿರ್ದೇಶಕ ಎಂದು ಎಲ್ಲರಿಗೂ ಗೊತ್ತು. ಅವರ ನಿರ್ದೇಶನದಲ್ಲಿ ಆರ್ಯ,ನಯನತಾರಾ ಅಭಿನಯದ ರಾಜಾ ರಾಣಿ (Raja Rani) ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು.

ರೊಮ್ಯಾಂಟಿಕ್ ಎಮೋಷನ್ ಪ್ರಕಾರದಲ್ಲಿ ಬಿಡುಗಡೆಯಾಗಿ ಕಮಿರ್ಷಯಲ್ ಆಗಿಯೂ ಯಶಸ್ವಿಯಾದ ಈ ಚಿತ್ರ ಅಟ್ಲಿಗೆ ದೊಡ್ಡ ಅವಕಾಶಗಳನ್ನು ತಂದುಕೊಟ್ಟಿತು. ಜವಾನ್ ಸಿನಿಮಾ ನಿರ್ದೇಶಕ ಅಟ್ಲಿ (Atlee) ನಿರ್ದೇಶನದಲ್ಲಿ ಬಿಡುಗಡೆಯಾದ ಎಲ್ಲಾ 5 ಚಿತ್ರಗಳು ಸೂಪರ್ ಹಿಟ್ ಆಗಿರುವಾಗಲೇ ಅವರ ಆಸ್ತಿಯ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ.

Atlee Kumar Net Worth
Image Credit: Republicworld

ವಿಜಯ್ ಗೆ ಬೆಸ್ಟ್ ನಿರ್ದೇಶಕರಾದದ ಅಟ್ಲಿ

ಅಟ್ಲಿ ಅವರು ಆರಂಭದಲ್ಲಿ ಶಂಕರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು ನಂತರ ಅಟ್ಲಿ ಯವರು ವಿಜಯ್ ಅವರ ಜೊತೆ ಸೇರಿ ನಿರ್ದೇಶನ ಮಾಡಿದರು. ಈ ಚಿತ್ರವೂ ಸೂಪರ್ ಹಿಟ್ ಆದ ನಂತರ ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಮೆರ್ಸಲ್ ನಿರೀಕ್ಷಿತ ಯಶಸ್ಸನ್ನು ನೀಡಿದ್ದು ಅಟ್ಲಿ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ವಿಜಯ್ ಸತತ 3ನೇ ಬಾರಿಗೆ ನಿರ್ದೇಶಕ Atlee ಜೊತೆ ಸೇರಿಕೊಂಡರು. ಈ ಕಾಂಬೋದಲ್ಲಿ ತೆರೆಕಂಡ ಬಿಗಿಲ್ ಚಿತ್ರದಲ್ಲಿ ವಿಜಯ್ ನಯನತಾರಾ ನಟಿಸಿದ್ದರು.

ಮೊದಲ ಹಿಂದಿ ಸಿನಿಮಾ ಜವಾನ್ ಗೆಲ್ಲಿಸಿದ ನಿರ್ದೇಶಕ ಅಟ್ಲಿ

ಬಹಳ ದಿನಗಳ ನಂತರ ಆಕ್ಷನ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ವೇಳೆ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಮೂಲಕ ಅಟ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರ ಸದ್ಯ ರೂ. 1000 ಕೋಟಿ ಕಲೆಕ್ಷನ್ ಸಮೀಪಿಸುತ್ತಿದೆ. ಜವಾನ್ ಚಿತ್ರದ ಯಶಸ್ಸಿನ ನಂತರ Atlee ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಬಂದಿದೆ.ಸಲ್ಮಾನ್ ಖಾನ್, ಅಮೀರ್ ಖಾನ್, ಹೃತಿಕ್ ರೋಷನ್ ಮತ್ತು ಇತರರೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಅವರು ಹೇಳಿದರು.

Atlee latest update
Image Credit: Siasat

ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮ

ಜವಾನ್ ಸಿನಿಮಾದ ಮಿಡಿಯೋ ಮೀಟ್ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದಿದೆ. ಸಿನಿಮಾ ಬಜೆಟ್ ಕುರಿತು ಅಟ್ಲಿ ಇತ್ತೀಚೆಗೆ ಮಾತನಾಡಿದ್ದಾರೆ.bಅಟ್ಲಿ ಅವರ ಜವಾನ್ ಸಿನಿಮಾ ಭರ್ಜರಿ ಹಿಟ್ ಆಗಿದೆ. ಜವಾನ್ ಸಿನಿಮಾ ಎಲ್ಲೆಡೆ ಸದ್ದು ಮಾಡಿದ್ದು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 6 ದಿನದಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಟ್ಲೀ ಅವರ ನಿವ್ವಳ ಮೌಲ್ಯ ಸುಮಾರು 50 ಕೋಟಿ ಎಂದು ಅಂದಾಜಿಸಲಾಗಿದೆ.

ಜವಾನ್ ಸಿನಿಮಾದ ಬಜೆಟ್

ಈ ಒಂದು ಬಿಗ್ ಇವೆಂಟ್​ನಲ್ಲಿ ದಕ್ಷಿಣದ ನಿರ್ದೇಶಕ Atlee ಅವರು ಜವಾನ್ ಸಿನಿಮಾದ ಒಟ್ಟು ಬಜೆಟ್ ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ನಾನು ಝೂಮ್ ಮೂಲಕ ಸಿನಿಮಾವನ್ನು ವಿರಿಸಿದೆ. ಆ ಸಂದರ್ಭದಲ್ಲಿ ಥಿಯೇಟರ್ ಎನ್ನುವ ಕಾನ್ಸೆಪ್ಟ್ ಕಂಪ್ಲೀಟ್ ಡೌನ್ ಆಗಿತ್ತು.

ನಿರ್ಮಾಪಕರು 30-40 ಕೋಟಿಯ ಬಜೆಟ್ ಕೂಡಾ ಮಾಡಲು ರೆಡಿ ಇರಲಿಲ್ಲ. ನಾನು ಕೂಡಾ ಒಬ್ಬ ಪ್ರೊಡ್ಯೂಸರ್, ಹಾಗಾಗಿ ನನಗೂ ಈ ಸಮಸ್ಯೆ ಗೊತ್ತು. ಎಲ್ಲರೂ ಹೂಡಲು ಹಿಂಜರಿಯುತ್ತಿದ್ದಾಗ ಶಾರುಖ್ ಖಾನ್ ಅವರು 300 ಕೋಟಿ ಹೂಡಲು ರೆಡಿಯಾದರು ಎಂದಿದ್ದಾರೆ.

Leave A Reply

Your email address will not be published.