Bigg Boss: ಲೀಕ್ ಆಯಿತು ಬಿಗ್ ಬಾಸ್ ಮನೆಗೆ ಬರುವ ಮೊದಲ ಸ್ಪರ್ಧಿಯ ಹೆಸರು, ಇವರೇ ಮೊದಲ ಸ್ಪರ್ಧಿ.

ಬಿಗ್ ಬಾಸ್ ಸೀಸನ್ 10 ರ ಮೊದಲ ಸ್ಪರ್ಧಿಯ ಹೆಸರು ರಿವೀಲ್.

Bigg Boss Kannada Season 10 First Contestant: ಕಲರ್ಸ್ ಕನ್ನಡದಲ್ಲಿ ಧಾರಾವಾಹಿಗಳ ತಂಡದವರೆಲ್ಲ ಒಂದೆಡೆ ಸೇರಿ ಅದ್ದೂರಿಯಾಗಿ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ನಡೆಸಿದ್ದಾರೆ. ಹಲವು ರೀತಿಯ ಮನರಂಜನೆ ಕಾರ್ಯಕ್ರಮಗಳು ಕೂಡ ಇತ್ತು. ಈ ವೇದಿಕೆ ಮೇಲೆ ಹೊಸ ಘೋಷಣೆ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ.

ಅಕ್ಟೋಬರ್ 8ರಿಂದ ಹೊಸ ಸೀಸನ್ ಆರಂಭ ಆಗುವ ಬಗ್ಗೆ ಘೋಷಣೆ ಆಗಿದೆ. ಇದರ ಜೊತೆಗೆ ಬಿಗ್ ಬಾಸ್ (Bigg Boss) ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಈಗಾಗಲೇ ಅನೇಕ ಹೆಸರುಗಳು ಹರಿದಾಡಿವೆ. ಆದರೆ, ಯಾವುದೂ ಅಧಿಕೃತವಾಗಿಲ್ಲ. ಅಧಿಕೃತ ಪಟ್ಟಿ ಸಿಗೋಕೆ ಅಕ್ಟೋಬರ್ 8ರ ರಾತ್ರಿವರೆಗೆ ಕಾಯಲೇಬೇಕು. ಈ ಮಧ್ಯೆ ಒಬ್ಬರ ಹೆಸರನ್ನು ಅಧಿಕೃತ ಮಾಡಲಾಗಿದೆ. ಅದೂ ‘ಅನುಬಂಧ ಅವಾರ್ಡ್ಸ್’ ವೇದಿಕೆ ಮೇಲೆ. ಆ ಬಗ್ಗೆ ಇಲ್ಲಿದೆ ವಿವರ.

charlie in bigg boss
Image Credit: Filmibeat

ಬಿಗ್ ಬಾಸ್ ಸೀಸನ್ 10 ರಲ್ಲಿ ವಿಶೇಷ ಸ್ಪರ್ಧಿಯ ಆಗಮನ

‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ‘777 ಚಾರ್ಲಿ’ ಧಾರಾವಾಹಿ ನಿರ್ದೇಶಕ ಕಿರಣ್ ರಾಜ್ ಅವರು ‘ಅನುಬಂಧ’ ವೇದಿಕೆ ಏರಿದ್ದರು. ಈ ವೇಳೆ ಮಾತನಾಡಿದ ಅನುಪಮಾ ಗೌಡ ಈ ಬಗ್ಗೆ ಘೋಷಣೆ ಮಾಡಿದರು. ‘ಚಾರ್ಲಿ ಸಿನಿಮಾದಲ್ಲಿ ಮಿಂಚಿದರು. ಈಗ ಬಿಗ್ ಬಾಸ್​ಗೆ ಬರ್ತಿದಾರೆ’ ಎಂದು ಹೇಳಲಾಯಿತು. ಈ ವಿಚಾರ ಕೇಳಿ ಎಲ್ಲರೂ ಅಚ್ಚರಿಗೊಂಡರು.

‘ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು. ಚಾರ್ಲಿ ಬಿಗ್ ಬಾಸ್​ಗೆ ಬರ್ತಿದಾಳೆ’ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು ಅನುಪಮಾ ಗೌಡ. ‘ಬಿಗ್ ಬಾಸ್​ಗೆ ಟಾರ್ಚರ್ ಕೊಟ್ಟು ಬಾ. ಕೆಲವೊಂದು ರೂಲ್ಸ್ ಇದೆ. ಬಿಗ್ ಬಾಸ್ ಹಾಡು ಹಾಕಿದಾಗ ಎದ್ದೇಳಬೇಕು. ಟಾಸ್ಕ್​ ಕೊಟ್ರೆ ಮಾಡಬೇಕು. ಟಾಸ್ಕ್ ಮಾಡಿದ್ರೆ ಮಾತ್ರ ಲಕ್ಷುರಿ ಬಜೆಟ್ ಸಿಗೋದು. ಲಕ್ಷುರಿ ಬಜೆಟ್ ಸಿಕ್ಕಿದ್ರೆ ಮಾತ್ರ ನಿಂಗೆ ಮೂಳೆ ಸಿಗೋದು’ ಎಂದರು ಅನುಪಮಾ.

ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು

ಬಿಗ್ ಬಾಸ್ ಆರಂಭವಾಗಿ ಈಗ 10 ನೇ ಸೀಸನ್ ಗೆ ಬಂದು ತಲುಪಿದೆ. ಹಲವು ಗಣ್ಯರು, ನಟ ನಟಿ, ಸೆಲೆಬ್ರೆಟಿಗಳು ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದಾರೆ. ಈಗ ಮೊದಲನೇ ಬಾರಿಗೆ ಚಾರ್ಲಿ ಎಂಬ ಮೂಕ ಜೀವಿ ಭಾಗವಹಿಸುತ್ತಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ನಲ್ಲಿಇನ್ನು ಕಾದು ನೋಡಬೇಕಿದೆ ಚಾರ್ಲಿಯಾ ಆಟ.

Leave A Reply

Your email address will not be published.