Education System: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ನಿಯಮ, ಪರೀಕ್ಷಾ ನಿಯಮ ಬದಲಾವಣೆ.
9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ನಿಯಮ
Board Exam For 9th and 11th Standard Students: ಶಿಕ್ಷಣ ವ್ಯವಸ್ಥೆಯಲ್ಲಿ ಆಗಾಗ ಬದಲಾವಣೆ ಆಗುತ್ತಿರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬದಲಾವಣೆಗಳು ಸಹಜವಾಗಿದೆ. ಅಂತೆಯೇ 9ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಕಲಿಕಾ ದೃಷ್ಟಿಯಿಂದ ಒಂಬತ್ತನೇ ತರಗತಿ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುತ್ತದೆ.
11 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ.
11 ನೇ ತರಗತಿ ಮಕ್ಕಳಿಗೂ ಇನ್ನು ವಾರ್ಷಿಕ ಪರೀಕ್ಷೆ ನೆಡೆಸಲಾಗುತ್ತದೆ ಎನ್ನಲಾಗಿದೆ. ಸಾಕಷ್ಟು ವಿರೋಧ ನಡುವೆಯೂ ಬೋರ್ಡ್ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ. ಪ್ರಥಮ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಅದೇ ಕಾಲೇಜಿನಲ್ಲಿ ನಡೆಯಲಿದೆ, ಮೇಲ್ವಿಚಾರಕರೂ ಇರಲಿದ್ದಾರೆ. ಪ್ರಶ್ನೆಪತ್ರಿಕೆಯೂ ಬೋರ್ಡ್‌ನಿಂದಲೇ ಆಗಮಿಸುತ್ತದೆ. ಈ ಪರೀಕ್ಷೆಯಲ್ಲಿ ಫೇಲ್ ಆದರೆ ಮತ್ತೊಂದು ಪೂರಕ ಪರೀಕ್ಷೆ ನಡೆಸಲಾಗುತ್ತದೆ.
ಈ ಬದಲಾವಣೆಯ ಬಗ್ಗೆ ವಿರೋಧ ಪ್ರತಿಕ್ರಿಯೆಗಳು
ಅದೆಷ್ಟೋ ಪ್ರೌಢ ಶಾಲೆಗಳಲ್ಲಿ ವಿಷಯಾವಾರು ಶಿಕ್ಷಕರೇ ಇಲ್ಲ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಶಿಕ್ಷಕರೇ ಇಲ್ಲ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ಕೊಡದೆ ನಾಟಕ ಆಡುತ್ತಿದ್ದು 10 ನೇ ತರಗತಿ ಪರೀಕ್ಷೆಯಲ್ಲಿ 100%ಬರಲು ಅಡ್ಡಧಾರಿಯಲ್ಲಿ ಫಲಿತಾಂಶ ಬರುವಂತೆ ಮಾಡಿಸಿ ಖುಷಿ ಪಡುತ್ತಾರೆ ಮುಂದೆ ಆ ಮಕ್ಕಳ ಉನ್ನತ ವ್ಯಾಸಂಗಕ್ಕೆ ತೊಂದ್ರೆ ಅನುಭವಿಸುವ ಅತಂತ್ರ ಶಿಕ್ಷಣ ವ್ಯವಸ್ಥೆ ಈಗ ನಡೆಯುತ್ತಿದೆ.
ಎಚ್ಚರ ವಾಗಿದ್ದೇವೆ ಎಂದು ತೋರಿಸಲು ಈ ಪರೀಕ್ಷೆ ನಾಟಕ ಅಷ್ಟೇ ಇದು ಏನು ಪ್ರಯೋಜನಕ್ಕಿಲ್ಲ ಮೊದಲು ಪೂರ್ಣ ಪ್ರಮಾಣದ ಶಿಕ್ಷಕರ ನಿಯೋಜನೆ ಮಾಡಿ ಆಮೇಲೆ ಏನಾದ್ರೂ ಮಾಡಿ ಸುಖಾ ಸುಮ್ಮನೆ ಈ ದೊಡ್ಡ ಆಟ ಬೇಡ ಅಲ್ಲವೇ ಎಂದು ಕೆಲವು ಅಭಿಪ್ರಾಯಗಳು ವ್ಯಕ್ತವಾಗಿದೆ.