Vinay Gowda: ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಮಾನವಾಗುವ ಮಾತನಾಡಿದ ವಿನಯ್, ಕೋಪಗೊಂಡ ಜನರು.

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಮಾತಿನಿಂದ ಯುದ್ಧ ಆರಂಭ, ಸಾಮಾಜಿಕ ಜಾಲತಾಣದಲ್ಲಿ ವಿನಯ್ ವಿರುದ್ಧ ಆಕ್ರೋಶ

Bigg Boss Kannada Season 10 Vinay Gowda: ಬಿಗ್ ಬಾಸ್ (Bigg Boss) ಕಾರ್ಯಕ್ರಮದಲ್ಲಿ ಟಾಸ್ಕ್ ಇದ್ದ ದಿನ ಜಗಳ ಕಾಮನ್ ಆಗಿ ಹೋಗಿದೆ. ಬಿಗ್ ಮನೆಯಲ್ಲಿ ಮಾತನಾಡುವ ಮುನ್ನ 10 ಸಲ ಯೋಚಿಸುವುದು ಬಹಳ ಮುಖ್ಯ ಆಗಿದೆ. ಯಾಕೆಂದರೆ ನಮ್ಮ ಮಾತಿನಿಂದ ಬೇರೆಯವರಿಗೆ ಅವಮಾನ ಆಗಬಾರದು ಹಾಗು ಈ ಷೋ ಅನ್ನು ಸಾವಿರಾರು ಮಂದಿ ನೋಡುತ್ತಿರುತ್ತಾರೆ ಅವರಿಗೂ ಕೂಡ ಅದರಿಂದ ನೋವಾಗಬಾರದಾಗಿದೆ.

ವಿನಯ್ ಗೌಡ ಷೋ ಆರಂಭ ಆದಾಗಿನಿಂದ ಗಟ್ಟಿಯಾಗಿ ಮಾತಾಡುವುದು, ಜಬರ್ದಸ್ತಿ ಮಾಡುವುದು ಮಾಡುತ್ತಿದ್ದಾರೆ. ಈ ವಿಷಯವಾಗಿ ನಟ ಸುದೀಪ್ ಏನು ಮಾತಾಡಿಲ್ಲ ಎನ್ನುವುದು ಮೊದಲೇ ವೀಕ್ಷಕರಲ್ಲಿ ಬೇಸರ ಉಂಟು ಮಾಡಿದೆ ಆದ್ರೆ ಈಗ ಮತ್ತೆ ವಿನಯ್ ಗೌಡ ಅವರ ಮಾತಿನಿಂದ ಎಲ್ಲರಿಗೂ ಬೇಜಾರಾಗಿದೆ . 

Vinay Gowda
Image Credit: TV9kannada

ಹೆಣ್ಣು ಮಕ್ಕಳ ಬಳೆಯನ್ನು ಹೋಲಿಸಿ ಮಾತಾಡಿದ ವಿನಯ್

ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಸಂಪ್ರದಾಯಕ್ಕೆ ತಕ್ಕಂತೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ರೀತಿಯಲ್ಲಿ ಸೆಟ್ ನಿರ್ಮಾಣ ಮಾಡಿ ಹಳ್ಳಿಯಲ್ಲಿ ನಡೆಯುವ ಚಟುವಟಿಕೆಗಳನ್ನೇ ಆಯ್ದುಕೊಂಡು ಟಾಸ್ಕ್ ನೀಡಲಾಗುತ್ತಿದೆ.

ಮಡಿಕೆ ಮಾಡುವ ಟಾಸ್ಕ್​​ನ ಸ್ಪರ್ಧಿಗಳಿಗೆ ಮೊದಲು ನೀಡಲಾಗಿದೆ. ಈ ವೇಳೆ ವಿನಯ್ ಆಡಿದ ಮಾತು ಸಂಗೀತಾ ಕೋಪಕ್ಕೆ ಕಾರಣ ಆಗಿದೆ ‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಸಿಟ್ಟಾದರು. ‘ಬಳೆ ಹಾಕ್ಕೊಂಡ್ರೆ ಏನಿವಾಗ? ಏನೋ ಇವಾಗ’ ಎಂದು ಸಂಗೀತಾ ಪ್ರಶ್ನೆ ಮಾಡಿದರು. ಇಡೀ ಮನೆ ರಣರಂಗವಾಗಿ ಬದಲಾಯಿತು.

bigg boss kannada season 10 vinay gowda
Image Credit: TV9kannada

ಮಿತಿ ಮೀರಿ ಮಾತಾಡಿದ ವಿನಯ್ ಗೌಡ
‘ಗಂಡಸ್ತರ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದು ವಿನಯ್ ಕೂಗಾಡಿದರು ಈಗ ವಿನಯ್ ಅವರ ಮಾತು ಎಲ್ಲೆ ಮೀರುತ್ತಿದೆ. ಬಳೆ ಹಾಕಿದವರ ಕೈಯಲ್ಲಿ ಏನೂ ಆಗಲ್ಲ ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರು ಬಳೆ ಹಾಕುತ್ತಾರೆ. ಈ ರೀತಿ ಬಳೆ ಹಾಕಿದ ಅನೇಕ ಮಹಿಳೆಯರು ಹಲವು ಸಾಧನೆ ಮಾಡಿದ್ದಾರೆ. ಆದರೆ, ವಿನಯ್ ಹೇಳಿರುವ ಮಾತು ಬೇರೆಯದೇ ಅರ್ಥ ನೀಡಿದೆ. ವಿನಯ್ಅವರು ಮಾತನ್ನು ಹಿಂಪಡೆದು, ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

Leave A Reply

Your email address will not be published.