Smart Watch: Boat ನಿಂದ ಇನ್ನೊಂದು ಅತೀ ಅಗ್ಗದ ಸ್ಮಾರ್ಟ್ ವಾಚ್ ಲಾಂಚ್, ಅಬ್ಬಬ್ಬಾ ಇಷ್ಟೊಂದು ಕಡಿಮೆ ಬೆಲೆಗೆ..

ಅತ್ಯಂತ ಕಡಿಮೆ ಬೆಲೆಗೆ ಬೋಟ್ ಕಂಪನಿಯ ವಾಚ್, ಇಂದೇ ಖರೀದಿಸಿ.

Boat Lunar Connect Watch: ಬೋಟ್‌(Boat) ಕಂಪನಿ ಸ್ಮಾರ್ಟ್‌ವಾಚ್‌(Smart Watch) ವಲಯದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ತನ್ನ ವಿವಿಧ ಗ್ಯಾಜೆಟ್ಸ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಹೊಸ ಬೋಟ್‌ ಲೂನಾರ್‌ ಕಾಮೆಟ್‌ (Boat Lunar Comment) ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಲಾಂಚ್‌ ಆಗಿದೆ.

ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕ ನಿಯಂತ್ರಿಸಬಹುದಾಗಿದೆ. ಇದಕ್ಕಾಗಿ ಮೈಕ್ರೊಫೋನ್‌ ಮತ್ತು ಸ್ಪೀಕರ್‌ಗಳನ್ನು ಹೊಂದಿದೆ. ಇದು ಬಲಭಾಗದಲ್ಲಿ ಕ್ರಿಯಾತ್ಮಕ ಕಿರೀಟವನ್ನು ಹೊಂದಿದ್ದು, ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ.

Boat Lunar Connect Watch
Image Credit: Mobiledrop

Boat Lunar Comment ವಾಚ್ ನ ಫೀಚರ್ಸ್‌

ಬೋಟ್‌ ಲೂನಾರ್‌ ಕಾಮೆಟ್‌ ಸ್ಮಾರ್ಟ್‌ವಾಚ್‌ 1.39-ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಬರಲಿದೆ. ಈ ವಾಚ್ ಸುತ್ತಿನ ಡಯಲ್ ಅನ್ನು ಹೊಂದಿದ್ದು, ಸ್ಕ್ರೀನ್‌ 500 ನಿಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ನೀಡಲಿದೆ. ಈ ಸ್ಮಾರ್ಟ್‌ವಾಚ್‌ ವೇಕ್ ಗೆಸ್ಚರ್ ಅನ್ನು ಬೆಂಬಲಿಸಲಿದ್ದು, ಡಿಸ್‌ಪ್ಲೇ ಆನ್‌ ಮಾಡಲು ನಿಮ್ಮ ಕೈ ಎತ್ತಿದರೆ ಸಾಕು ಬಟನ್ ಅನ್ನು ಒತ್ತುವ ಅವಶ್ಯಕತೆ ಇರುವುದಿಲ್ಲ.

Boat Lunar Comment ವಾಚ್ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಹೊಂದಿದೆ

ಇನ್ನು ಬೋಟ್ ಲೂನಾರ್ ಕಾಮೆಟ್‌ ಸ್ಮಾರ್ಟ್‌ವಾಚ್‌ನ ಮೇನ್‌ ಹೈಲೈಟ್‌ ಎಂದರೆ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌. ಇದರ ಮೂಲಕ ಸ್ಮಾರ್ಟ್‌ಫೋನ್‌ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸ್ಮಾರ್ಟ್ ವಾಚ್ ಅನ್ನು ಬಳಸಬಹುದು. ಇದು ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆದಾರರು ನೇರವಾಗಿ 10 ಸಂಪರ್ಕಗಳನ್ನು ಉಳಿಸಬಹುದು. ಇದು ಲೋಕಲ್‌ ಡಯಲ್ ಪ್ಯಾಡ್ ಅನ್ನು ಸಹ ನೀಡುತ್ತದೆ ಇದರಿಂದ ನೀವು ಹೊಸ ಕರೆ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ತೆಗೆದುಕೊಳ್ಳಬೇಕಾಗಿಲ್ಲ.

boat lunar connect watch price
Image Credit: Mobiledrop

ಈ ವಾಚ್ ನಿಂದ ಬಳಕೆದಾದರ ಆರೋಗ್ಯ ಸ್ಥಿತಿಯನ್ನು ಗಮನಿಸಬಹುದು

ಬೋಟ್‌ ಲೂನಾರ್‌ ಕಾಮೆಟ್‌ ಸ್ಮಾರ್ಟ್ ವಾಚ್ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇದು ನಿಮ್ಮ ಜಿಮ್ ವರ್ಕ್‌ಔಟ್‌ಗಳು, ರನ್ನಿಂಗ್‌, ವಾಕಿಂಗ್ ಮತ್ತು ಸೈಕ್ಲಿಂಗ್ ಸೇರಿದಂತೆ ಎಲ್ಲಾ ರೀತಿಯ ಫಿಸಿಕಲ್‌ ಆಯಕ್ಟಿವಿಟಿಯನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಅಲ್ಲದೆ ನಿಮ್ಮ ನಿದ್ರೆ, ಹೃದಯ ಬಡಿತ, SpO2 ಲೆವೆಲ್‌ ಮತ್ತು ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ.

Boat Lunar Comment ವಾಚ್ ನ ಬೆಲೆ ಮತ್ತು ಲಭ್ಯತೆ

ಬೋಟ್‌ ಲೂನಾರ್‌ ಕಾಮೆಟ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,299 ರೂ. ಬೆಲೆಯನ್ನು ಪಡೆದುಕೊಂಡಿದೆ. ಈ ವಾಚ್ Amazon ಮತ್ತು boAt ನ ಅಧಿಕೃತ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 30 ರಿಂದ ಖರೀದಿಸಬಹುದಾಗಿದೆ. ಈ ವಾಚ್ ಡೀಪ್ ಪರ್ಪಲ್, ಆಕ್ಟಿವ್ ಬ್ಲ್ಯಾಕ್, ರಾಯಲ್ ಆರೆಂಜ್ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದು ಮೆಟಲ್ ಗ್ರೇ ರೂಪಾಂತರವನ್ನು ಸಹ ಹೊಂದಿದೆ.

Leave A Reply

Your email address will not be published.