Bigg Boss: ಅ 8 ರಿಂದ ಬಿಗ್ ಬಾಸ್ ಸೀಸನ್ 10 ಆರಂಭ, ಇಲ್ಲಿದೆ ನೋಡಿ ಬಿಗ್ ಬಾಸ್ ಮನೆಗೆ ಬರುವ 17 ಸ್ಪರ್ಧಿಗಳ ಹೆಸರು.
ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಗಳ ಪಟ್ಟಿ ಲೀಕ್, ಇವರೇ ನೋಡಿ ಆ ಸೆಲೆಬ್ರೆಟಿಗಳು.
Bigg Boss Season 10 Contestents Name: ಕಲರ್ಸ್ ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 10 (Bigg Boss Kannada) ಪ್ರಾಂಭವಾಗಲಿದ್ದು, ಈಗಾಗಲೇ ಪ್ರೊಮೊ ಮೂಲಕ ಜನರನ್ನು ಆಕರ್ಷಿಸಿದೆ. ಈ ಸಲದ ಸೀಸನ್ ಬಹಳ ವಿಶೇಷತೆಯಿಂದ ಕೂಡಿದೆ ಎನ್ನಲಾಗಿದೆ.ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-10 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ 8 ರಿಂದ ಬಿಗ್ ಬಾಸ್-10 ಆರಂಭವಾಗಲಿದೆ.
ಬಿಗ್ ಬಾಸ್ ಮನೆಗೆ ಬರುವ ಸೆಲೆಬ್ರೆಟಿಗಳ ಬಗ್ಗೆ ಕುತೂಹಲ
ಈಗಾಗಲೇ ಬಿಗ್ ಬಾಸ್ ಪ್ರಾರಂಭವಾಗುತ್ತದೆ ಎಂದು ತಿಳಿಯುತ್ತಿದ್ದಂತೆ ಎಷ್ಟೋ ಸೆಲೆಬ್ರೆಟಿಗಳ ಹೆಸರು ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಆದರೆ ಪಕ್ಕ ಇವರೇ ಬರುತ್ತಾರೆಂದು ಹೇಳಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಬಿಗ್ ಬಾಸ್ ಮನೆಗೆ ಯಾರು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದ್ದು, ಇದೀಗ ಕಂಟೆಸ್ಟೆಂಟ್ ಗಳ ಮಾಹಿತಿ ಹೊರಬಿದ್ದಿದೆ. ಇವರೇ ನೋಡಿ ಬಿಗ್ ಬಾಸ್ ಗೆ ಬರುವ ಸ್ಪರ್ಧಿಗಳು .
ಬಿಗ್ ಬಾಸ್ ನಲ್ಲಿ ಭಾಗವಹಿಸಲು ಬರುವ ಸ್ಪರ್ಧಿಗಳ ಪಟ್ಟಿ
ವಿನಯ್ ಕುಮಾರ್, ಸುನೀಲ್ ನಟ, ನವೀನ್ ಕೃಷ್ಣ ಗಾಯಕ ಮತ್ತು ನಟ, ನಮ್ರತಾ ಗೌಡ ಸೀರಿಯಲ್ ನಟಿ, ರೂಪಾ ರಾಯಪ್ಪ ನಟಿ, ವರ್ಷಾ ಕಾವೇರಿ ಗಾಯಕಿ ಮತ್ತು ನಟಿ, ಬಿಂದುಗೌಡ ಸೋಶಿಯಲ್ ಮೀಡಿಯಾ ಸ್ಟಾರ್, ಸೋಮಣ್ಣ ಮಾಚಿಮಾಡ ನಟ ಮತ್ತು ನಿರೂಪಕ, ಆಶಾ ಭಟ್ ನಟಿ, ಮಿಮಿಕ್ರಿ ಗೋಪಿ, ರೇಖಾ ವೇದವ್ಯಾಸ, ಗಾಯಕಿ ಮತ್ತು ನಟಿ, ಭೂಮಿಕಾ ಬಸವರಾಜ್ ಟಿಕ್ಟಾಕ್ ತಾರೆ, ರೂಪೇಶ್ ಶೆಟ್ಟ ಫಿಟ್ನೆಸ್ ತರಬೇತುದಾರ, ರವಿ ಶ್ರೀವತ್ಸ ನಟ, ತರುಣ್ ಚಂದ್ರ, ಗಾಯಕ ಮತ್ತು ನಟ, ರಾಜೇಶ್ ಧ್ರುವ, ನಟ ಮತ್ತು ರೂಪದರ್ಶಿ, ಸಾನ್ವಿ ಅಯ್ಯರ್ ಗಾಯಕಿ ಮತ್ತು ನಟಿ.
ಈ ಎಲ್ಲಾ ಸೆಲೆಬ್ರೆಟಿಗಳು ಇನ್ನು ಮುಂದೆ ಬಿಗ್ ಬಾಸ್ ನಲ್ಲಿ ಕಾಣ ಸಿಗುತ್ತಾರೆ. ಹಾಗೆ ಹಿಂದಿನಂತೆ ನಟ ಸುದೀಪ್ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಈ ಬಾರಿ ಬಿಗ್ ಬಾಸ್ ಹತ್ತು ಹಲವು ವೈಶಿಷ್ಟಗಳನ್ನು ಹೊಂದಿದೆ ಎನ್ನಲಾಗಿದೆ.