Big Boss Season 10: ಬಿಗ್ ಬಾಸ್ ಕನ್ನಡದಲ್ಲಿ ಬಹುದೊಡ್ಡ ಬದಲಾವಣೆ, ಬೇಸರ ಹೊರಹಾಕಿದ ಬಿಗ್ ಬಾಸ್ ಫ್ಯಾನ್ಸ್.

ಬಿಗ್ ಬಾಸ್ ನ ಅಭಿಮಾನಿಗಳಿಗೆ ಬೇಸರ ಸಂಗತಿ, ಬಿಗ್ ಬಾಸ್ 10 ರಲ್ಲಿ ಬಾರಿ ಬದಲಾವಣೆ.

Bigg Boss Kannada Season 10: ಕಿರುತರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(Bigg Boss) ಪ್ರಾರಂಭಕ್ಕೆ ಕರ್ನಾಟಕದ ಜನತೆ ಕಾಯುತ್ತಿದ್ದಂತ ರಿಯಾಲಿಟಿ ಶೋ ಹಬ್ಬ ಶುರುವಾಗುವುದಕ್ಕೆ ದಿನಗಣನೇ ಶುರುವಾಗಿದೆ. ಕುತೂಹಲಕ್ಕೆ ಬ್ರೇಕ್ ಎರಡು ದಿನ ಕಳೆದರೆ ಸಿಗಲಿದೆ . ಬಿಗ್ ಬಾಸ್ ರಿಯಾಲಿಟಿ ಶೋ ಅದ್ದೂರಿ ವೇದಿಕೆಯೊಂದಿಗೆ ಅಕ್ಟೋಬರ್ 8ರ ಭಾನುವಾರ ಸಂಜೆ ತೆರೆದುಕೊಳ್ಳಲಿದೆ.

ಬಿಗ್ ಬಾಸ್ ನ 9 ಸೀಸನ್‌ಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ 10ನೇ‌ ಸೀಸನ್. ಬಹಳ ವಿಶೇಷವಾಗಿದ್ದು, ಹಲವು ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ. ಯಾಕಂದ್ರೆ ಇಷ್ಟು ದಿನ ಸ್ಪರ್ಧೆಗಳ ವಿಚಾರದಲ್ಲಿ ಅವರು ಹೋಗಬಹುದು. ಇವರು ಹೋಗಬಹುದು ಎಂದೇ ಊಹೆಗಳು ನಡೆಯುತ್ತಿವೆ. ಆದರೆ, ಭಾನುವಾರ ಸಂಜೆ ಅಧಿಕೃತವಾಗಿ ಯಾರೆಲ್ಲಾ ಸ್ಪರ್ಧಿಗಳಾಗಬಹುದು ಎಂಬ ಕ್ಲಾರಿಟಿಯೂ ಸಿಗಲಿದೆ.

Big Boss Season 10
Image Credit: Vpnranks

ಬಿಗ್ ಬಾಸ್ ನ ಹೊಸ ಮನೆಯ ಸ್ಮಾಲ್ ಝಲಕ್

ಖಾಲಿಯಿದ್ದ ಜಾಗವನ್ನು ಬಿಗ್ ಬಾಸ್‌ನ ಬ್ಯೂಟಿಫುಲ್ ಮನೆ ಮಾಡಿದ್ದು ಹೇಗೆ ಎಂಬುದನ್ನು ಕಲರ್ಸ್ ಕನ್ನಡ ತಂಡ ತೋರಿಸಿದ್ದಾರೆ. ನಾವೀಗ ನೋಡುವುದು ಕಲರ್ ಫುಲ್ ಬಿಗ್ ಬಾಸ್ ಮನೆ. ಬಿಗ್ ಬಾಸ್ 9 ಸೀಸನ್ ಗಳು ಬಿಡದಿಯ ಬಳಿ ನಡೆದಿತ್ತು. ಆದರೆ, ಈ ಬಾರಿಯ ಬಿಗ್ ಬಾಸ್ ನಡೆಯುವ ಸ್ಥಳವೂ ಬದಲಾವಣೆಯಾಗಿದೆ. ತಾವರೆಕೆರೆಯ ದೊಡ್ಡ ಆಲದ ಮರದ ನಡುವೆ ಈ ಬಾರಿಯ ಬಿಗ್ ಬಾಸ್ ನಡೆಯಲಿದೆ. ಅದಕ್ಕಾಗಿ ಹಲವು ದಿನಗಳಿಂದ ಸಾಕಷ್ಟು ತಯಾರಿ ನಡೆಸಿದ್ದಾರೆ. ಈಗ ಮನೆಯೂ ಸಿದ್ಧವಾಗಿದೆ. ಸ್ಪರ್ಧಿಗಳು ಹೋಗುವುದು ಒಂದೇ ಬಾಕಿ ಇರೋದು.

ಬಿಗ್ ಬಾಸ್ ಧ್ವನಿಯಲ್ಲಿ ಬದಲಾವಣೆ

ಮನೆ ರೆಡಿಯಾದ ವಿಡಿಯೋ ಹಂಚಿಕೊಂಡಿರುವ ಕಲರ್ಸ್ ಕನ್ನಡ, ಅದರಲ್ಲಿ ಬಿಗ್ ಬಾಸ್ ನ ಧ್ವನಿ ಬದಲಾಗಿರುವುದು ಗೊತ್ತಾಗುತ್ತದೆ. ಇದನ್ನು ಗಮನಿಸಿದವರು ಧ್ವನಿ ಚೇಂಜ್ ಬಗ್ಗೆಯೇ ಕಮೆಂಟ್ಸ್ ಹಾಕುತ್ತಿದ್ದಾರೆ. ಇನ್ನು ಬಿಗ್ ಬಾಸ್ ಎಂದ ಕೂಡಲೇ ಅಶರೀರ ವಾಣಿಯೇ ಹೈಲೈಟ್.

ಆ ಬಿಗ್ ಬಾಸ್‌ನ ವಾಯ್ಸ್ ಕೇಳಿ ಕೇಳಿನೆ ಸಾಕಷ್ಟು‌ಜನರಿಗೆ ಕುತೂಹಲ ಮೂಡಿದೆ. ಆ ಬಿಗ್ ಬಾಸ್ ಯಾರಿರಬಹುದು ಎಂಬ ಪ್ರಶ್ನೆ ಕಾಡಿದೆ. ಆ ವಾಯ್ಸ್ ಕೇಳೋಕೆನೆ ಚೆಂದ. ಕಿವಿಗೆ ಹಿತವೆನಿಸುತ್ತೆ, ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟರ್ ಇದ್ದಂತೆ. ಆದರೆ ಈ ಬಾರಿ ವಾಯ್ಸ್ ಬದಲಾಗುವ ಮುನ್ಸೂಚನೆ ಕೊಟ್ಟಂತೆ ಆಗಿದೆ.

Bigg Boss Kannada Season 10
Image Credit: Indiantelevision

ಬಿಗ್ ಬಾಸ್ ಕಣ್ಣಿನ ರೂಪದಲ್ಲಿ ಬದಲಾವಣೆ

ಬಿಗ್ ಬಾಸ್‌ನಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದು ಕಣ್ಣು‌ . ಈ ಬಾರಿ ಕಣ್ಣನ್ನು ಬದಲಾಯಿಸಿಕೊಂಡಿದೆ. ಮೊದಲಿದ್ದ ಮೀಡಿಯಂ ಕಣ್ಣು ಹೋಗಿ ಈಗ ದೊಡ್ಡ ಕಣ್ಣು ಬಂದಿದೆ. ಅದೆಲ್ಲಿ ಬಣ್ಣವನ್ನು ಬದಲಾಯಿಸಿದೆ. ಹಳದಿ ಮತ್ತು ಗ್ರೇ ಕಲರ್ ಕಾಂಬಿನೇಷನ್‌ನಲ್ಲಿ ಈ ಕಣ್ಣು ಎಲ್ಲರ ಆಕರ್ಷಣೆ ಮಾಡುತ್ತಿದೆ. ಇನ್ನು ಸ್ಪರ್ಧಿಗಳ ಬೆಡ್‌ಗಳು ಈ ಬಾರಿ ನೀಲಿ ಮತ್ತು ಹಸಿರು ಬಣ್ಣದಲ್ಲಿದೆ. ಕಳೆದ ಬಾರಿ ಎಲ್ಲೋ ಕಲರ್ ಬೆಡ್ ಶೀಟ್‌ಗಳು ಇದ್ದವು. ಹೀಗೆ ಹಲವಾರು ಬದಲಾವಣೆಗಳ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುತ್ತಿದೆ.

Leave A Reply

Your email address will not be published.