Bank Rules: ದಿವಾಳಿಯಾದ ಬ್ಯಾಂಕಿನಲ್ಲಿ ಹಣ ಇದ್ದವರಿಗೆ ಬ್ಯಾಂಕ್ ಹೊಸ ನಿಯಮ

Bank Rules: ಕೆಲವೊಂದು ಬಾರೀ ನಾವು ಹಣ ಹೂಡಿಕೆ ಮಾಡಿದ ಬ್ಯಾಂಕ್‌(Bank) ದಿವಾಳಿಯಾದರೆ ಅಥವಾ ಲಾಸ್‌ ಆದರೆ ನಾವು ಬ್ಯಾಂಕ್‌ ನಲ್ಲಿ ಇಟ್ಟ ಹಣ ವಾಪಾಸ್‌ ಸಿಗುತ್ತದೆಯೇ ಇಲ್ಲವೇ ಎಂಬ ಅನುಮಾನ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಡಿಐಜಿಸಿ ಕಾಯ್ದೆ, 1961 ಕ್ಕೆ ತಿದ್ದುಪಡಿ ಮೂಲಕ ಸರಳ ಹಾಗೂ ಒಂದು ಚೌಕಟ್ಟಿಗೆ ತಂದು ಸುಗಮಗೊಳಿಸುವ ಬದಲಾವಣೆ ಇದಾಗಿದ್ದು, ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಅಂತಹ ಬ್ಯಾಂಕಿನ ಠೇವಣಿದಾರರು ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಮ್ಮ ಹಣವನ್ನು ಪಡೆಯಬಹುದು.

ಇದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಪಂಜಾಬ್​- ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಗಳು ಹಾಗೂ ಅನುತ್ಪಾದಕ ಆಸ್ತಿಯ ಬಗ್ಗೆ ಕೆಲ ವರ್ಷಗಳಿಂದ ಸರಿಯಾಗಿ ಆರ್‌ಬಿಐಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ಅನ್ನು ಸ್ಥಗಿತಗೊಳಿಸುವಂತೆ ಆರ್​ಬಿಐ ಸೂಚನೆ ನೀಡಿತ್ತು. ಇದರಿಂದ ಈ ಬ್ಯಾಂಕಿನ ಠೇವಣಿದಾರರು ಆತಂಕಕ್ಕೆ ಒಳಗಾಗಿದ್ದರು. ಆದರೆ ಈಗ ಬ್ಯಾಂಕಿನ ಠೇವಣಿದಾರರಿಗೆ ಪರಿಹಾರ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆ 1961 ಯಲ್ಲಿನ ಒಂದಷ್ಟು ನಿರ್ಬಂಧಗಳನ್ನು ತಿದ್ದುಪಡಿಯ ಮೂಲಕ ತೆರವುಗೊಳಿಸಿದೆ.

ಪಿಎಮ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್‌ನಂತಹ ಬ್ಯಾಂಕುಗಳ ಠೇವಣಿದಾರರು ಎದುರಿಸುತ್ತಿರುವ ಆತಂಕ ಕಡಿಮೆ ಮಾಡುವುದು ಇದರ ಉದ್ದೇಶ. ನಿಷೇಧದ ಅಡಿಯಲ್ಲಿರುವ ಬ್ಯಾಂಕುಗಳ ಠೇವಣಿದಾರರು ತಮ್ಮ ಹಣವನ್ನು ಪಡೆಯಲು ಬ್ಯಾಂಕ್ ಅನ್ನು ದಿವಾಳಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸುವ ತನಕ ಕಾಯಬೇಕಾಗಿಲ್ಲ. ಕೇಂದ್ರ ಸರ್ಕಾರವು ಠೇವಣಿ ವಿಮಾ ರಕ್ಷಣೆಯನ್ನು 5 ಲಕ್ಷಕ್ಕೆ ಏರಿಸಿತು ಮತ್ತು ಬ್ಯಾಂಕನ್ನು ಆರ್‌ಬಿಐ ಕಣ್ಗಾವಲಿನಲ್ಲಿ ಇರಿಸಿದ್ದರೂ ಸಹ ಬ್ಯಾಂಕ್​ಗಳ ನಿಯಮಿತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

Bank Rules
Image Source: India Today

1984ರಲ್ಲಿ ಆರಂಭವಾದ ಪಂಜಾಬ್‌-ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಕಳೆದ 35 ವರ್ಷಗಳಲ್ಲಿ ಅಗಾಧವಾಗಿ ಬೆಳೆದು, ದೇಶದ ಅನೇಕ ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದೆ. ಇದು ನಮ್ಮ ದೇಶದಲ್ಲಿರುವ ಐದು ಅತಿದೊಡ್ಡ ನಗರ ಸಹಕಾರ ಬ್ಯಾಂಕ್‌ಗಳಲ್ಲಿ ಒಂದು. ಸುಮಾರು 60 ಸಾವಿರ ಗ್ರಾಹಕರನ್ನು ಹೊಂದಿದೆ.ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಭಾರತೀಯ ರಿಸರ್ವ್ ಬ್ಯಾಂಕ್ ನ ಸಂಪೂರ್ಣ ಅಂಗಸಂಸ್ಥೆಯಾಗಿದೆ. ಬ್ಯಾಂಕ್ ತನ್ನ ಠೇವಣಿದಾರರಿಗೆ ಹಣ ಪಾವತಿಸಲು ವಿಫಲವಾದಾಗ, ಈ ಅಂಗ ಸಂಸ್ಥೆ ಬ್ಯಾಂಕ್ ಠೇವಣಿ ಹೊಂದಿರುವ ಗ್ರಾಹಕರಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

ಭಾರತದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿದಾರರ ಹಣವನ್ನು ಡಿಐಜಿಸಿಜಿ ರಕ್ಷಿಸುತ್ತದೆ; ಕೇಂದ್ರ, ರಾಜ್ಯ ಮತ್ತು ನಗರ ಸಹಕಾರಿ ಬ್ಯಾಂಕುಗಳು; ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು; ಮತ್ತು ಸ್ಥಳೀಯ ಬ್ಯಾಂಕುಗಳು, ಬ್ಯಾಂಕ್ ಡಿಐಜಿಸಿಸಿ ಅಡಿಯಲ್ಲಿ ಬರುತ್ತವೆ. ಡಿಐಜಿಸಿಯು ಬ್ಯಾಂಕಿನ ಅಡಿಯಲ್ಲಿ ಬರುವ ಬ್ಯಾಂಕ್​ಗಳಲ್ಲಿ ಪ್ರತಿ ಬ್ಯಾಂಕ್‌ ಖಾತೆದಾರರಿಗೆ 5 ಲಕ್ಷ ರೂ ಹಣ ಮಿಮೆಯನ್ನು ಇನ್ನು ಮುಂದೆ ಮಾಡಲಾಗಿರುತ್ತದೆ. ಅಂದರೆ ಎಲ್ಲಾ ರೀತಿಯ ಠೇವಣಿ ಖಾತೆಗಳಾದ ಉಳಿತಾಯ, ಕರೆಂಟ್, ಮರುಕಳಿಸುವ ಮತ್ತು ಸ್ಥಿರ ಠೇವಣಿ ಖಾತೆಗಳಿಗೆ ಇದು ಅನ್ವಯಿಸುತ್ತದೆ.

Bank Rules
Image Source: Asia Times

“ಈ ಅಧಿವೇಶನದಲ್ಲಿ ಡಿಐಜಿಸಿ ಕಾಯ್ದೆ, 1961 ಕ್ಕೆ ತಿದ್ದುಪಡಿ ಮೂಲಕ ಸರಳ ಹಾಗೂ ಒಂದು ಚೌಕಟ್ಟಿಗೆ ತಂದು ಸುಗಮಗೊಳಿಸುವ ಬದಲಾವಣೆ ಇದಾಗಿದ್ದು, ಇದರಿಂದಾಗಿ ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ, ಅಂತಹ ಬ್ಯಾಂಕಿನ ಠೇವಣಿದಾರರು ಅವರಿಗೆ ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಮ್ಮ ಹಣವನ್ನು ಪಡೆಯಬಹುದು
ಠೇವಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕಳೆದ ವರ್ಷ ಠೇವಣಿ ವಿಮಾ ರಕ್ಷಣೆಯ ಮೊತ್ತವನ್ನು1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿತ್ತು. ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಈ ಹಣವನ್ನು ಕ್ಲೈಮ್​ ಮಾಡಬಹುದಾಗಿದೆ. ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿದರೆ ಅಥವಾ ಬ್ಯಾಂಕ್​ ದಿವಾಳಿ ಎದ್ದರೆ ಈ ಹಣವನ್ನು ಬಳಸಬಹುದಾಗಿದೆ.

Leave A Reply

Your email address will not be published.