Bangalore Police alert: ನಿಮ್ಮ ಮೊಬೈಲ್ ಕಳೆದಿದೆಯೇ, ಪೊಲೀಸ್ ಆಪ್ ನಿಂದ ಬ್ಲಾಕ್ ಮಾಡಿ.
ಮೊಬೈಲ್ ಕಳುವಾದಾಗ ಅಥವಾ ಕಳೆದು ಹೋದಾಗ ಈ ಕೆಲಸ ಮೊದಲು ಮಾಡಿ.
KSP Application: ಕಳುವಾದ ಇಲ್ಲವೇ ಕಳೆದು ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡುವ ಕುರಿತು ಬೆಂಗಳೂರು ನಗರ ಪೊಲೀಸರು ಜಾಗೃತಿ ಸಂದೇಶವನ್ನು ಎಕ್ಸ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ನೋಂದಣಿ ಹೇಗೆ ಎನ್ನುವ ಮಾಹಿತಿಯನ್ನು ಒದಗಿಸಿದ್ದಾರೆ. ನಿಮ್ಮ ಮೊಬೈಲ್ ಕಳೆದು ಹೋಗಿದೆಯಾ? ಅದರಲ್ಲಿ ಪ್ರಮುಖ ದಾಖಲೆಗಳಿದ್ದವು, ಬ್ಯಾಂಕಿಂಗ್ ಸಹಿತ ಎಲ್ಲಾ ವಹಿವಾಟು ನಡೆಯುತ್ತಿತ್ತು.
ಕಳೆದು ಹೋಗಿರುವುರಿಂದ ಏನಾಗಿಬಿಡುತ್ತದೆ ಎನ್ನುವ ಆತಂಕವೇ? ನಿಮ್ಮ ಕಳೆದುಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲು ಕರ್ನಾಟಕ ಪೊಲೀಸ್ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಆಪ್( KSP Application ) ಬಳಸಿಕೊಳ್ಳಬಹುದು.
ಕಳೆದು ಹೋದ ಮೊಬೈಲ್ ಅನ್ನು ಸರಳವಾಗಿ ಹಿಂಪಡೆಯಲು ಅವಕಾಶವಿದೆ
ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ನಿಮ್ಮದೇ ಇನ್ನೊಂದು ಮೊಬೈಲ್ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನ ಆಪ್ ಅನ್ನು ಬಳಸಿಕೊಂಡು ದೂರು ದಾಖಲಿಸಬಹುದು ಹಾಗೂ ಬ್ಲಾಕ್ ಮಾಡಲು ಅವಕಾಶವಿದೆ. ಇಡೀ ಪ್ರಕ್ರಿಯೆ ಎಂಟು ಹಂತಗಳಲ್ಲಿ ಇದೆ. ಒಂದೊಂದಾ ನಂತರ ಒಂದೊರಂತೆ ಮಾಹಿತಿ ದಾಖಲಿಸುತ್ತಾ ಹೋದರೆ ನಿಮ್ಮ ಕಳುವಾದ ಮೊಬೈಲ್ ಬ್ಲಾಕ್ ಆಗಿ ಬಿಡುತ್ತದೆ.
ಮೊಬೈಲ್ ಅನ್ನು ಬ್ಲಾಕ್ ಮಾಡುವ ವಿಧಾನ ಹೀಗಿದೆ
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ KSP Application ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ, ಮೊಬೈಲ್ ದೂರನ್ನು E-Lost ನಲ್ಲಿ ವರದಿ ಮಾಡಲು KSP Application ಅನ್ನು ಓಪನ್ ಮಾಡಿಕೊಳ್ಳಿ. ಅಲ್ಲಿಂದ E-Lost Option ಅನ್ನು ಆಯ್ಕೆ ಮಾಡಿಕೊಳ್ಳಿ, ಆನಂತರ E-Lost ವರದಿಯನ್ನು ನೊಂದಾಯಿಸಿಕೊಂಡು ಈ ಆಪ್ಶನ್ ಅನ್ನು ಆಯ್ಕೆ ಮಾಡಿರಿ ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್ ನಂಬರ್ ಹಾಗೂ ಸಾಧ್ಯವಾದರೆ ಇ ಮೇಲ್ ಐಡಿ ನೊಂದಾಯಿಸಿರಿ.
ನಂತರ ಮುಂದಿನ ಆಪ್ಶನ್ ಆಯ್ಕೆ ಮಾಡಿಕೊಳ್ಳಿರಿ ನಿಮ್ಮ ಮೊಬೈಲ್‌ನ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ಮುಂದಿನ Option ಅನ್ನು ಆಯ್ಕೆ ಮಾಡಿರಿ, ಇದಾದ ಬಳಿಕ ಮೊಬೈಲ್ option ಆಯ್ಕೆ ಮಾಡಿಕೊಳ್ಳಿ, ಇದಾದ ನಂತರ ಮೊಬೈಲ್ ಮಾಹಿತಿಯನ್ನು ನೋಂದಾಯಿಸಿ.
ಬಳಿಕ ಆಡ್ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಿರಿ ಕೊನೆಗೆ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ನೀಡಿ. ಕಳೆದು ಹೋದ ಬಗೆಯ ಬಗ್ಗೆ ಮಾಹಿತಿಯನ್ನು ದಾಖಲಿಸಿ ನಂತರ ಸಬ್ಮಿಟ್ ಆಪ್ಶನ್ ಆಯ್ಕೆ ಮಾಡಿಕೊಳ್ಳಿರಿ. ನಿಮಗೆ ಅದರಲ್ಲಿಯೇ ರಶೀದಿಯೂ ಬರಲಿದೆ. ಅದನ್ನು ಡೌನ್ ಲೋನ್ ಮಾಡಿ ಇಟ್ಟುಕೊಳ್ಳಿರಿ. ಈ ವಿಧಾನದಿಂದ ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲು ಹಾಗು ಹುಡುಕಲು ಸಹಕಾರಿ ಆಗುತ್ತದೆ.