ATM Insurance: ATM ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ ರೂಪಾಯಿ ಉಚಿತ, ಸಾಕಷ್ಟು ಜನರಿಗೆ ಈ ಯೋಜನೆಯ ಬಗ್ಗೆ ತಿಳಿದಿಲ್ಲ.

ATM ಕಾರ್ಡ್ ನ 10 ಲಕ್ಷ ರೂಪಾಯಿಯ ವಿಮೆ ಸೌಲಭ್ಯ .

ATM Card Insurance: ಇತ್ತೀಚಿನ ದಿನಗಳಲ್ಲಿ ಪ್ರತಿ ಜನ ಸಾಮಾನ್ಯನು ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡುವುದು ಸರ್ವೇಸಾಮಾನ್ಯ, ಆದರೆ ಬ್ಯಾಂಕ್ ನ ಪ್ರತಿಯೊಂದು ಯೋಜನೆಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಬ್ಯಾಂಕ್ ಗಳಲ್ಲಿ ಠೇವಣಿ ಹೊಂದಿದ್ದ ಹೆಚ್ಚಿನವರು ATM ಕಾರ್ಡ್ ಅನ್ನು ಬಳಸುತ್ತಿರುತ್ತಾರೆ. ಏಕೆಂದರೆ ಜನರು ತಮ್ಮ ಜೇಬಿನಲ್ಲಿ ದೊಡ್ಡ ಹಣವನ್ನು ಇಟ್ಟುಕೊಳ್ಳುವ ಬದಲು ATM  ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಾರೆ.

ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಬ್ಯಾಂಕಿನಿಂದ ಎಟಿಎಂ ಕಾರ್ಡ್ ನೀಡಿದ ತಕ್ಷಣ ಅಪಘಾತ ವಿಮೆ ಮಾಡಿಸಬಹುದೆಂದು ಕೆಲವೇ ಜನರಿಗೆ ಮಾತ್ರ ತಿಳಿದಿರುತ್ತದೆ. ATM ಕಾರ್ಡ್ ಮೇಲು ವಿಮೆ ಮಾಡಿಸುವ ಪ್ರಕ್ರಿಯೆ ಇದ್ದು,  ಎಟಿಎಂ ಕಾರ್ಡ್ ಇದ್ದರೆ 10 ಲಕ್ಷದವರೆಗೆ ಅಪಘಾತ ವಿಮೆ ಮಾಡಿಸಬಹುದು.

ATM card latest update
Image Credit: Jagran

ಏನಿದು ATM ವಿಮೆ…?
ಬ್ಯಾಂಕ್ ಗ್ರಾಹಕರಿಗೆ ATM Card ನೀಡಿದ ತಕ್ಷಣ ಅದರೊಂದಿಗೆ ಅಪಘಾತ ವಿಮೆ ಕೂಡ ಸಿಗುತ್ತದೆ. ATM Card ನ ವರ್ಗದ ಪ್ರಕಾರ, ಅಪಘಾತ ವಿಮೆ ಮೊತ್ತವು 1 ರಿಂದ 10 ಲಕ್ಷ ರೂಪಾಯಿಗಳಾಗಿರುತ್ತದೆ . ಆದರೆ ಮಾಹಿತಿಯ ಕೊರತೆಯಿಂದ ಜನರು ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ATM ವಿಮೆಗಾಗಿ ಒಂದು ತಿಂಗಳೊಳಗೆ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ATM ವಿಮೆ ಕುರಿತು ಬಿಹಾರ ಸಾರಿಗೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.

ATM ಕಾರ್ಡ್‌ನಲ್ಲಿ ಎಷ್ಟು ವಿಮೆ ಲಭ್ಯವಿದೆ

ATM ಕಾರ್ಡ್‌ನಲ್ಲಿಅಪಘಾತ ಮತ್ತು ಅನಿಶ್ಚಿತ ಸಾವಿನ ಸಂದರ್ಭದಲ್ಲಿ ವಿಮೆ ಲಭ್ಯವಿದೆ ನಿಯಮಗಳ ಪ್ರಕಾರ 45 ದಿನಗಳ ವರೆಗೆ ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್‌ನ ATM ಅನ್ನು ಬಳಸುತ್ತಿರಬೇಕು. ಇದರಲ್ಲಿ ಎಟಿಎಂ ಕಾರ್ಡ್‌ನ ವರ್ಗಕ್ಕೆ ಅನುಗುಣವಾಗಿ ವಿಮೆಯ ಮೊತ್ತ ಲಭ್ಯವಿದೆ. ಇದರಲ್ಲಿ ಕೆಟಗರಿ ಪ್ರಕಾರ 10 ಲಕ್ಷ ರೂಪಾಯಿಗಳ ತನಕ ವಿಮೆ ತೆಗೆದುಕೊಳ್ಳಬಹುದು.

ATM Card Insurance
Image Credit: Moneycontrol

ATM ಕಾರ್ಡ್‌ ವಿಮೆ ಮಾಡುವ ವಿಧಾನ 

ATM Card ನಲ್ಲಿ ವಿಮೆಯನ್ನು ಪಡೆಯಲು, ಕಾರ್ಡ್ ಹೊಂದಿರುವವರ ನಾಮಿನಿ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಎಫ್ ಐಆರ್ ನಕಲು, ಚಿಕಿತ್ಸೆಯ ಪ್ರಮಾಣ ಪತ್ರ, ಮರಣ ಪ್ರಮಾಣಪತ್ರ ಇತ್ಯಾದಿ ಪೇಪರ್ ಗಳ ಅಗತ್ಯವಿದೆ. ಅದರ ನಂತರ ವಿಮಾ ಹಕ್ಕು ಕೆಲವೇ ದಿನಗಳಲ್ಲಿ ಖಾತೆಗೆ ಬರುತ್ತದೆ.

Leave A Reply

Your email address will not be published.