BOB UPI: ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಗುಡ್ ನ್ಯೂಸ್, ATM ಬಳಸುವವರಿಗೆ ಹೊಸ ಸೇವೆ ಆರಂಭ.
ATM ಬಳಸುವ BOB ಗ್ರಾಹಕರಿಗೆ ಹೊಸ ಸೇವೆ ಆರಂಭ.
BOB Cardless Cash Withdrawal: ದೇಶದಲ್ಲಿ UPI ವಹಿವಾಟು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. UPI ಬಳಕೆದಾರರು ಇತ್ತೀಚಿಗೆ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಇತ್ತೀಚೆಗಷ್ಟೇ UPI Cardless Cash ಸೇವೆ ಬಿಡುಗಡೆ ಮಾಡಿದೆ.
ಇದೀಗ ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ Bank Of Baroda (BOB) ಯುಪಿಐ ಬಳಸಿಕೊಂಡು ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ದೇಶದ ಕೋಟ್ಯಂತರ BOB ಗ್ರಾಹಕರು ಇನ್ನುಮುಂದೆ ಕಾರ್ಡ್ ಇಲ್ಲದೆ ATM ನಲ್ಲಿ ಹಣವನ್ನು ಸುಲಭವಾಗಿ ಪಡೆಯಬಹುದು.

Bank Of Baroda ಗ್ರಾಹಕರಿಗೆ ಗುಡ್ ನ್ಯೂಸ್
Bank Of Baroda ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮೊದಲ ಬಾರಿಗೆ UPI ಮೂಲಕ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ಡೆಬಿಟ್ ಕಾರ್ಡ್ ಅಗತ್ಯವಿರುವುದಿಲ್ಲ. ಎಟಿಎಂ ನಲ್ಲಿ ಪ್ರದರ್ಶಿಸಲಾದ QR Code ಮೂಲಕ ಗ್ರಾಹಕರು ಹಣವನ್ನು ಹಿಂಪಡೆಯಬಹುದು. ಎಟಿಎಂ ಕಾರ್ಡ್ ಅನ್ನು ಬಳಸದೆ ಇನ್ನುಮುಂದೆ Bank Of Baroda ಗ್ರಾಹಕರು ಕೇವಲ ಯುಪಿಐ ನ ಮೂಲಕ ಹಣವನ್ನು ಪಡೆಯಬಹುದು.
ಇನ್ನುಮುಂದೆ UPI ಮೂಲಕ ಹಣ ಪಡೆಯುವುದು ಸುಲಭ
UPI ಮೂಲಕ ATM ಗಳಿಂದ ನಗದು ಹಿಂಪಡೆಯುವ ಸೌಲಭ್ಯವನ್ನು ಒದಗಿಸುವ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಇದಾಗಿದೆ. ತನ್ನ Interoperable Cardless Cash ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪಡೆಯುವ ಮೂಲಕ BHIM UPI ಮತ್ತು ಇತರ UPI ಅಪ್ಲಿಕೇಶನ್ ಗಳನ್ನೂ ತನ್ನ ಗ್ರಾಹಕರೊಂದಿಗೆ ಬಳಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

ATM Card ಇಲ್ಲದೆ ಹಣ ಪಡೆಯುಯುವ ವಿಧಾನ
ಇನ್ನು ಈ ಸೇವೆಯನ್ನು ಪಡೆಯಲು ಗ್ರಾಹಕರು ಬ್ಯಾಂಕ್ ಆಫ್ ಬರೋಡಾ ಎಟಿಎಂ ನಲ್ಲಿ UPI ನಗದು ವಿತ್ ಡ್ರಾವಲ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ನಂತರ ಹಿಂಪಡೆಯಬೇಕಾದ ಮೊತ್ತವನ್ನು ನಮೂದಿಸಿದ ನಂತರ ಎಟಿಎಂ ಪರದೆಯ ಮೇಲೆ ಕ್ಯೂ ಆರ್ ಕೋಡ್ ಡಿಸ್ ಪ್ಲೆ ಆಗುತ್ತದೆ.
ವಹಿವಾಟನ್ನು ಧೃಡೀಕರಿಸಲು ICCW ಗಾಗಿ ಅಧಿಕೃತ UPI ಅಪ್ಲಿಕೇಶನ್ ಅನ್ನು ಬಳಸಿಕೊಂಡು ಈ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಇನ್ನು BOB ATM ಗಳಲ್ಲಿ, ಗ್ರಾಹಕರು ಒಂದು ದಿನದಲ್ಲಿ ಎರಡು ವಹಿವಾಟುಗಳನ್ನು ಮಾಡಬಹುದು ಮತ್ತು ಒಂದು ಸಮಯದಲ್ಲಿ ಗರಿಷ್ಠ 5,000 ರೂ. ಗಳನ್ನೂ ಮಾತ್ರ ಪಡೆಯಲು ಸಾಧ್ಯವಾಗುತ್ತದೆ.