Gruha Jyothi: ಗೃಹಜ್ಯೋತಿ ನಿಯಮದಲ್ಲಿ ಇನ್ನೊಂದು ಬದಲಾವಣೆ, ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ.

ಉಚಿತ ಕರೆಂಟ್ ಪಡೆಯುತ್ತಿದ್ದ ಜನರಿಗೆ ಬೇಸರದ ಸುದ್ದಿ, ವಿದ್ಯುತ್ ದರದಲ್ಲಿ ಇಷ್ಟು ಹೆಚ್ಚಳ.

Bescom Electricity Bill Hike: ಕರ್ನಾಟಕ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ರಾಜ್ಯದ ಸುಮಾರು ಎರಡು ಕೋಟಿ ಕುಟುಂಬಗಳಿಗೆ ಈ ಯೋಜನೆ ಪ್ರಯೋಜನವನ್ನು ನೀಡುತ್ತಿದೆ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಸದ್ಯ ರಾಜ್ಯದಲ್ಲಿ ಹಲವಾರು ಮನೆಗಳು ಶೂನ್ಯ ವಿದ್ಯುತ್ ಬಿಲ್ ಅನ್ನು ಪಡೆಯುತ್ತಿದೆ. ಆದರೆ ಈ ನಡುವೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮುಂದಿನ ತಿಂಗಳಲ್ಲಿ ನೀಡುವ ಅಂದರೆ ಈ ತಿಂಗಳ ವಿದ್ಯುತ್ ಬಳಕೆ ದರವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

Electricity Bill Hike
Image Credit: Whatshot

ವಿದ್ಯುತ್ ಕೊರತೆಯಿಂದ ಇನ್ನಷ್ಟು ಸಂಕಷ್ಟ

ಈಗಾಗಲೇ ಗ್ರಹಜ್ಯೋತಿ ಯೋಜನೆಯಿಂದ ಪ್ರತಿ ಮನೆಯಲ್ಲೂ ಫ್ರೀ ಕರೆಂಟ್ ಸೌಲಭ್ಯ ವನ್ನು ಸರಕಾರ ನೀಡಿದೆ, ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಸಮಸ್ಯೆ ಹೆಚ್ಚಾಗಿದೆ. ಇನ್ನು ವಿದ್ಯುತ್ ಕೊರತೆಯಿಂದ ಉಂಟಾದ ಹೆಚ್ಚಿದ ಖರೀದಿಯ ಪ್ರಮಾಣದಿಂದಾಗಿ ಇಂಧನ ಹೊಂದಾಣಿಕೆ ವೆಚ್ಚವು ಅಧಿಕವಾಗುವ ಆತಂಕವಿತ್ತು. ಆದರೆ ಕಳೆದ ತಿಂಗಳ ಎಫ್‌ಎಸಿಗಿಂತ 0.16 ಪೈಸೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಇನ್ನು ಶುಲ್ಕಗಳ ಹೆಚ್ಚಳವು ಬೆಸ್ಕಾಂನ ವ್ಯಾಪ್ತಿಯಲ್ಲಿರುವ ಗ್ರಾಹಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

ನವೆಂಬರ್ ತಿಂಗಳ ವಿದ್ಯುತ್ ಬಿಲ್ ನಲ್ಲಿ ಹೆಚ್ಚಳ

ಡಿಸೆಂಬರ್‌ನ ಬಿಲ್ಲಿಂಗ್ ಅವಧಿಯಲ್ಲಿ ನವೆಂಬರ್ ತಿಂಗಳ ಗ್ರಾಹಕರ ಬಿಲ್‌ಗಳಿಗೆ ಪ್ರತಿ ಯೂನಿಟ್‌ಗೆ 85 ಪೈಸೆ ಹೆಚ್ಚುವರಿ ಇಂಧನ ಹೊಂದಾಣಿಕೆ ವೆಚ್ಚವನ್ನು (ಎಫ್‌ಎಸಿ) ಸೇರಿಸುವ ಮೂಲಕ ವಿದ್ಯುತ್ ಶುಲ್ಕವನ್ನು ಹೆಚ್ಚಿಸುವುದಾಗಿ ಬೆಸ್ಕಾಂ ಘೋಷಿಸಿದೆ ಎಂದು ಏಷ್ಯನೆಟ್ ವರದಿ ಮಾಡಿದೆ.

ಈ ಹೆಚ್ಚುವರಿ ಶುಲ್ಕವು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಜಾರಿಗೆ ತಂದ ಪ್ರತಿ ಯೂನಿಟ್‌ಗೆ 50 ಪೈಸೆಯ ಹೆಚ್ಚಳಕ್ಕಿಂತ ಭಿನ್ನವಾಗಿದೆ. ಈಗ ಮಾಡಲಾಗುವ 34 ಪೈಸೆ ಹೆಚ್ಚಳವು ನಿರ್ದಿಷ್ಟವಾಗಿ ನವೆಂಬರ್‌ ತಿಂಗಳಿಗೆ ಸಂಬಂಧಿಸಿದ್ದು ಆಗಿದೆ. ಇದರಿಂದಾಗಿ ನವೆಂಬರ್‌ನಲ್ಲಿ ವಿದ್ಯುತ್ ಬಳಕೆಗಾಗಿ ಯೂನಿಟ್‌ಗೆ 85 ಪೈಸೆಯ ಎಫ್‌ಎಸಿ ವಿಧಿಸಲು ನಿರ್ಧರಿಸಲಾಗಿದೆ.

Bescom Electricity Bill Hike
Image Credit: Rajyasameeksha

ಕರ್ನಾಟಕದ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ಸೌಲಭ್ಯ

ಶೀಘ್ರವೇ ಕರ್ನಾಟಕದ ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ವರದಿಯಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

“ನಾವು ಅದನ್ನು ರಾಜ್ಯ ಸರ್ಕಾರದ ಮುಂದೆ ಅನುಮೋದನೆಗಾಗಿ ಶೀಘ್ರದಲ್ಲೇ ಸಲ್ಲಿಸುತ್ತೇವೆ,” ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ Gruha Jyothi ಯೋಜನೆಯಡಿ, ಕರ್ನಾಟಕದ ದೇವಾಲಯಗಳು ಉಚಿತ ವಿದ್ಯುತ್ ಪಡೆಯುವ ನಿರೀಕ್ಷೆಯಿದೆ.

Leave A Reply

Your email address will not be published.