Varthur Santhosh: ಕಿಚ್ಚನ ಎದುರು ಗಳಗಳನೆ ಕಣ್ಣೀರು ಹಾಕಿದ ಸಂತೋಷ್, ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಆಗಿದ್ದೇನು…?
ವರ್ತುರ್ ಸಂತೋಷ್ ಕಣ್ಣೀರು ಹಾಕುತ್ತಾ ಸುದೀಪ್ ಬಳಿ ಹೇಳಿದ್ದೇನು? ಇವರಿಂದ ಈ ನಿರ್ಧಾರ ಸರಿಯೇ
Bigg Boss Season 10 Varthur Santhosh: ಬಿಗ್ ಬಾಸ್ ಸೀಸನ್ 10 (Bigg Boss Season 10) ಪ್ರಾರಂಭ ಆದಾಗಿನಿಂದ ಒಂದಲ್ಲ ಒಂದು ವಿಚಾರ ಬಹಳ ಸ್ಟ್ರಾಂಗ್ ಆಗಿ ವಾರದ ಚರ್ಚೆಯಲ್ಲಿ ಚರ್ಚೆ ಆಗುತ್ತಲೇ ಇದೆ. ಹಾಗೆಯೆ ಈ ವಾರದ ಚರ್ಚೆಯಲ್ಲಿ ಎಲ್ಲರಿಗೂ ಶಾಕ್ ಆಗುವ ಹೇಳಿಕೆಯನ್ನು ವರ್ತುರ್ ಸಂತೋಷ್ ಹೇಳಿದ್ದಾರೆ.
ಪ್ರತಿ ವಾರದ ಅಂತ್ಯ ಬಂದ ಕೂಡಲೇ, ಸುದೀಪ್ ಬರುತ್ತಾರೆ, ಯಾರಿಗೆಲ್ಲ ಬೈತಾರೋ, ಯಾರನ್ನ ಹೊಗಳುತ್ತಾರೋ ಹಾಗು ನಮ್ಮಲ್ಲಿ ಯಾರು ಇವತ್ತು ಮನೆಗೆ ಹೋಗುತಿವೋ ಎಂಬ ನೂರಾರು ಪ್ರಶ್ನೆಗಳು ಸ್ಪರ್ಧಿಗಳಲ್ಲಿ ಬರುವುದು ಸಹಜ. ಹಾಗು ತಾನು ಉಳಿಯಬೇಕು ಮನೆಗೆ ಹೋಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿರುತ್ತಾರೆ ಆದ್ರೆ ಈ ವಾರದ ಚರ್ಚೆಯಲ್ಲಿ ನಡೆದಿದ್ದೇ ಬೇರೆ.
ಹುಲಿ ಉಗುರು ಲಾಕೆಟ್ ಧರಿಸಿ ಪೊಲೀಸ್ ಠಾಣೆಗೆ ಹೋಗಿ ಬಂದ ವರ್ತುರ್ ಸಂತೋಷ್
ರೈತರಾಗಿರುವ ವರ್ತುರ್ ಸಂತೋಷ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿ ಆಗಿ ಬಂದ ಕೆಲವೇ ದಿನಗಳಲ್ಲಿ ಹುಲಿ ಉಗುರು ಧರಿಸಿದ ಪರಿಣಾಮವಾಗಿ ಅವರ ವಿರುದ್ಧ ದೂರು ದಾಖಲಾಗಿದ್ದು, ನೇರವಾಗಿ ಬಿಗ್ ಮನೆಗೆ ಬಂದು ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದು, ತದನಂತರ ಜಾಮೀನಿನ ಮೇಲೆ ಹೊರ ಬಂದ ವರ್ತುರ್ ಸಂತೋಷ್ ಮತ್ತೆ ಬಿಗ್ ಮನೆಗೆ ಪ್ರವೇಶ ಪಡೆದಿದ್ದಾರೆ. ಮತ್ತೆ ಬಿಗ್ ಮನೆಗೆ ಬಂದ ನಂತರ ತುಂಬ ಚೆನ್ನಾಗಿ ಆಟ ಆಡಲು ಪ್ರಾರಂಭಿಸಿ ಟಾಸ್ ಗಳನ್ನೆಲ್ಲ ಅಚ್ಚುಕಟ್ಟಾಗಿ ಆಡಿ, ಎಲ್ಲಾರ ಮೆಚ್ಚುಗೆಗೂ ಪಾತ್ರರಾದರು.
ಬಿಗ್ ಬಾಸ್ ಮನೆಯಲ್ಲಿ ಇರಲು ಆಗುವುದಿಲ್ಲ ನನ್ನನ್ನು ಮನೆಗೆ ಕಳುಹಿಸಿ
ಈ ವಾರ ನೀತು, ವರ್ತುರ್ ಸಂತೋಷ್, ಸ್ನೇಹಿತ್, ಇಶಾನಿ ಈ ನಾಲ್ಕು ಮಂದಿಯಲ್ಲಿ ಒಬ್ಬರು ಮನೆಗೆ ಹೋಗುವುದು ಖಚಿತ ಆಗಿದೆ. ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡ ಹೊರಬಿಟ್ಟಿರೋ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ರನ್ನು ಸೇಫ್ ಎಂದು ಘೋಷಿಸಿದ್ದಾರೆ. ಆದರೆ, ವರ್ತೂರು ಸಂತೋಷ್ ಕಣ್ಣೀರಿಟ್ಟು, ಕೈ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಅಂತ ಹಠ ಹಿಡಿದಿದ್ದಾರೆ. ಹುಲಿ ಉಗುರಿನ ದೂರಿನ ವಿಚಾರ ಇದು ತಮ್ಮ ಮೇಲೆ ಪರಿಣಾಮ ಬೀರಿದ್ದು, ಮನೆಯೊಳಗೆ ಇರಲು ಆಗುತ್ತಿಲ್ಲ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಇದು ಕಿಚ್ಚ ಸುದೀಪ್‌ಗೆ ಬೇಸರ ತರಿಸಿದೆ.
ವರ್ತೂರ್ ಸಂತೋಷ್‌ಗೆ ಬಂದ ವೋಟ್‌ಗಳನ್ನೂ ರಿವೀಲ್ ಮಾಡಿದ ಕಿಚ್ಚ ಸುದೀಪ್
ಈ ವಾರ ವರ್ತೂರು ಸಂತೋಷ್ ಮನೆಯೊಳಗೆ ಉಳಿಯಬೇಕು ಅಂತ 34 ಲಕ್ಷದ 15 ಸಾವಿರಕ್ಕೂ ಅಧಿಕ ವೋಟ್‌ಗಳು ಬಂದಿವೆ. ಹೀಗಿದ್ದರೂ ವರ್ತೂರು ಮನೆಯಿಂದ ಆಚೆ ಬರೋಕೆ ನಿರ್ಧರಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಜನರ ಆದೇಶದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಹೊರಗೆ ಬರುತ್ತಾರಾ? ಇಲ್ಲ ಜನರ ಪ್ರೀತಿಗೆ, ಕಿಚ್ಚ ಮಾತಿಗೆ ಬೆಲೆ ಕೊಟ್ಟು ಮನೆಯೊಳಗೆ ಉಳಿದುಕೊಳ್ಳುತ್ತಾರಾ? ಅನ್ನೋದು ಇಂದಿನ ‘ಸಂಡೇ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ.
View this post on Instagram
ವರ್ತುರ್ ಸಂತೋಷ್ ಅವರಿಗೆ ಅಭಿಮಾನಿಗಳ ಬೆಂಬಲ
ವರ್ತೂರ್ ಸಂತೋಷ್ ಅವರ ಪರವಾಗಿ ಹಲವರು ತಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೊಬ್ಬರು “ಅಧಿಕಾರಿಗಳು ಮಾಡುವ ತಪ್ಪು ಬಡ ಜನಗಳ ಮೇಲೆ ಎಷ್ಟು ಪ್ರಭಾವ ಬಿರುತ್ತೆ ಎನ್ನುವುದಕ್ಕೆ ಇದೆ ಸಾಕ್ಷಿ.” ಎಂದು ಕಿಡಿಕಾರಿದ್ದರೆ, ಇನ್ನೊಬ್ಬರು “ಅಯ್ಯೋ ಸಂತೋಷ್ ನೀವು ಹೊರಗೆ ಬಂದು ಹೋದ ಮೇಲೆ ತುಂಬಾ ಚೆನ್ನಾಗಿ ಆಡ್ತಾ ಇದ್ದಿರಾ.. ಸ್ಟ್ರಾಂಗ್ ಆಗಿ ಇರಿ.” ಎಂದಿದ್ದಾರೆ. “ವರ್ತೂರ್ ಸರ್ ಬಿಗ್ ಬಾಸ್ ಶೋ ರೈತ ಮಕ್ಕಳಿಗೆ ಇನ್ನೂ ಅವಕಾಶ ಕೊಟ್ಟಿಲ್ಲ. ಈ ಬಾರಿ ಒಂದು ಸದುಪಯೋಗ ಪಡಿಸಿಕೊಳ್ಳಿ. ಹೊರಗಡೆ ಆಗಿದ್ದು ಆಗಿ ಹೋಯ್ತು. ಜನರು ನಿಮ್ಮ ಬೆಂಬಲಕ್ಕೆ ನಿಂತು, ನಿಮ್ಮನ್ನು ಬಹುದೊಡ್ಡ ಸಮಸ್ಯೆ ಇಂದ ಹೊರಗೆ ತಂದಿದ್ದಾರೆ. ನಿಮಗೆ ಪ್ರೀತಿ ವಿಶ್ವಾಸ ನೀಡಿ ನಿಮ್ಮನ್ನು ಒಪ್ಪಿಕೊಂಡಿದ್ದಾರೆ. ದಯವಿಟ್ಟು ಒಂದು ವಿನಂತಿ ನೀವು ಹೊರಹೋಗುವ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಿ.” ಎಂದಿದ್ದಾರೆ. ಹೀಗೆ ಅಭಿಮಾನಿಗಳು ಹಲವು ರೀತಿಯಲ್ಲಿ ವರ್ತುರ್ ಸಂತೋಷ ಅವರನ್ನು ಬೆಂಬಲಿಸುತ್ತಿದ್ದಾರೆ.