Actress Siri: ಈ ಒಂದು ಕಾರಣಕ್ಕೆ ಇನ್ನು ಕೂಡ ಮದುವೆಯಾಗಿಲ್ಲ ಬಿಗ್ ಬಾಸ್ ಸ್ಪರ್ಧಿ ಸಿರಿ.

ಮದುವೆ ಆಗದೆ ಇರಲು ನಿರ್ದಿಷ್ಟ ಕಾರಣವನ್ನು ಬಿಗ್ ಮನೆಯಲ್ಲಿ ಬಿಚ್ಚಿಟ್ಟ ಸಿರಿ.

Bigg Boss Kannada Season 10 Siri: ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ಪ್ರಾರಂಭವಾಗಿ ಎಲ್ಲಾ ಸ್ಪರ್ಧಿಗಳ ಪರಿಚಯವೂ ಆಯಿತು. ಬಿಗ್ ಬಾಸ್ ಅಂದ ಮೇಲೆ ಅದರಲ್ಲಿ ಭಾಗವಹಿಸುವವರು ವಿಭಿನ್ನ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳು ಹಾಗು ಹಲವರು ಜೀವನದಲ್ಲಿ ಏಳು ಬೀಳುಗಳನ್ನು ನೋಡಿದವರಾಗಿದ್ದಾರೆ.

ಈಗ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಎರಡು ವಾರ ಆಗಿದಷ್ಟೇ ಅಷ್ಟರಲ್ಲೇ ನಟಿ ಸಿರಿ ಅವರ ವಯಕ್ತಿಕ ವಿಚಾರ ಹೊರಬಿದ್ದಿದೆ. ಸ್ವತಃ ಸಿರಿ ಅವರೇ ತಾನು ಯಾಕೆ ಇನ್ನು ವಿವಾಹ ಆಗಿಲ್ಲ ಎನ್ನುದರ ಬಗ್ಗೆ ಹೇಳಿಕೊಂಡಿದ್ದಾರೆ.

Bigg Boss Kannada Season 10 Siri
Image Credit: Filmibeat

ಸಿರಿಯವರ ಬದುಕಿನ ಸಾರಾಂಶ

ಸಿರಿ ಹಲವು ಸಿನಿಮಾ ಹಾಗು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ತನ್ನ ಅಭಿನಯದ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ರಂಗೋಲಿ ಎನ್ನುವ ಧಾರಾವಾಹಿ ಮೂಲಕ ಮನೆ ಮಾತಾದ ಈಕೆ ತದನಂತರ ಅನೇಕ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಹಲವು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಹಲವು ಸಮಯ ಬ್ರೇಕ್ ತೆಗೆದುಕೊಂಡ ಇವರು ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ

ಸಿರಿ ಇನ್ನು ಮದುವೆ ಆಗದೆ ಇರಲು ಕಾರಣ

ಮದುವೆ ಅನ್ನುವುದು ಪ್ರತಿಯೊಬ್ಬರ ಮನಸ್ಥಿತಿಗೆ ಸಂಬಂಧಿಸಿರುವುದು. ಮದುವೆ ಬಗ್ಗೆ ಕೆಲವರಿಗೆ ಉತ್ತಮ ಅಭಿಪ್ರಾಯ ಇದ್ದರೆ, ಇನ್ನು ಕೆಲವರು ಮದುವೆ ಬಗ್ಗೆಆಸಕ್ತಿಯನ್ನು ಹೊಂದಿರುವುದಿಲ್ಲ. ಮದುವೆ ವಿಚಾರವಾಗಿ ಎಲ್ಲಾರ ಬಳಿ ಶೇರ್ ಮಾಡಲು ಸಾಧ್ಯವಿಲ್ಲ ಆದ್ರೆ ಬಿಗ್ ಬಾಸ್ ಸ್ಪರ್ಧಿ ಸಿರಿ ಅವರು ತನ್ನ ಪ್ರೆಂಡ್ ಗೌರೀಶ್ ಬಳಿ ತಾನು ಯಾಕೆ ಇನ್ನು ಮದುವೆ ಆಗಿಲ್ಲ ಎನ್ನುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

Actress Siri Latest News
Image Credit: Filmibeat

“ಜಗಳಗಳು ಬೆಳಗ್ಗೆ ಶುರುವಾಗಿ ರಾತ್ರಿಗೆ ಎಂಡ್ ಆಗಿ ಬಿಡಬೇಕು. ಆದರೆ, ಅದೇಗೆ ಆ ರೀತಿ ಅಡ್ಜೆಸ್ಟ್ ಆಗುವುದು. ನನ್ನ ಸ್ನೇಹಿತರು ಇದ್ದಾರೆ. ದಿನ ಕಳೆದಂತೆ ಅವೆಲ್ಲಾ ಕಾಮನ್ ಆಗಿ ಹೋಗುತ್ತದೆ. ನಾನು ಯಾಕೆ ಮದುವೆಯಾಗಿಲ್ಲ ಅಂದ್ರೆ, ಕಾಂಪ್ರಮೈಸ್ ಆಗಲೇಬೇಕು. ಮದುವೆಯಾಗಲಿ, ರಿಲೇಷನ್ ಶಿಪ್ ಅಂತ ಬಂದಾಗ ಕಾಂಪ್ರಮೈಸ್ ಆಗಬೇಕು. ಅದು ನನಗೆ ಇಷ್ಟ ಇಲ್ಲ. ಸುಮ್ಮನೆ ಅವನ ಜೀವನವೂ ಹಾಳು, ನನ್ನ ಜೀವನವೂ ಹಾಳು” ಎಂದಿದ್ದಾರೆ. ಇದೆ ಒಂದು ಕಾರಣಕ್ಕೆ ಸಿರಿ ಇನ್ನು ಮದುವೆ ಆಗಿಲ್ಲ ಎನ್ನುವುದು ಬಹಳ ಅಚ್ಚರಿಯ ವಿಷಯವಾಗಿದೆ ಎನ್ನಲಾಗಿದೆ .

ಸಿರಿ ಇನ್ನು ಮದುವೆ ಆಗಿಲ್ಲವೇ ?

ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ ನಟಿ ಸಿರಿ ಇನ್ನು ಮದುವೆ ಆಗಿಲ್ಲವೇ ಎಂದು ತಿಳಿದ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಸಿರಿ ಮದುವೆ ವಿಚಾರವಾಗಿ ಟ್ರೋಲಿಗರು ಟ್ರೊಲ್ ಸಹ ಮಾಡಿದ್ದಾರೆ. ಬಿಗ್ ಬಾಸ್‌ ಗೆ ಬಂದ ಮೇಲೆ ಅದ್ಯಾವಾಗ ಸಿರಿಗೆ ಮದುವೆಯಾಗಿಲ್ಲ ಎಂಬುದು ತಿಳಿಯಿತೋ, ಆಗಿನಿಂದ ಸಕಾರಾತ್ಮಕ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. “ನೋಡ್ರೋ ನಮ್ಮ ನಟಿಗೆ ಇನ್ನು ಮದುವೆಯಾಗಿಲ್ಲವಂತೆ” ಎಂದು ಪಿಂಕ್ ಬಣ್ಣದ ಸೀರೆಯ ಫೋಟೋ ಹಾಕಿ, ಟ್ರೋಲ್ ಮಾಡಿದ್ದರು. ಅಷ್ಟೇ ಅಲ್ಲದೆ ಸಿರಿಗೆ ಇನ್ನು ಮದುವೆ ಆಗಿಲ್ಲ ಎಂದು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Leave A Reply

Your email address will not be published.