Birth Certificate: ಇನ್ನುಮುಂದೆ ಈ ಕೆಲಸಗಳಿಗೆ Birth Certificate ಕಡ್ಡಾಯ, ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿ.
ಅಕ್ಟೋಬರ್ 1 ರಿಂದ ಯಾವುದೇ ದಾಖಲೆ ಮಾಡಿಸಬೇಕಿದ್ದರು ಜನನ ಪ್ರಮಾಣ ಪತ್ರ ಕಡ್ಡಾಯ.
Birth Certificate Mandatory From October 1st: ಭಾರತದ ಪ್ರಜೆಗಳಿಗೆ ಹಲವಾರು ವಯಕ್ತಿಕ ದಾಖಲೆಗಳಿವೆ. ಯಾವುದೇ ಕೆಲಸವನ್ನು ಮಾಡಬೇಕಾದರೂ ಆ ದಾಖಲೆಗಳು ಅಗತ್ಯವಾಗಿರುತ್ತವೆ. ಇದೀಗ ಸರ್ಕಾರ ಶಿಕ್ಷಣ ಸಂಸ್ಥೆಗೆ ಪ್ರವೇಶ ಮಾಡಲು, ಮತದಾನವನ್ನು ಮಾಡಲು, ಡ್ರೈವಿಂಗ್ ಲೈನ್ಸನ್ಸ್ ಪಡೆಯಲು, ಆಧಾರ್ ಸಂಖ್ಯೆ ನೋಂದಣಿ ಮಾಡಲು, ಮದುವೆ ನೋಂದಣಿ, ಸರಕಾರಿ ಉದ್ಯೋಗಳ ನೇಮಕಾತಿ ಮಾಡಲು ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದೇನೆಂದು ನಾವೀಗ ತಿಳಿಯೋಣ.

Birth Certificate Is Mandatory
ಭಾರತದ ಪ್ರಜೆಗಳು ಹೊಂದಿರುವ ದಾಖಲೆಗಳಲ್ಲಿ ಜನನ ಪ್ರಮಾಣ (Birth Certificate)ಪತ್ರ ಕೂಡ ಮುಖ್ಯ ದಾಖಲೆಯಾಗಿದೆ. ಇನ್ನು ಮುಂದೆ ಯಾವುದೇ ದಾಖಲೆ ಮಾಡಿಸಬೇಕಿದ್ದರು ಅದಕ್ಕೆ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಜನನ ಪ್ರಮಾಣ ಪತ್ರ ಪಡೆಯುದರಿಂದ Birth And Death ಡೇಟಾಬೇಸ್ ರಚಿಸಲು ಸಹಾಯವಾಗುತ್ತದೆ. ಹಾಗೆ ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಹಾಗೂ ಡಿಜಿಟಲ್ ನೋಂದಣಿಯ ಪಾರದರ್ಶಕವಾದ ದಾಖಲೆಗಳನ್ನು ನೀಡುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಇನ್ನುಮುಂದೆ ಈ ಕೆಲಸಗಳಿಗೆ Birth Certificate ಕಡ್ಡಾಯ
ಶಿಕ್ಷಣ ಸಂಸ್ಥೆಗೆ ಪ್ರವೇಶ ಮಾಡಲು, ಮತದಾನವನ್ನು ಮಾಡಲು, ಡ್ರೈವಿಂಗ್ ಲೈನ್ಸನ್ಸ್ ಪಡೆಯಲು, ಆಧಾರ್ ಸಂಖ್ಯೆ ನೋಂದಣಿ ಮಾಡಲು, ಮದುವೆ ನೋಂದಣಿ, ಸರಕಾರಿ ಉದ್ಯೋಗಳ ನೇಮಕಾತಿ ಹಾಗೆ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಲು Birth Certificate ಕಡ್ಡಾಯವಾಗಿ ಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಜನನ ಮತ್ತು ಮರಣ ನೋಂದಣಿ ಕಾಯ್ದೆ 2023 ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಣೆಮಾಡಿದೆ.