Bank Holidays: ಇನ್ನುಮುಂದೆ ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್ ತೆರೆದಿರಲಿದೆ, ಜಾರಿಗೆ ಬರಲಿದೆ ಐತಿಹಾಸಿಕ ನಿಯಮ.
ಬ್ಯಾಂಕುಗಳ ರಜಾ ದಿನಗಳ ನಿಯಮದಲ್ಲಿ ಬಹುದೊಡ್ಡ ಬದಲಾವಣೆ.
Bank Weekly Holidays Updated: ಬ್ಯಾಂಕ್ ಉದ್ಯೋಗಿಗಳಿಗೆ ಇನ್ನುಮುಂದೆ ರಜಾ ದಿನದಲ್ಲಿ ಬದಲಾವಣೆ ಆಗಲಿದೆ. ವಾಸ್ತವವಾಗಿ ಎರಡನೇ ಹಾಗು ನಾಲ್ಕನೇ ಶನಿವಾರ ಹಾಗು ಭಾನುವಾರಗಳು ರಜೆ ಇರುತ್ತಿತ್ತು, ಆದರೆ ಇನ್ನು ಮುಂದೆ ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಕೇವಲ 05 ದಿನ ಮಾತ್ರ ಕೆಲಸ ಮಾಡಿದರಾಯಿತು.
ಎಲ್ಲಾ ಶನಿವಾರ ಹಾಗು ಭಾನುವಾರಗಳು ಬ್ಯಾಂಕ್ ರಜೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಹಾಗು ವರ್ಕ್ವೀಕ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಬಹುದು ಎನ್ನಲಾಗಿದೆ. ಈ ಪ್ರಸ್ತಾಪಕ್ಕೆ ಐಬಿಎ ಈ ಹಿಂದೆಯೆ ಒಪ್ಪಿದೆ. ಹಣಕಾಸು ಸಚಿವಾಲಯ ಮತ್ತು ಆರ್ಬಿಐ ನ ಅನುಮೋದನೆ ಬಾಕಿ ಇದೆ. ಇನ್ನು ಬ್ಯಾಂಕ್ ಉದ್ಯೋಗಿಗಳಿಗೆ ಶೇ. 15ರಷ್ಟು ಸರಾಸರಿ ಸಂಬಳ ಹೆಚ್ಚಳದ ಪ್ರಸ್ತಾಪದ ಚರ್ಚೆಗಳಾಗುತ್ತಿವೆ.
ಬ್ಯಾಂಕ್ ಉದ್ಯೋಗಿಗಳ ವೇತನದಲ್ಲಿ ಹೆಚ್ಚಳ
ಈಗಾಗಲೇ ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳು ಬ್ಯಾಂಕ್ ಉದ್ಯೋಗಿಗಳ ಸಂಬಳ ಹೆಚ್ಚಿಸುವಂತೆ ಮನವಿ ಮಾಡಿದ್ದು, ಕೋವಿಡ್ ಸಮಯದಲ್ಲಿ ಶ್ರಮಿಸಿದ ಬ್ಯಾಂಕ್ ಉದ್ಯೋಗಿಗಳಿಗೆ ವೇತನ ಹೆಚ್ಚಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸುವುದು ಮುಖ್ಯ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳ ಹಣಕಾಸು ಸಾಧನೆ ಕೂಡ ಉತ್ತಮವಾಗಿದೆ.
ಈ ಎಲ್ಲಾ ಕಾರಣದಿಂದ ಬ್ಯಾಂಕ್ ಉದ್ಯೋಗಿಗಳಿಗೆ ಒಳ್ಳೆಯ ಸಂಬಳ ಹೆಚ್ಚಳ ಆಗಬೇಕು ಎಂದು ಬ್ಯಾಂಕ್ ಉದ್ಯೋಗಿಗಳ ಯೂನಿಯನ್ಗಳು ಆಗ್ರಹಿಸುತ್ತಿವೆ.ಹಾಗೆಯೇ, ಬ್ಯಾಂಕಿಂಗ್ ವಲಯದ ಪರಿಸ್ಥಿತಿ ಉತ್ತಮ ಇರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಸರಾಸರಿಯಾಗಿ ಈ ಬಾರಿ ಶೇ. 15ರಷ್ಟು ಸಂಬಳ ಹೆಚ್ಚಳ ಕೊಡುವ ಬಗ್ಗೆ ಚರ್ಚೆಗಳಾಗುತ್ತಿರುವುದು ತಿಳಿದುಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ ಸಂಸ್ಥೆ ಬ್ಯಾಂಕ್ ಉದ್ಯೋಗಿಗಳಿಗೆ ಶೇ. 15ರಷ್ಟು ಸಂಬಳ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವ ಮುಂದಿಟ್ಟಿದೆ. ಆದರೆ, ವಿವಿಧ ಬ್ಯಾಂಕ್ ಯೂನಿಯನ್ಗಳು ಇನ್ನೂ ಹೆಚ್ಚಿನ ಸಂಬಳಕ್ಕೆ ಪಟ್ಟು ಹಿಡಿದಿವೆಯಂತೆ ಎನ್ನಲಾಗಿದೆ.
ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಎರಡು ದಿನಗಳು ರಜೆ ಇರುತ್ತದೆ
ಭಾರತೀಯ ಬ್ಯಾಂಕುಗಳ ಸಂಸ್ಥೆ (IBA- Indian Banks Association) ಈ ಐದು ದಿನದ ವರ್ಕ್ವೀಕ್ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ 9 ತಿಂಗಳೇ ಆಗಿವೆ. ಹಣಕಾಸು ಸಚಿವಾಲಯ ಮತ್ತು ಆರ್ಬಿಐನಿಂದ ಅನುಮೋದನೆ ಸಿಕ್ಕ ಕೂಡಲೇ ಇದನ್ನು ಜಾರಿಗೆ ತರಬಹುದು.ಪ್ರತೀ ಶನಿವಾರ ಮತ್ತು ಭಾನುವಾರ ಎರಡೂ ದಿನವೂ ರಜೆಗಳಿರುತ್ತವೆ. ಸದ್ಯ ಭಾನುವಾರಗಳಂದು ವೀಕಾಫ್ ಇದೆ.
ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಹೊಸ ಪ್ರಸ್ತಾಪ ಜಾರಿಗೆ ಬಂದಲ್ಲಿ ಶನಿವಾರ ಮತ್ತು ಭಾನುವಾರ ಎರಡೂ ದಿನಗಳು ರಜೆ ಇರುತ್ತವೆ.2015ರಲ್ಲಿ ಆದ ಒಪ್ಪಂದಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜೆಗಳಾಗಿ ಘೋಷಿಸಬೇಕೆನ್ನುವ IBA ಪ್ರಸ್ತಾವಕ್ಕೆ RBI ಒಪ್ಪಿಕೊಂಡಿತ್ತು. ಈಗ ಭಾನುವಾರಗಳಂತೆ ಎಲ್ಲಾ ಶನಿವಾರಗಳನ್ನೂ ರಜೆಯಾಗಿ ಘೋಷಿಸಬೇಕೆಂದು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಪ್ರಸ್ತಾಪ ಮಾಡಿವೆ.