Bigg Boss: ಲೀಕ್ ಆಯಿತು ಬಿಗ್ ಬಾಸ್ ಮನೆಯ ಒಳಗೆ ಸ್ಪರ್ಧಿಗಳ ವಿವರ, ಇನ್ನೇನು ಕೆಲವೇ ದಿನಗಳಲ್ಲಿ ಆರಂಭ.
ಬಹಳ ಕಾತುರದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 10 ರ ಸೆಲೆಬ್ರೆಟಿಗಳು ಇವರೇ.
Bigg Boss Kannada Season 10: ಜನಮೆಚ್ಚಿದ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮ ಈ ಸಲವು ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ನೆಡೆಯಲಿದೆ. ಈಗಾಗಲೇ ಕಲರ್ಸ್ ಕನ್ನಡ ಬಿಗ್ಬಾಸ್ ಪ್ರೋಮೋ ರಿಲೀಸ್ ಮಾಡಿದ್ದು, ಬಿಗ್ಬಾಸ್ ಸೀಸನ್ 10 ನ್ನು ಜನ ಹಬ್ಬವಾಗಿಯೇ ನೋಡುತ್ತಿದ್ದಾರೆ. ನೂರು ದಿನ ನಡೆಯುವ ಈ ಹಬ್ಬಕ್ಕೆ, ಜನ ಕಾತುರದಿಂದ ಕಾಯುತ್ತಿದ್ದಾರೆ. ಹ್ಯಾಪಿ ಬಿಗ್ಬಾಸ್ ಅಂದುಕೊಂಡೇ ಹಬ್ಬದ ಸಂಭ್ರಮ ಶುರು ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 10 ರ ಸೆಲೆಬ್ರೆಟಿಗಳು ಯಾರಿರಬಹುದು
ತುಂಬಾ ಸಮಯದಿಂದ ಯಾರು ಬಿಗ್ ಬಾಸ್ ಗೆ ಬರುತ್ತಾರೆ ಎಂಬ ಪ್ರಶ್ನೆ ಇದ್ದು, ಈ ಸೀಸನ್ಗೆ ಬರುವ ಸ್ಪರ್ಧಿಗಳ ಬಗ್ಗೆ ಕೆಲವು ಮಾಹಿತಿ ಸಿಕ್ಕಿದೆ ಮತ್ತು ಇವರೇ ಈ ಬಾರಿ ದೊಡ್ಡ ಮನೆಗೆ ಲಗ್ಗೆ ಇಡುತ್ತಿದ್ದಾರೆಂದು ಹೇಳಲಾಗಿದೆ. ಪ್ರತೀವರ್ಷ ಬಿಗ್ಬಾಸ್ ಮನೆಗೆ ಸೋಶಿಯಲ್ ಮೀಡಿಯಾ ಸ್ಟಾರ್ಸ್, ಯೂಟ್ಯೂಬರ್ಸ್, ಧಾರಾವಾಹಿ ನಟ-ನಟಿಯರು, ಸಾಮಾಜಿಕ ಹೋರಾಟಗಾರರು, ಸಿನಿಮಾ ನಟ ನಟಿಯರು, ಗುರೂಜಿ ಸೇರಿ, ಕೆಲ ಹಿರಿಯ ಕಲಾವಿದರು ಕೂಡ ಈ ಶೋಗೆ ಬರ್ತಾರೆ. ಅದೇ ರೀತಿ ಈ ಸಲದ ಬಿಗ್ಬಾಸ್ಗೂ ಸೆಲೆಬ್ರಿಟಿಗಳ ಪಟ್ಟಿ ರೆಡಿಯಾಗಿದೆ.
ಬಿಗ್ ಬಾಸ್ ಮನೆಯ ಭರ್ಜರಿ ತಯಾರಿ
ಪ್ರತೀ ಬಾರಿ ಬೇರೆ ಬೇರೆ ರೀತಿಯ ಥೀಮ್ನಲ್ಲಿ ಬಿಗ್ಬಾಸ್ ಮನೆ ರೆಡಿಯಾಗತ್ತೆ. ಅದೇ ರೀತಿ, ಈ ಬಾರಿ ಯಾವ ಥೀಮ್ ಇಟ್ಕೊಂಡು ಮನೆ ರೆಡಿ ಮಾಡ್ತಾರೆ ಅನ್ನೋ ಕುತೂಹಲವೂ ಎಲ್ಲರಲ್ಲಿ ಮನೆ ಮಾಡಿದೆ. ತಾವರೆಕೆರೆ ಮತ್ತು ದೊಡ್ಡ ಆಲದ ಮರದ ಮಧ್ಯ ಇರುವ ಜಾಗದಲ್ಲಿ ಬಿಗ್ಬಾಸ್ ಮನೆ ರೆಡಿಯಾಗಿದ್ದು, ಅಕ್ಟೋಬರ್ ತಿಂಗಳಿಂದ ಬಿಗ್ಬಾಸ್ ಸೀಸನ್ 10 ಶುರುವಾಗಲಿದ್ದು, 16 ಸ್ಪರ್ಧಿಗಳು ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.
ಜಿಯೋ ಸಿನಿಮಾದಲ್ಲಿ ಬಿಗ್ಬಾಸ್ ಸೀಸನ್ 10ರ ಲೈವ್ ಪ್ರಸಾರ
ಇನ್ನು ಇಡೀ ದಿನ ಬಿಗ್ಬಾಸ್ ಮನೆಯಲ್ಲಿ ಏನಾಗತ್ತೆ ಅನ್ನೋದನ್ನ ನೋಡುವ ಕುತೂಹಲ ಹಲವರಲ್ಲಿರತ್ತೆ. ಅದಕ್ಕಾಗಿ ಜಿಯೋ ಸಿನಿಮಾದಲ್ಲಿ ಬಿಗ್ಬಾಸ್ ಸೀಸನ್ 10ರ ಲೈವ್ ಪ್ರಸಾರ ಮಾಡುವುದಕ್ಕೆ ಕಲರ್ಸ್ ಕನ್ನಡ ಸಜ್ಜಾಗಿದೆ.
ಇವರೇ ಬಿಗ್ ಬಾಸ್ ಸೀಸನ್ 10 ರ ಸೆಲೆಬ್ರೆಟಿಗಳು
ಇನ್ನು ಯಾರ್ಯಾರು ಬಿಗ್ಬಾಸ್ಗೆ ಬರ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ನೋಡುವುದಾದರೆ ನಾಗಿನಿ ಪಾರ್ಟ್ 2 ನಟಿ ನಮೃತಾ ಗೌಡ, ನಟ ನಿನಾದ, ಭೂಮಿಕಾ ಬಸವರಾಜ್, ಬಿಂದು ಗೌಡ, ವರ್ಷಾ ಕಾವೇರಿ, ಬುಲೆಟ್ ಪ್ರಕಾಶ್ ಮಗ ರಕ್ಷ್, ನಟಿ ರೇಖಾ, ನಟ ರಾಜೇಶ್ ಧ್ರುವ, ನಟ ಸುನೀಲ್ ರಾವ್ ಮತ್ತು ಮೇಘಾ ಶೆಟ್ಟಿ ಬಿಗ್ಬಾಸ್ ಸೀಸನ್ 10ಕ್ಕೆ ಬರ್ತಾರೆ ಅಂತಾ ಹೇಳಲಾಗಿದೆ. ಇನ್ನು ಕಾರ್ಯಕ್ರಮ ಆರಂಭ ಆದ ನಂತರ ಯಾರ್ಯಾರು ಬಂದಿದ್ದರೆಂದು ಕಾದು ನೋಡಬೇಕಾಗಿದೆ.