Milk In Borewell In India: ಬೋರ್ ವೆಲ್ ನಲ್ಲಿ ನೀರಿನ ಬದಲು ಬಂತು ಹಾಲು, ಹಾಲು ತುಂಬಲು ಕೊಡಪಾನ ಮತ್ತು ಟ್ಯಾಂಕ್ ತಂದ ಜನರು.

ಬೋರ್ ವೆಲ್ ನಲ್ಲಿ ನೀರಿನ ಬದಲು ಬಂತು ಹಾಲು.

Milk In Borewell: ಕೆಲವೊಂದು ಸಮಯದಲ್ಲಿ ಕೆಲವು ಅದ್ಭುತ ಘಟನೆಗಳು ನೆಡೆಯುವ ಕುರಿತು ನಾವು ಕೇಳುತ್ತೇವೆ. ಅಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್ ನ ಇಲ್ಲಿನ ಬಸ್‌ ನಿಲ್ದಾಣದ ಬಳಿ ಇರುವ ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲಿನ ಬಣ್ಣವನ್ನೇ ಹೋಲುವ ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ.

ಹೌದು ಉತ್ತರ ಪ್ರದೇಶದ ಮೊರಾಬಾದ್ ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಇರುವಂತಹ ಬೋರ್ ವೆಲ್ ನಲ್ಲಿ ನೀರಿನ ಬದಲು ಬಿಳಿ ಬಣ್ಣದ ನೀರು ಬರಲು ಆರಂಭಿಸಿದೆ. ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಗಳು ವೈರಲ್ ಆಗುತಿದ್ದು, ಇದು ಹಾಲು ಅಥವಾ ನೀರು ಎಂದು ತಿಳಿಯದ ಜನ ಗೊಂದಲಕ್ಕೆ ಒಳಗಾಗಿದ್ದಾರೆ.

Borewell Water
Image Credit: Udayavani

ಹಾಲು ಎಂದು ನಂಬಿ ಮೋಸ ಹೋದ ಜನರು

ಕೆಲವೊಮ್ಮೆ ಜನರು ಬಣ್ಣಗಳಿಗೆ ಬಲಿಯಾಗುವುದುಂಟು ಅಂಥದೇ ಘಟನೆ ಇಲ್ಲಿ ನಡೆದಿದೆ. ಬೋರ್ ವೆಲ್ ನಲ್ಲಿ ಹಾಲು ಬಂತೆಂದು ಅದರ ಬಳಿ ಸಾಕಷ್ಟು ಮಂದಿ ಜಮಾಯಿಸಿದ್ದು ಈ ನಡುವೆ ಇಲ್ಲಿ ಸೇರಿದ ಜನ ಇದು ನೀರಲ್ಲ ಹಾಲು ಎಂದು ಭಾವಿಸಿ ಮನೆಯಿಂದ ಬಾಟಲಿ, ಪಾತ್ರೆ, ಕ್ಯಾನ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ತಂದು ಸರತಿ ಸಾಲಿನಲ್ಲಿ ನಿಂತು ಪಾತ್ರೆಗಳಿಗೆ ತುಂಬಿಸಿ ಮನೆಗೆ ಒಯ್ಯುತ್ತಿದ್ದಾರೆ. ಬೋರ್ ವೆಲ್ ನಲ್ಲಿ ಹಾಲು ಬರುತ್ತಿರುವ ವಿಚಾರ ಇಲ್ಲಿನ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದೆ ಆ ಬಳಿಕ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬೋರಿಂಗ್ ಪರಿಶೀಲನೆ ನಡೆಸಿದರು. ಈ ವೇಳೆ ಬೋರ್ ವೆಲ್ ನಲ್ಲಿ ಬರುತ್ತಿರುವುದು ಹಾಲಲ್ಲ ಬದಲಾಗಿ ಕಲುಷಿತ ನೀರು ಎಂದು ಮನವರಿಕೆ ಮಾಡಿದ್ದಾರೆ.

Borewell Water Latest News
Image Credit: Twitter

ಕಲುಷಿತ ನೀರಿನ ಬಗ್ಗೆ ಸರಿಯಾದ ಪರಿಶೀಲನೆ

ಬೋರ್ ವೆಲ್ ನಲ್ಲಿ ಬಂದ ಬಿಳಿ ನೀರು ಅದು ಕಲುಷಿತ ನೀರಾಗಿದ್ದು ಈ ಕುರಿತು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿದ್ದು . ಹ್ಯಾಂಡ್ ಪಂಪ್‌ನ ಕೆಳಭಾಗವು ಹಾನಿಗೊಳಗಾಗಿದ್ದು, ಅದನ್ನು ಪ್ಲಗ್ ಮಾಡಿದಾಗ ಬಿಳಿ ಬಣ್ಣದ ಕಲುಷಿತ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ತನಿಖೆ ನಡೆಸುವಂತೆ ಬಿಲಾರಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪುರಸಭೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಬೋರಿಂಗ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ನೀರು ಸೇವನೆಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಹಾಗು ಜನರಿಗೂ ಕೂಡ ಇಂತಹ ವಿಷಯಗಳ ಬಗ್ಗೆ ಮನವರಿಕೆ ಮಾಡಲಾಗಿದೆ.

Leave A Reply

Your email address will not be published.