Ration Card: ರೇಷನ್ ಕಾರ್ಡ್ ಜೊತೆ ಈ ದಾಖಲೆ ಇಲ್ಲದಿದ್ದರೆ ಇನ್ನುಮುಂದೆ ರೇಷನ್ ಸಿಗಲ್ಲ, ಹೊಸ ನಿಯಮ.

ಇನ್ನು ಮುಂದೆ ರೇಷನ್ ಪಡೆಯಲು ಕೇವಲ ಪಡಿತರ ಚೀಟಿ ಇದ್ದರೆ ಸಾಲದು, ಈ ದಾಖಲೆ ಕಡ್ಡಾಯ.

Birth Certificate Mandatory Ration Shop: ರಾಜ್ಯ ಸರ್ಕಾರದ ಹಲವು ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದ್ದು. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ 5kg ಅಕ್ಕಿ ನೀಡುತ್ತಿದೆ. ಹಾಗೂ ಇನ್ನುಳಿದ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತಿದೆ.

ಇದೀಗ ಪಡಿತರದಾರರಿಗೆ ಮುಖ್ಯ ಮಾಹಿತಿ ಅಂದರೆ ಉಚಿತವಾಗಿ ಸರ್ಕಾರ ಅಕ್ಕಿ ನೀಡುತ್ತಿದ್ದು,ಸದ್ಯ ರೇಷನ್ ಧನ್ಯ ಪಡೆಯುತ್ತಿರುವ ಜನರಿಗೆ ರಾಜ್ಯ ಸರ್ಕಾರ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ರೇಷನ್ ಅಂಗಡಿಗೆ ಬರಿ ರೇಷನ್ ಕಾರ್ಡ್ ಮಾತ್ರವಲ್ಲದೆ ಅದರ ಜೊತೆಗೆ ಈ ದಾಖಲೆ ತಗೆದುಕೊಂಡು ಹೋಗದೆ ಇದ್ದರೆ ರೇಷನ್ ಧಾನ್ಯವನ್ನ ಪಡೆಯಲು ಸಾಧ್ಯವಿಲ್ಲ.

Birth Certificate Mandatory Ration Shop
Image Credit: Dnaindia

ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ

ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳ ಸೂಚನೆ ಅನ್ವಯ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇಲಾಖೆ ಅಂಕಿ ಅಂಶಗಳಿಗಾಗಿ ಉಳಿದ ಪರಿಶಿಷ್ಟ ಫಲಾನುಭವಿಗಳ ವಿವರ ಸಂಗ್ರಹಿಸಲಾಗುತ್ತಿದೆ. ಜುಲೈ ಹಾಗೂ ಆಗಸ್ಟ್ ಕಂತಿನ ಹಣವನ್ನು ರಾಜ್ಯದ ಜನರು ಪಡೆದಿದ್ದಾರೆ. ಮುಂದಿನ ತಿಂಗಳಿನಿಂದಾದರು 10 ಕೆಜಿ ಅಕ್ಕಿ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ.

Ration card latest update
Image Credit: Timesofindia

10ಕೆಜಿ ಅಕ್ಕಿ ನೀಡುವ ನಿರೀಕ್ಷೆ

ಸರ್ಕಾರದಿಂದ ಇನ್ನು ಮುಂದೆ 5 ಕೆಜಿ ಅಕ್ಕಿ ಬದಲು 10 ಕೆಜಿ ಅಕ್ಕಿ ನೀಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಹಾಗಾಗಿ ಇನ್ನು ಮುಂದೆ ರೇಷನ್ ಪಡೆಯಲು ಹೋಗುವಾಗ ಪಡಿತರ ಚೀಟಿ ಜೊತೆಗೆ ಜಾತಿ ಪ್ರಮಾಣ ಪತ್ರ ಕೂಡ ತೆಗೆದುಕೊಂಡು ಹೋಗಬೇಕಾಗಿರುತ್ತದೆ.

Leave A Reply

Your email address will not be published.