Bigg Boss: ಫಿಕ್ಸ್ ಆಯಿತು ಬಿಗ್ ಮನೆಗೆ ಬರುವ ಸ್ಪರ್ಧಿಗಳ ಪಟ್ಟಿ, ಅದ್ದೂರಿಯಾಗಿ ಮನೆಗೆ ಬರಲಿದ್ದಾರೆ ಈ ಸ್ಪರ್ಧಿಗಳು.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಗಳ ಪಟ್ಟಿ ವೈರಲ್,
Bigg Boss Kannada Season 10: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಕಲರ್ಸ್ ಕನ್ನಡದ ಬಿಗ್ ಬಾಸ್ (Bigg Boss) ಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ‘ಬಿಗ್ ಬಾಸ್’ ಕಾರ್ಯಕ್ರಮದ ಆಯೋಜಕರು ಕಳೆದ ಸೀಸನ್‌ನಿಂದ ಬಿಗ್ ಬಾಸ್ ಕನ್ನಡ ಒಟಿಟಿ ಬಳಿಕ ಸೀಸನ್ 9 ಪ್ರಾರಂಭಿಸಿದರು. ಹಾಗಾಗಿ ಈ ಬಾರಿಯೂ ಬಿಗ್ ಬಾಸ್ ಸೀಸನ್ 10 ಒಟಿಟಿ ಸೀಸನ್ 2 ರ ನಂತರ ನಡೆಯಲಿದೆ ಎನ್ನಲಾಗಿದೆ.
ಪ್ರಸ್ತುತ ಕಲರ್ಸ್ ಕನ್ನಡ ಅನುಬಂಧ ಪ್ರಶಸ್ತಿಗೆ ತಯಾರಿ ನಡೆಸುತ್ತಿದೆ. ಅನುಬಂಧ ಅವಾರ್ಡ್ (Anubandha Awards) ಶೂಟಿಂಗ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಕಲರ್ಸ್ ಕನ್ನಡ (Colors Kannada) ನಿರ್ಧರಿಸಿದೆ. ಇದಾದ ನಂತರ ಸೆಪ್ಟೆಂಬರ್ ಅಂತ್ಯಕ್ಕೆ ಬಿಗ್ ಬಾಸ್ ಶುರುವಾಗಲಿದೆ ಎನ್ನಲಾಗಿದೆ.

ಕಳೆದ ಸೀಸನ್ ನಂತೆ ಈ ಸೀಸನ್ ಕೊಡ OTT ಇಂದ ಆರಂಭ
ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಕನ್ನಡಿಗರೂ ಕಾರ್ಯಕ್ರಮದ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.ಈ ಬಾರಿಯೂ ಮೊದಲು OTT ಸೀಸನ್ ನಂತರ ಟಿವಿ ಶೋನ 10 ನೇ ಸೀಸನ್ ಪ್ರಾರಂಭವಾಗಲಿದೆ ಎನ್ನಲಾಗಿದೆ. ಅದರಂತೆ ಒಟಿಟಿ ಸೀಸನ್-2 ಸೆಪ್ಟೆಂಬರ್ 30ರಂದು ಆರಂಭವಾಗಲಿದೆ ಎನ್ನಲಾಗಿದೆ.
ಈ ಸಲದ ಬಿಗ್ ಸೆಲೆಬ್ರೆಟಿಗಳು
ಬಿಗ್‌ಬಾಸ್ ಆಟಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್‌ಗೆ ಬರುವ ಸಾಧ್ಯತೆ ಇದೆ ಎನ್ನುವ ಕೊತುಹಲ ಎಲರಲ್ಲೂ ಇದೆ.

ಕಿರುತೆರೆಯ ಜೊತೆ ಜೊತೆಯಲ್ಲಿ ಧಾರಾವಾಹಿಯ ಜನಪ್ರಿಯ ನಟಿ ಮೇಘಾ ಶೆಟ್ಟಿ, ಎಕ್ಸ್‌ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನೀಲ್ ರಾವ್, ನಾಗಿಣಿ 2 ಧಾರಾವಾಹಿಯ ಜೋಡಿ ನಿನಾದ್ ಹರಿತ್ಸ ಮತ್ತು ನಮ್ರತಾ ಗೌಡ, ದಿವಂಗತ ಬುಲೆಟ್ ಹಾಸ್ಯ ನಟ ಪ್ರಕಾಶ್ ಅವರ ಪುತ್ರ ರಕ್ಷಕ್, ರ‍್ಯಾಪರ್ ಸಿಂಗರ್ ಇಶಾನಿ, ಹುಚ್ಚ ಸಿನಿಮಾ ನಟಿ ರೇಖಾ, ನಟಿ ಆಶಾ ಭಟ್ ಮತ್ತು ರೀಲ್‌ಗಳಲ್ಲಿ ಖ್ಯಾತಿ ಪಡೆದಿರುವ ಭೂಮಿಕಾ ಬಸವರಾಜ್ ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅದೇನೇ ಇರಲಿ, ಆಡಿಷನ್ ನಡೆದು ಶೋ ಆರಂಭವಾದ ನಂತರ ದೊಡ್ಮನೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಸಲದ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಹೆಚ್ಚಿನ ಕುತೂಹಲ ಇದ್ದು ಸೀಸನ್ 10 ಏನೆಲ್ಲ ಹೊಸ ವೈಶಿಷ್ಟತೆಯೊಂದಿಗೆ ತೆರೆ ಮೇಲೆ ಬರಲಿದೆ ಎಂದು ಕಾತುರದಿಂದ ಕಾಯಬೇಕಿದೆ.