Smart Watch: ದಿನಕ್ಕೆ ಎಷ್ಟು ಬಾರಿಯಾದರೂ BP ಚೆಕ್ ಮಾಡಿ, ಕಡಿಮೆ ಬೆಲೆಗೆ ಬಂತು ಆಕರ್ಷಕ ವಾಚ್.

ಆರೋಗ್ಯ ಮಾಹಿತಿ ನೀಡುವ ಈ ಸ್ಮಾರ್ಟ್ ವಾಚ್ ನ ಫೀಚರ್ ಜನರ ಮೆಚ್ಚುಗೆಗೆ ಕಾರಣವಾಗಿದೆ.

Boult Sterling Pro Smart Watch: ಹಿಂದೆ ಮೊಬೈಲ್ ಬರುವುದಕ್ಕಿಂತ ಮುಂಚೆಯೇ Watch ಅನ್ನು ಬಳಸುತ್ತಿದ್ದರು. ಹಾಗು ಹಿಂದೆ ಕೇವಲ ಸಮಯ ನೋಡಲು ಬಳಸುತ್ತಿದ್ದ Watch ಈಗಿನ ಕಾಲದಲ್ಲಿ ಹಲವು ವಿಶೇಷತೆಯನ್ನು ಪಡೆದುಕೊಂಡು ಮಾರುಕಟ್ಟೆಗೆ ಬರುತ್ತಿದೆ. ಮಾರುಕಟ್ಟೆಯಲ್ಲಿ ಅನೇಕ ವಾಚ್ ಕಂಪನಿಗಳು ತಲೆಯೆತ್ತಿದ್ದು, ಯುವ ಪೀಳಿಗೆಯವರು ಇಷ್ಟ ಪಡುವ ಲುಕ್ ನೊಂದಿಗೆ ವಾಚ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಅಂತಹ ವಾಚ್ ಕಂಪನಿಗಳಲ್ಲಿ Boult ಕಂಪನಿ ಕೊಡ ಒಂದಾಗಿರುತ್ತದೆ. ಕಳೆದ ತಿಂಗಳು Boult ಕಂಪನಿ ಭಾರತದಲ್ಲಿ Crown R ಮತ್ತು Drift Pro Smart Watch ಗಳನ್ನು ಬಿಡುಗಡೆ ಮಾಡಿತ್ತು. ಈಗ ಕಂಪನಿ ಹೊಸದಾಗಿ Boult Sterling Pro ಅನ್ನು ಪರಿಚಯಿಸಿದೆ.

ಇದು ಉತ್ತಮ Smart Watch ಆಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರ ಬೆಲೆ ಸಾಕಷ್ಟು ಕೈಗೆಟುಕುವಂತಿದೆ ಮತ್ತು ದುಬಾರಿ ವಾಚ್‌ಗಳಿಗಿಂತ ವೈಶಿಷ್ಟ್ಯಗಳು ಲಭ್ಯವಿದೆ. ಈ ಒಂದು ವಾಚ್ ನಮ್ಮ ಬಳಿ ಇದ್ದರೆ ಮೊಬೈಲ್ ಅವಶ್ಯಕತೆಯೇ ಇರುವುದಿಲ್ಲ ಎನ್ನಲಾಗಿದೆ.

Boult Sterling Pro watch price
Image Credit: Boultaudio

Boult Sterling Pro Smart watch ನ ವಿಶೇಷತೆಗಳು

Boult Sterling Pro watch ವೃತ್ತಾಕಾರದ ಡಯಲ್ ಅನ್ನು ಹೊಂದಿದೆ, ಇದು ಮೆಟಾಲಿಕ್ ಯುನಿಬಾಡಿಯೊಂದಿಗೆ ಕಂಡುಬರುತ್ತದೆ. ಈ watch ನೀರು ಅಥವಾ ಧೂಳಿನಿಂದ ಕೂಡ ಹಾಳಾಗುವುದಿಲ್ಲ. ಈ ವಾಚ್ 1.43-ಇಂಚಿನ AMOLED ಡಿಸ್ಪ್ಲೇಯನ್ನು 466 x 466 ಪಿಕ್ಸೆಲ್ ಗಳ ರೆಸಲ್ಯೂಶನ್ ಮತ್ತು 800 nits ಪೀಕ್ ಬ್ರೈಟ್ನೆಸ್ ಹೊಂದಿದೆ. ಅದರ ಬಳಕೆದಾರ ಇಂಟರ್ಫೇಸ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು, ಬಲಭಾಗದಲ್ಲಿ ತಿರುಗುವ ಭೌತಿಕ ಬಟನ್ ಇರುತ್ತದೆ.

ಭಾರತದಲ್ಲಿ Boult Sterling Pro watch ನ ಬೆಲೆ ಎಷ್ಟಿದೆ…?

ಈ ಸ್ಮಾರ್ಟ್ ವಾಚ್ ನಲ್ಲಿ Bluetooth ಕರೆ ಸೌಲಭ್ಯವಿದೆ. ಈ ಸ್ಮಾರ್ಟ್ ವಾಚ್ 4 ವಿಭಿನ್ನ UI ಥೀಮ್‌ಗಳು ಮತ್ತು ವಾಚ್ ಫೇಸ್‌ಗಳೊಂದಿಗೆ ಲಭ್ಯವಿದೆ. ಇದರಲ್ಲಿ ಹಲವು ವಿಭಿನ್ನ ವೈಶಿಷ್ಟ್ಯಗಳು ಲಭ್ಯವಿವೆ. Boult Sterling Pro watchನ ಬೆಲೆ 2,499 ರೂಗಳಾಗಿದ್ದು ಬಹಳ ಅಗ್ಗದ ಬೆಲೆಯಲ್ಲಿ ಈ ವಾಚ್ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ವಾಚ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೆ ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ವಾಚ್ ಲಭ್ಯವಿದೆ.

Features of Boult Sterling Pro Smart watch
Image Credit: Shobaba

Boult Sterling Pro watch ನಿಂದ BP ಪರೀಕ್ಷೆ ಮಾಡಿಸಿಕೊಳ್ಳಬಹುದು

Boult Sterling Pro watch ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ . ಇದು ಬಳಕೆದಾರರ ಹೃದಯ ಬಡಿತ ವನ್ನು ತಿಳಿದುಕೊಳ್ಳಲು ಉಪಯುಕ್ತವಾಗಿದೆ. ಅಷ್ಟೇ ಅಲ್ಲದೆ , BP ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ. ಈ Boult ಕಂಪನಿಯ ವಾಚ್ ಅನ್ನು ಪುರುಷರು ಮತ್ತು ಮಹಿಳೆಯರು ಇಬ್ಬರು ಬಳಸಬಹುದಾಗಿದೆ.

Leave A Reply

Your email address will not be published.