Birth Certificate: ಜನನ ಪ್ರಮಾಣಪತ್ರ ಇಲ್ಲದೆ ಇನ್ನುಮುಂದೆ ಈ ಕೆಲಸ ಮಾಡಲು ಸಾಧ್ಯವಿಲ್ಲ, ಕೇಂದ್ರದ ಹೊಸ ನಿಯಮ.
ಇನ್ನು ಎಲ್ಲಾ ಕೆಲಸಕ್ಕೂ ಜನನ ಪ್ರಮಾಣ ಪತ್ರ ಕಡ್ಡಾಯವಾಗಲಿದೆ, ಇಂದಿನಿಂದ ಜಾರಿ.
Birth Certificate Mandatory From Today: ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ2023 ದೇಶಾದ್ಯಂತ ಜಾರಿಗೆ ಬರಲಿದೆ. ಇದರರ್ಥ, ಇಂದಿನಿಂದ ಜನನ ಪ್ರಮಾಣಪತ್ರದ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗುತ್ತದೆ. ಎಲ್ಲಾ ಸರ್ಕಾರಿ ಯೋಜನೆಗಳಲ್ಲಿ, ಬ್ಯಾಂಕ್ ಗಳಲ್ಲಿ ಹಾಗು ಇನ್ನಿತರ ಯಾವುದೇ ಕೆಲಸಗಳಿಗೂ ಆಧಾರ್ ಕಾರ್ಡ್ (Aadhar Card) ಬಹಳ ಪ್ರಾಮುಖ್ಯ ಎನ್ನುವುದು ಇತ್ತೀಚಿಗೆ ಎಲ್ಲರಿಗೂ ತಿಳಿದಿದೆ. ಹಾಗೆ ಈಗ ಜನನ ಪ್ರಮಾಣ ಪತ್ರ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯಲಿದೆ.
ಜನನ ಪ್ರಮಾಣ ಪತ್ರ ಕಡ್ಡಾಯ
ಶಾಲಾ ಕಾಲೇಜು ಪ್ರವೇಶ, ಚಾಲನಾ ಪರವಾನಗಿಗಾಗಿ ಅರ್ಜಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಧಾರ್ ನೋಂದಣಿ, ವಿವಾಹ ನೋಂದಣಿ, ಸರ್ಕಾರಿ ಉದ್ಯೋಗ ಅರ್ಜಿ ಇತ್ಯಾದಿಗಳಿಗೆ ಈ ಜನನ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ ಸೇರಿದಂತೆ ಇನ್ನಾವುದೇ ದಾಖಲೆಗಳಿಗೆ ಜನನ ಪ್ರಮಾಣ ಪತ್ರವನ್ನು ಏಕೈಕ ಮೂಲಾಧಾರ ದಾಖಲೆಯಾಗಲಿದ್ದು, ಈ ಹೊಸ ನಿಯಮ ಇವತ್ತಿನಿಂದ ಜಾರಿಗೆ ಬರಲಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಕೆಲವು ದಿನಗಳ ಹಿಂದೆ ಹೇಳಿಕೆ ಬಿಡುಗಡೆ ಮಾಡಿದೆ.
ಮುಖ್ಯ ರಿಜಿಸ್ಟ್ರಾರ್ ನೇಮಕ
ಈ ಕಾಯ್ದೆಯು ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಡೇಟಾಬೇಸ್ ಅನ್ನು ನಿರ್ವಹಿಸಲು ಭಾರತದ ರಿಜಿಸ್ಟ್ರಾರ್ ಜನರಲ್ ಗೆ ಅಧಿಕಾರ ನೀಡುತ್ತದೆ. ಈ ಉದ್ದೇಶಕ್ಕಾಗಿ, ಎಲ್ಲಾ ರಾಜ್ಯಗಳು ಮುಖ್ಯ ರಿಜಿಸ್ಟ್ರಾರ್ಗಳನ್ನು ನೇಮಿಸುತ್ತವೆ. ರಾಷ್ಟ್ರೀಯ ಡೇಟಾ ಬೇಸ್ ನಲ್ಲಿ ದಾಖಲಾದ ಜನನ ಮತ್ತು ಮರಣಗಳ ಡೇಟಾವನ್ನು ಹಂಚಿಕೊಳ್ಳಲು ಈ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ಮುಖ್ಯ ರಿಜಿಸ್ಟ್ರಾರ್ ರಾಜ್ಯ ಮಟ್ಟದಲ್ಲಿ ಏಕರೂಪದ ಡೇಟಾಬೇಸ್ ಅನ್ನು ಸಿದ್ಧಪಡಿಸುತ್ತಾರೆ.
ಈ ಮಸೂದೆಯ ಉದ್ದೇಶ
ನೋಂದಾಯಿತ ಜನನ ಮತ್ತು ಮರಣಗಳಿಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ಗಳನ್ನು ಸ್ಥಾಪಿಸುವುದು ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಉಪಕ್ರಮವು ಇತರ ಡೇಟಾಬೇಸ್ಗಳಿಗೆ ನವೀಕರಣ ಪ್ರಕ್ರಿಯೆಗಳನ್ನು ಸುಧಾರಿಸುತ್ತದೆ, ದಕ್ಷ, ಪಾರದರ್ಶಕ ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನ ವಿತರಣೆಯನ್ನು ಉತ್ತೇಜಿಸುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪರವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆ ಜಾರಿಗೆ ಬಂದ ನಂತರ, ಜನನ ನೋಂದಣಿ ಸಮಯದಲ್ಲಿ ಪೋಷಕರು ಆಧಾರ್ ಸಂಖ್ಯೆ ನೀಡುವ ಮೂಲಕ ನೋಂದಣಿ ಮಾಡಿಸಬೇಕಾಗುತ್ತದೆ.