Namrata And Pratap: ಪ್ರತಾಪ್ ಬಿಟ್ಟ ಡ್ರೋನ್ ಗೆ ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ, ಅಷ್ಟಕ್ಕೂ ಪ್ರತಾಪ್ ಮಾಡಿದ್ದೇನು ಗೊತ್ತಾ…?

ಪ್ರತಾಪ್ ಕೊಟ್ಟ ಏಟಿಗೆ ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ.

Bigg Boss Season 10 Namratha Gowda: ಬಿಗ್ ಬಾಸ್ ಸೀಸನ್ 10 ಪ್ರಾರಂಭ ಆಗಿ 50 ದಿನ ಸತತವಾಗಿ ಪೂರೈಸಿದ್ದು, ಇದರ ಸಂಭ್ರಮವನ್ನು ಮನೆಯಲ್ಲಿ ಆಚರಿಸಲಾಯಿತು. ಬಿಗ್ ಮನೆಯಲ್ಲಿ ಈ ಮಧ್ಯೆ ಸದಸ್ಯರಿಗೆ ಮತ್ತಷ್ಟು ಕಾಂಪಿಟೇಷನ್​ ಹೆಚ್ಚಿಸಲು ಬಿಗ್​ ಬಾಸ್ ಇಬ್ಬರು ವೈಲ್ಡ್​ಕಾರ್ಡ್(Wild Card) ಸ್ಪರ್ಧಿಗಳನ್ನು ಒಳಗೆ ಕಳುಹಿಸಿದ್ದು, ಇದೀಗ ಪೈಪೋಟಿಗೆ ಕಿಂಚಿತ್ತು ಕೊರತೆಯಿಲ್ಲ ಎಂಬಂತೆ ಆಟ ಬಿರುಸಿನಿಂದ ಸಾಗುತ್ತಿದೆ.

ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ತಮ್ಮ ತಂಡದ ನಾಯಕನಾಗಿದ್ದ ಪ್ರತಾಪ್​(Prathap), ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಅವರನ್ನು ಹೊರಗಿಟ್ಟರು. ಈ ವಿಚಾರಕ್ಕೆ ತೀವ್ರ ಬೇಸರ ಹೊರಹಾಕಿದ ನಮ್ರತಾ, ಇತರೆ ಸ್ಪರ್ಧಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Bigg Boss Season 10 Namratha Gowda
Image Credit: Vistara News

ತಂಡದ ನಾಯಕರಾಗಿ ಪ್ರತಾಪ್ ಮತ್ತು ಮೈಕಲ್ ಆಯ್ಕೆಯಾದರು

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗಾಗಿ ಎರಡು ತಂಡಗಳನ್ನಾಗಿ ಮಾಡಿದ ಬಿಗ್​ ಬಾಸ್​ ಎರಡು ತಂಡಕ್ಕೆ ನಾಯಕರು ಯಾರಾಗುತ್ತಾರೆ ಎಂಬುದನ್ನು ಬಹುಮತಗಳಿಂದ ತಿಳಿಸಿ ಎಂದು ಹೇಳಿದ್ದರು. ಎಲ್ಲರ ಒಮ್ಮತದಿಂದ ಪ್ರತಾಪ್ ಮತ್ತು ಮೈಕಲ್ ನಾಯಕರಾಗಿ ಆಯ್ಕೆಯಾದರು. ಈ ವೇಳೆ ನಮೃತಾ ನಾನು ಡ್ರೋಣ್​ ತಂಡವನ್ನು ಸೇರಲು ಬಯಸುತ್ತೇನೆ, ಪ್ರತಾಪ್​ ನನಗೆ ಈ ಹಿಂದೆ ಹೇಳಿದ್ದ ಮಾತಿನಂತೆ ಅವಕಾಶ ಕೊಡುತ್ತಾರೆ, ನನ್ನಲ್ಲಿರುವ ಬೇರೆ ನಮ್ರತಾರನ್ನು ಹೊರ ತರುತ್ತಾರೆ ಎಂಬುದನ್ನು ನೋಡಲು ಅವರೊಂದಿಗೆ ಕೈಜೋಡಿಸುತ್ತೇನೆ ಎಂದರು.

Namratha Gowda And Drone Prathap
Image Credit: Original Source

ನಮ್ರತಾ ಗೌಡರವರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಟ್ಟ ಪ್ರತಾಪ್

ಪ್ರತಾಪ್ ಅವರು ನಮ್ರತಾ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಸೂಕ್ತ ಕಾರಣಗಳೊಂದಿಗೆ ಹೊರಗಿಟ್ಟರು. ಆಡಿದ ಮೊದಲ ಚಟುವಟಿಕೆಯಲ್ಲಿ ನಮ್ರತಾ  ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಪ್ರತಾಪ್​ ಅವರನ್ನು ಹೊರಗಿಟ್ಟಿದ್ದು, ಇದರಿಂದ ನೊಂದ ನಮೃತಾ ಗೌಡ , ‘ಅಷ್ಟು ಕೆಟ್ಟದಾಗಿ ಆಡೋದಾದ್ರೆ? ನನ್ನನ್ನು ಯಾಕೆ ತಂಡಕ್ಕೆ ಸೇರಿಸಿಕೊಂಡೆ, ಇನ್ಯಾವತ್ತು ನಿನ್ನನ್ನು ಕ್ಷಮಿಸಲ್ಲ ಡ್ರೋನ್’ ಎಂದರು​’ ನೀನು ಬಣ್ಣಬಣ್ಣದ ಮಾತು ಹೇಳ್ದೆ ಗೊತ್ತಾ, ನಿಮ್ಮಲ್ಲಿ ಟ್ಯಾಲೆಂಟ್ ಇದೆ, ನಿಮ್ಮಲ್ಲಿರುವ ಬೇರೆ ನಮ್ರತಾನ ಹೊರಗಡೆ ತರ್ತಿನಿ, ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ ಅಂತೆಲ್ಲಾ.. ಇದೇನಾ? ಇದಾ ನೀನು ನನಗೆ ಪ್ರಾಮೀಸ್​ ಮಾಡಿದ್ದು, ನಿನ್ನ ನಿರ್ಧಾರ ಒಪ್ಪಿದ್ದೀನಿ, ಆದ್ರೇ, ನನಗೆ ನೋವಾಗಿದೆ’ ಎಂದು ಕಣ್ಣೀರಿಟ್ಟಿದ್ದಾರೆ. ಪ್ರತಾಪ್ ಅವರ ಈ ನಿರ್ಧಾರಕ್ಕೆ ಕಿಚ್ಚ ಸುದೀಪ್ ಏನು ಹೇಳುತ್ತಾರೆ ಎಂದು ನೋಡಬೇಕಿದೆ.

Leave A Reply

Your email address will not be published.