Drone Prathap: ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಮೇಲೆ ಕೇಳಿಬಂತು ಬಹುದೊಡ್ಡ ಆರೋಪ, ಬೇಸರದಲ್ಲಿ ಡ್ರೋನ್ ಪ್ರತಾಪ್.

ಬಿಗ್ ಮನೆಯಲ್ಲಿ ದೊಡ್ಡ ಆರೋಪಕ್ಕೆ ಒಳಗಾದ ಡ್ರೋನ್ ಪ್ರತಾಪ್, ವಿನಯ್ ಗೌಡ ಈ ಆರೋಪ ಮಾಡಿದ್ದೂ ಸರಿಯೇ...?

Bigg Boss Season 10 Drone Prathap: ಬಿಗ್ ಬಾಸ್ ಸೀಸನ್ 10 (Bigg Boss Kannada Seaon 10) ಪ್ರಾರಂಭ ಆಗಿ ನಾಲ್ಕು ವಾರಗಳು ಕಳೆಯುತ್ತಿದೆ. ಈ ಮಧ್ಯೆ ಸ್ಪರ್ಧಿಗಳು ಹಲವು ಟಾಸ್ಕ್ ಗಳನ್ನೂ ಆಡಿದ್ದಾರೆ, ಜಗಳವನ್ನು ಮಾಡಿಕೊಂಡಿದ್ದಾರೆ, ಪ್ರೀತಿಯಿಂದ ಹಬ್ಬಗಳನ್ನು ಆಚರಿಸಿಕೊಂಡಿದ್ದಾರೆ. ಆದರೆ ಈ ಮಧ್ಯೆ ಡ್ರೋನ್ ಪ್ರತಾಪ್ ಗೆ (Drone Prathap) ಮಾತ್ರ ಇನ್ನು ಆರೋಪ ಗಳಿಂದ ಮುಕ್ತಿ ಅಂತೂ ಸಿಕ್ಕಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದ ಇಂದಿನ ದಿನದ ತನಕವೂ ಒಂದಲ್ಲ ಒಂದು ವಿಷಯಕ್ಕೆ ಡ್ರೋನ್ ಪ್ರತಾಪ್ ಟೀಕೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಡ್ರೋನ್ ಪ್ರತಾಪ್ ಅವರ ಪರ ಮಾತಾಡಿ ತಪ್ಪು ಸರಿಗಳ ಬಗ್ಗೆ ಚರ್ಚೆಯಲ್ಲಿ ವಿವರಿಸಿ ಸಹ ಹೇಳಿದ್ದಾರೆ.

Drone Prathap Latest News
Image Credit: Filmibeat                                                                                                                                  

ಈ ವಾರ ಟಾಸ್ಕ್ ಅನ್ನು ಚೆನ್ನಾಗಿ ಆಡಿದ ಡ್ರೋನ್ ಪ್ರತಾಪ್

ಕಿಚ್ಚ ಸುದೀಪ್ ಚರ್ಚೆಯಲ್ಲಿ ಬಿಗ್ ಮನೆಯಲ್ಲಿ ಹೇಗೆ ಇರಬೇಕು ಅನ್ನುದರ ಕುರಿತು ಡ್ರೋನ್ ಪ್ರತಾಪ್ ಅವರಿಗೆ ಈಗಾಗಲೆ ಹೇಳಿಕೊಟ್ಟಿದ್ದಾರೆ. ಅದರಂತೆ ಡ್ರೋನ್ ಪ್ರತಾಪ್ ಈ ವಾರ ಟಾಸ್ಕ್ ಅನ್ನು ಚೆನ್ನಾಗಿ ಆಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವರ ಕೊಂಕು ಮಾತಿಗೂ ಎದುರುತ್ತರ ಕೊಟ್ಟ ಸೈ ಆನಿಸಿಕೊಂಡಿದ್ದಾರೆ. ಓಪನ್ ಅಪ್ ಆದ ಪ್ರತಾಪ್ ಅವರನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಅವರ ಮೇಲೆ ಬಿಗ್ ಆರೋಪ

ಬಿಗ್‌ಬಾಸ್‌ ಮನೆಯಲ್ಲಿ ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮ್ರತಾ ಜೊತೆಗೆ ವಿನಯ್ ಗೌಡ ಮಾತನಾಡುತ್ತಿದ್ದರು. ಆ ಸಮಯದಲ್ಲಿ ವಿನಯ್ ಗೌಡ ಅವರು ಪ್ರತಾಪ್ ಅವರ ಮೇಲೆ ಆರೋಪವೊಂದನ್ನು ಮಾಡಿದ್ದಾರೆ. ಬಿಗ್ ಬಾಸ್ ಮಹಿಳಾ ಸ್ಪರ್ಧಿಗಳನ್ನು ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ.

Bigg Boss Season 10 Drone Prathap
Image Credit: Vistaranews

“ಕೆಟ್ಟ ಲುಕ್‌ನಲ್ಲಿ ನೋಡ್ತಾನೆ” ಅಂತ ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅವರು ಇಲ್ಲಿಯವರೆಗೂ ಎಲ್ಲಾ ಮಹಿಳಾ ಸ್ಪರ್ಧಿಗಳನ್ನ ‘ದೀದಿ’ ಅಂತಲೇ ಕರೆದಿದ್ದಾರೆ. ಎಲ್ಲರನ್ನು ಗೌರವದಿಂದಲೇ ಮಾತನಾಡಿಸಿದ್ದು, ಪುರುಷ ಸ್ಪರ್ಧಿಗಳನ್ನ ‘ಆಣ್ಣ’ ಎಂದೇ ಕರೆದಿದ್ದಾರೆ. ಡ್ರೋನ್ ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡಿದ್ದರೆ, ‘ಬಿಗ್ ಬಾಸ್’ ಮನೆಯ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾಗಳು ಸೆರೆಹಿಡಿದಿರಲೇಬೇಕು ಹಾಗಾಗಿ ಈ ಆರೋಪದಿಂದ ಯಾರಿಗೆ ತೊಂದರೆ ಆಗಲಿದೆ ಎಂದು ಕಾದು ನೋಡಬೇಕಿದೆ.

1 Comment
Leave A Reply

Your email address will not be published.