Bank Holidays: ಮುಂದಿನ 6 ದಿನ ಬ್ಯಾಂಕ್ ಸಂಪೂರ್ಣ ರಜೆ, ಬ್ಯಾಂಕ್ ವ್ಯವಹಾರ ಇಂದೇ ಮುಗಿಸಿಕೊಳ್ಳಿ.
ನವೆಂಬರ್ ನಲ್ಲಿ ಬ್ಯಾಂಕ್ ಗಳು ಅರ್ಧ ತಿಂಗಳು ಮುಚ್ಚಲ್ಪಟ್ಟಿರುತ್ತದೆ, ಹಾಗಾಗಿ ಗ್ರಾಹಕರು ಬೇಗೆನೆ ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳಿ.
Bank Holidays in November: ಅಕ್ಟೋಬರ್ (October) ತಿಂಗಳು ಮುಗಿದು ನಾಳೆಯಿಂದ ನವೆಂಬರ್ (November) ತಿಂಗಳು ಪ್ರಾರಂಭ ಆಗುತ್ತಿದೆ. ನವೆಂಬರ್ ತಿಂಗಳಲ್ಲಿ ಅನೇಕ ಹಬ್ಬ ಹರಿದಿನಗಳಿದ್ದು, ಬ್ಯಾಂಕ್ ಹಲವು ದಿನಗಳು ಮುಚ್ಚಲ್ಪಟ್ಟಿರುತ್ತದೆ. ಬ್ಯಾಂಕ್ (Bank) ರಜೆಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನ ಆಗಿರುತ್ತದೆ.
ಹಾಗಾಗಿ ಬ್ಯಾಂಕ್ ನ ಗ್ರಾಹಕರು ತಮ್ಮ ಕೆಲಸಗಳನ್ನು ಬೇಗ ಬೇಗ ಮುಗಿಸಿಕೊಳ್ಳುವುದು ಉತ್ತಮ . ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳಂತಹ ನಿಯಮಿತ ರಜಾದಿನಗಳು ಸೇರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರಜಾದಿನಗಳ ಕ್ಯಾಲೆಂಡರ್ ತಯಾರಿಸಿದ್ದು, RBI ಪ್ರಕಾರ ನವೆಂಬರ್‌ನಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬ ಹೇಳಿಕೆ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮ
ದೇಶದಲ್ಲಿನ ಎಲ್ಲಾ ಬ್ಯಾಂಕ್ ಗಳನ್ನೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿಸುತ್ತದೆ ಹಾಗು ರಜೆಯ ಪಟ್ಟಿಯನ್ನು ಸಹ RBI ಸಿದ್ದಪಡಿಸುತ್ತದೆ. ಅದರಂತೆ ನವೆಂಬರ್ ತಿಂಗಳಲ್ಲಿ ಹಬ್ಬ ಹರಿದಿನಗಳಲ್ಲಿ 9 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ. ಜೊತೆಗೆ ಶನಿವಾರ ಮತ್ತು ಭಾನುವಾರ ಈಗಾಗಲೇ ರಜೆ ಇದೆ.
ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್ ರಜೆಯ ಪಟ್ಟಿ
1 ನವೆಂಬರ್: ಕನ್ನಡ ರಾಜ್ಯೋತ್ಸವ
5 ನವೆಂಬರ್: ಈ ದಿನ ಭಾನುವಾರ.
10 ನವೆಂಬರ್: ವಂಗಲಾ ಹಬ್ಬದ ಕಾರಣ ಈ ದಿನ ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
11 ನವೆಂಬರ್: ಈ ದಿನ ತಿಂಗಳ ಎರಡನೇ ಶನಿವಾರ.
12 ನವೆಂಬರ್: ಈ ದಿನ ಭಾನುವಾರ. ದೀಪಾವಳಿ ಕೂಡ ಇದೇ ದಿನ.

13 ನವೆಂಬರ್: ಈ ದಿನ ದೀಪಾವಳಿ ಮತ್ತು ಗೋವರ್ಧನ ಪೂಜೆಗೆ ರಜೆ ಇರುತ್ತದೆ. ತ್ರಿಪುರಾ, ಉತ್ತರಾಖಂಡ, ಸಿಕ್ಕಿಂ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
14 ನವೆಂಬರ್: ಈ ದಿನ ಬಲಿ ಪ್ರತಿಪದ. ಈ ದಿನ ಗುಜರಾತ್, ಕರ್ನಾಟಕ, ಸಿಕ್ಕಿಂ ಮತ್ತು ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ.
15 ನವೆಂಬರ್: ಭಾಯಿ ದೂಜ್ ಮತ್ತು ಚಿತ್ರಗುಪ್ತ ಜಯಂತಿಯ ಕಾರಣ, ಸಿಕ್ಕಿಂ, ಮಣಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ದಿನ ಬ್ಯಾಂಕ್ ರಜೆ ಇರುತ್ತದೆ.
19 ನವೆಂಬರ್: ಈ ದಿನ ಭಾನುವಾರ.
ನವೆಂಬರ್ 20: ಛತ್ ಪೂಜೆ. ಬಿಹಾರದ ಜೊತೆಗೆ ರಾಜಸ್ಥಾನದಲ್ಲಿ ರಜೆ ಇರುತ್ತದೆ.
23 ನವೆಂಬರ್: ಸೆಂಗ್ ಕುಟ್ಸ್ನೆಮ್ ಮತ್ತು ಇಗಾಸ್ ಬಾಗ್ವಾಲ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಉತ್ತರಾಖಂಡ ಮತ್ತು ಸಿಕ್ಕಿಂನಲ್ಲಿ ರಜೆ ಇರುತ್ತದೆ.

25 ನವೆಂಬರ್: ಈ ದಿನ ನಾಲ್ಕನೇ ಶನಿವಾರ.
26 ನವೆಂಬರ್: ಭಾನುವಾರ ರಜೆ
27 ನವೆಂಬರ್: ಗುರುನಾನಕ್ ಜಯಂತಿ, ಕಾರ್ತಿಕ ಪೂರ್ಣಿಮೆಯ ಹಬ್ಬವನ್ನು ಆಚರಿಸಲಾಗುತ್ತದೆ.
30 ನವೆಂಬರ್: ಕನಕದಾಸರ ಜಯಂತಿ. ಈ ದಿನ ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.