Drone Prathap: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಳಗಳನೆ ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್, ಅಷ್ಟಕ್ಕೂ ಆಗಿದ್ದೇನು…?

ಬಿಗ್ ಬಾಸ್ ಮನೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ ಡ್ರೋನ್ ಪ್ರತಾಪ್

Bigg Boss Season 10 Drone Prathap: ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 10 (Bigg Boss Kannada Season 10) ರ ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಮನೆಯವರು ಕಳುಹಿಸಿದ ಸಿಹಿ ತಿನಿಸುಗಳನ್ನು ಸವಿದು ಸ್ಪರ್ಧಿಗಳು ಖುಷಿ ಪಟ್ಟರು. ಅಷ್ಟೇ ಅಲ್ಲದೇ ಹಾಡು ಹೇಳುವ ಟಾಸ್ಕ್ ಜೊತೆಗೆ ಪಟಾಕಿ ಹಚ್ಚಿ ಖುಷಿಯಿಂದ ಹಬ್ಬ ಆಚರಿಸಿದ್ದರು.

ಹಬ್ಬ ಮುಗಿದ ಮರು ದಿನವೇ ಇನ್ನೊಂದು ಅವಕಾಶ ನೀಡಿದ ಬಿಗ್ ಬಾಸ್ ಮನೆಯವರಿಂದ ಪತ್ರಗಳು ಬಂದಿದೆ ಕೇವಲ ಮೂರೂ ಜನರಿಗೆ ಮಾತ್ರ ಮನೆಯ ಪತ್ರವನ್ನು ಓದುವ ಅವಕಾಶ ಇದೆ ಎಂದು ಹೇಳಿದಾಗ, ಬಿಸಿ ಬಿಸಿ ಚರ್ಚೆ ಪ್ರಾರಂಭ ಆಗುತ್ತದೆ. ಎಲ್ಲರಿಗೂ ಅವರ ಮನೆಯ ಪತ್ರ ಓದುವ ಮನಸ್ಸಾಗುವುದು ಸಹಜ ಆದರೆ ಕೇವಲ ಮೂರೂ ಜನಕ್ಕೆ ಅಂದಾಗ ಸ್ವಲ್ಪ ಗೊಂದಲ ಚರ್ಚೆಗಳು ಪ್ರಾರಂಭ ಆಗಿದೆ.

Bigg Boss Season 10 Drone Prathap
Image Credit: Ain Live News

ಮನೆಯವರ ಪತ್ರ ಬಿಟ್ಟುಕೊಡದ ಸ್ಪರ್ಧಿಗಳು

ಮನೆಯಿಂದ ಪತ್ರ ಬಂದಿದೆ ಎಂದ ಕೂಡಲೇ ಸಂಭ್ರಮ ಪಟ್ಟ ಸ್ಪರ್ಧಿಗಳಿಗೆ ಒಂದು ಶಾಕ್ ಕಾದಿತ್ತು ಅದೇನೆಂದರೆ ಕೇವಲ ಮೂರೂ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಬಿಗ್ ಬಾಸ್ ಹೇಳಿದಾಗ, ತನಿಷಾ ನನ್ನ ಮನೆಯವರು ಬರೆದ ಪತ್ರ ನನಗೆ ಬೇಕು, ಎಲ್ಲರಿಗೂ ಮನೆಯಿಂದ ಊಟ ಬಂದರೆ ನನಗೆ ಮಾತ್ರ ರೆಡಿಮೇಡ್​ ಸ್ವೀಟ್​ ಬಂದಿತ್ತು. ಇದರಿಂದ ಅವರು ಈಗ ಕಣ್ಣೀರು ಹಾಕಿದ್ದು, ತಮಗೇ ಅವಕಾಶ ನೀಡುವಂತೆ ಕೋರಿದರು. ಹಬ್ಬಕ್ಕೆ ನನಗೆ ರೆಡಿಮೇಡ್​ ಸ್ವೀಟ್ಸ್​ ಬಂತು, ನನ್ನ ತಾಯಿ ಮಾಡಿದ ಕೈ ಅಡುಗೆ ತಲುಪಿಲ್ಲ. ನನಗೆ ಅಮ್ಮ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಆಸೆ ಎಂದು ತನಿಷಾ ಕಣ್ಣೀರು ಹಾಕಿದರು.

ಪ್ರತಾಪ್ ಗೆ ತನ್ನ ಅವಕಾಶ ಬಿಟ್ಟು ಕೊಟ್ಟ ನಮ್ರತಾ

ನಮ್ರತಾ ಸರದಿ ಬಂದಾಗ ಪ್ರತಾಪ್ ಅವರಿಗೆ ಅವಕಾಶ ನೀಡುವ, ಅವರು ತನ್ನ ತಂದೆ ತಾಯಿ ಜೊತೆ ಮಾತನಾಡಿ 03 ವರ್ಷಗಳು ಕಳೆದಿದೆ ಎನ್ನುತ್ತಾರೆ . ಆಗ ಮದ್ಯದಲ್ಲಿ ಮಾತನಾಡಿದ ಕಾರ್ತಿಕ್ ಇಲ್ಲ ಅವರಿಗೆ ಮನೆಯವರ ಜೊತೆ ಮಾತನಾಡದೆ ಅಭ್ಯಾಸ ಇದೆ, ನನಗೆ ಅಭ್ಯಾಸ ಇಲ್ಲ ಹಾಗಾಗಿ ನನಗೆ ನನ್ನ ಮನೆಯವರ ಪತ್ರ ಬೇಕು ಎಂದು ಹೇಳುತ್ತಾರೆ . ಅವಾಗ ಪ್ರತಾಪ್ ಅವರ ನೋವು ಕಣ್ಣೀರಾಗಿ ಹೊರ ಬರುತ್ತದೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು ಪ್ರತಾಪ್​ ಅಭಿಮಾನಿಗಳೂ ಭಾವುಕರಾಗಿದ್ದಾರೆ.

Drone Prathap Latest News
Image Credit: Ain Live News

ತನ್ನ ತಂದೆ ತಾಯಿಯನ್ನು ನೆನೆದು ಕಣ್ಣೀರಿಟ್ಟ ಡ್ರೋನ್ ಪ್ರತಾಪ್

ಈ ವಾರ ಫುಲ್ ವರ್ತುರ್ ಸಂತೋಷ್ ಅವರ ಕಣ್ಣೀರು ನೋಡಿದ ವೀಕ್ಷಕರಿಗೆ, ಡ್ರೋನ್ ಪ್ರತಾಪ್ ಅವರ ಅಳು ನೋಡುವ ಅವಕಾಶ ಇದೆ. ಯಾಕೆಂದರೆ ತನ್ನ ತಂದೆ ತಾಯಿ ಪತ್ರ ಬರೆದಿದ್ದಾರೆ ಅನ್ನೋ ಅನುಮಾನ ಇರೋ ಪ್ರತಾಪ್ ಗೆ ಇಲ್ಲಿ ಈ ಅವಕಾಶ ಬಹಳ ಮುಖ್ಯ ಆಗಿದೆ ಎನ್ನಬಹುದು, ಹಾಗಾಗಿ ಪ್ರತಾಪ್ ಅವರು ನನಗೂ ನನ್ನ ತಂದೆ-ತಾಯಿಯನ್ನು ನೋಡಬೇಕು, ನನಗೆ ಗೊತ್ತಾಗಬೇಕು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾರಾ, ಇಲ್ವಾ ಅಂತ ಎಂದು ಬಿಕ್ಕಿ ಬಿಕ್ಕಿ ಅತ್ತರು. ಕೂಡಲೇ ಮನೆಯ ಇತರ ಸದಸ್ಯರು ಸಮಾಧಾನ ಹೇಳಿ, ಧೈರ್ಯ ತುಂಬಿದರು.

Leave A Reply

Your email address will not be published.