Boult Miraj Watch : ಆಕರ್ಷಕ ಡಿಸ್‌ಪ್ಲೇ ವಿನ್ಯಾಸದೊಂದಿಗೆ ಎಂಟ್ರಿ ಕೊಟ್ಟ ಬೌಲ್ಟ್‌ ಮಿರಾಜ್‌ ಸ್ಮಾರ್ಟ್‌ವಾಚ್‌!

ಬೌಲ್ಟ್‌ ಕಂಪೆನಿಯ ಆಕರ್ಷಕ ವಾಚ್ ಭಾರತದಲ್ಲಿ ಬಿಡುಗಡೆಗೊಂಡಿದೆ, ಈ ವಾಚ್ ಹಲವು ವಿಶೇಶತೆ ಹೊಂದಿದ್ದು, ಇಂದೇ ಬುಕ್ ಮಾಡಿ

Boult Miraj Watch; ಬೌಲ್ಟ್‌ ಕಂಪೆನಿಯ ವಾಚ್ (Watch) ಅಂದರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ, ಈ ಕಂಪನಿ ತನ್ನ ಅನೇಕ ವೈಶಿಷ್ಟತೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿದೆ ಹಾಗು ತನ್ನ ಹೊಸ ಆಧುನಿಕ ತಂತ್ರಜಾನದ ಜೊತೆಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಕಂಪನಿ ವಾಚ್ ಗಳು ಸ್ಮಾರ್ಟ್ ಫೋನ್ ಗೆ (Smart Phone) ಸಮವಾಗಿದೆ. ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲಾ ಸೌಲಭ್ಯವನ್ನು ಹಾಗು ವಿಶೇಷತೆಯನ್ನು ಈ ಕಂಪನಿಯ ವಾಚ್ ಹೊಂದಿರುತ್ತದೆ ಹಾಗು ತನ್ನ ಗ್ರಾಹಕರಿಗೆ ಎಲ್ಲಾ ರೀತಿಯ ಅವಶ್ಯಕತೆಗಳ ಪೂರೈಕೆಗೆ ಸಹಕಾರಿ ಆಗಿದೆ.

Boult Mirage Smart Watch
Image Source: Boult Audio

ಬೌಲ್ಟ್‌ ಮಿರಾಜ್‌ ಸ್ಮಾರ್ಟ್ ವಾಚ್

ಬೌಲ್ಟ್‌ ಕಂಪೆನಿ ತನ್ನ ಹೊಸ ಶೈಲಿಯ ವಾಚ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರತಿ ಭಾರಿಯು ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿರುವ ಬೌಲ್ಟ್‌ ನ ಈ ವಾಚ್ ಆಡಿಯೋ ಆಕ್ಸಿಸರೀಸ್‌ ಮಾತ್ರವಲ್ಲದೆ ಸ್ಮಾರ್ಟ್‌ವಾಚ್‌ಗಳ ಮೂಲಕವೂ ಕೂಡ ಗುರುತಿಸಿಕೊಂಡಿದೆ, ಈ ಸ್ಮಾರ್ಟ್‌ವಾಚ್‌ ಅನ್ನು ಬೌಲ್ಟ್‌ ಮಿರಾಜ್‌ ಎಂದು ಕರೆಯಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಎರಡು ವಿಭಿನ್ನ ಬಣ್ಣಗಳ ಲೋಹೀಯ ಪಟ್ಟಿಗಳೊಂದಿಗೆ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ ಅಂಬರ್ ಬ್ಲೂ, ಐನಾಕ್ಸ್ ಸ್ಟೀಲ್ ಮತ್ತು ಕೋಲ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬೌಲ್ಟ್ ಮಿರಾಜ್ ಸ್ಮಾರ್ಟ್‌ವಾಚ್‌ ನ ರಚನೆ
ಬೌಲ್ಟ್ ಮಿರಾಜ್ ಸ್ಮಾರ್ಟ್‌ವಾಚ್‌ 1.39 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 360 × 360 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡದಿದೆ. ಇದಲ್ಲದೆ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ವಾಚ್‌ ವೃತ್ತಾಕಾರದ-ಡಯಲ್ ಅನ್ನು ಹೊಂದಿದ್ದು, ಎರಡು ವಿಭಿನ್ನ ಬಣ್ಣಗಳಲ್ಲಿ ಲೋಹೀಯ ಪಟ್ಟಿಗಳೊಂದಿಗೆ ಲಭ್ಯವಿದೆ. ಇದಲ್ಲದೆ ಬೌಲ್ಟ್ ಕಂಪೆನಿ ಇತ್ತೀಚಿಗೆ ತನ್ನ ಹೊಸ ಬೌಲ್ಟ್‌ ಆಡಿಯೋ ಕ್ರಾಫ್ಟ್ ಬ್ಲೂಟೂತ್ ಕಾಲಿಂಗ್ ವಾಚ್ ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್‌ 1.83 ಇಂಚಿನ ಆಲ್‌ವೇಸ್‌ ಆನ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಅಷ್ಟೇ ಅಲ್ಲದೆ ಇದು ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್‌ಫೋನ್‌ ಓಪನ್‌ ಮಾಡದೆಯೇ ಕರೆಯಲ್ಲಿ ತೊಡಗಿಕೊಳ್ಳಬಹುದು.

Boult Miraj Watch
Image Source: Boult Audio

ಬೌಲ್ಟ್ ಮಿರಾಜ್ ಸ್ಮಾರ್ಟ್‌ವಾಚ್‌ ನ ವೈಶಿಷ್ಟತೆಗಳು
ಈ ಸ್ಮಾರ್ಟ್‌ವಾಚ್‌ ದೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP67 ರೇಟಿಂಗ್‌ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಆಪಲ್‌ ಹೆಲ್ತ್‌ ಮತ್ತು ಗೂಗಲ್‌ ಫಿಟ್‌ಗೆ ಹೊಂದಿಕೊಳ್ಳಲಿದೆ. ಇದಲ್ಲದೆ AI ಅಸಿಸ್ಟೆಂಟ್‌ ಬೆಂಬಲ, ಕುಳಿತುಕೊಳ್ಳುವ ಜ್ಞಾಪನೆಗಳು, ಕುಡಿಯುವ ನೀರಿನ ಜ್ಞಾಪನೆಗಳನ್ನು ಸಹ ಹೊಂದಿದೆ. ಜೊತೆಗೆ ಸ್ಮಾರ್ಟ್‌ವಾಚ್‌ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ 120+ ಸ್ಪೋರ್ಟ್ಸ್‌ ಮೋಡ್‌ಗಳು ಮತ್ತು ಸ್ಮಾರ್ಟ್ ಅಧಿಸೂಚನೆ ಬೆಂಬಲವನ್ನು ಸಹ ಒಳಗೊಂಡಿದೆ. ಇದು ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಇದರಿಂದ ನೀವು ಸ್ಮಾರ್ಟ್‌ಫೋನ್‌ ಕರೆಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

ಬೌಲ್ಟ್ ಮಿರಾಜ್ ಸ್ಮಾರ್ಟ್‌ವಾಚ್‌ ನ ಅನುಕೂಲಗಳು
ಬೌಲ್ಟ್ ಮಿರಾಜ್ ಸ್ಮಾರ್ಟ್‌ವಾಚ್‌ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, BP ಟ್ರ್ಯಾಕಿಂಗ್, ನಿದ್ರೆಯ ಮಾನಿಟರಿಂಗ್ ಮತ್ತು ಸ್ತ್ರೀ ಋತುಚಕ್ರದ ಟ್ರ್ಯಾಕಿಂಗ್ ನಂತಹ ಮಹತ್ವದ ಹೆಲ್ತ್‌ ವಿಶೇಶತೆಯನ್ನು ಒಳಗೊಂಡಿದೆ.ಇದರೊಂದಿಗೆ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆಯೂ ಸಹ ಇರುವುದರಿಂದ ನೀವು ಈ ವಾಚ್‌ ಅನ್ನು ಸುಲಭವಾಗಿ ಕಂಟ್ರೋಲ್‌ ಮಾಡಬಹುದಾಗಿದೆ. ಜೊತೆಗೆ ಅನೇಕ ಆರೋಗ್ಯ ಸಂಬಂಧಿ ವಿಷಯಗಳನ್ನು ಈ ವಾಚ್‌ ಮೇಲ್ವಿಚಾರಣೆ ಮಾಡಲಿದೆ.

ಬೌಲ್ಟ್‌ ಮಿರಾಜ್‌ ವಾಚ್ ನ ಬೆಲೆ

ಬೌಲ್ಟ್ ಮಿರಾಜ್ ಸ್ಮಾರ್ಟ್ ವಾಚ್ ಭಾರತದಲ್ಲಿ 1,799ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ಇದನ್ನು ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಂಚ್‌ ಆಫರ್‌ ಪ್ರಯುಕ್ತ 1,599ರೂ ಬೆಲೆಗೆ ಖರೀದಿಸಬಹುದಾಗಿದೆ.

 

 

Leave A Reply

Your email address will not be published.