BPL Card: ಹೊಸ BPL ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಬೇಸರದ ಸುದ್ದಿ, ಸರ್ಕಾರದ ಇನ್ನೊಂದು ನಿರ್ಧಾರ.
ಪಡಿತರ ಚೀಟಿಯಲ್ಲಿನ ದುರ್ಬಳಕೆ ಕುರಿತು ಸರ್ಕಾರದಿಂದ ಮಹತ್ವದ ಕ್ರಮ ಜಾರಿ.
BPL Ration Card Holders: ಜನಸಾಮಾನ್ಯರಿಗೆ ಪಡಿತರ ಚೀಟಿ ಎನ್ನವುದು ಬಹಳ ಮುಖ್ಯವಾದ ಆಧಾರವಾಗಿದೆ. ಸರ್ಕಾರದಿಂದ ಪಡೆಯುವ ಸೌಲತ್ತುಗಳಿಗೆ ಪಡಿತರ ಚೀಟಿ ಕಡ್ಡಾಯವಾಗಿದೆ. ಆದರೆ ಕೆಲವರು ಒಂದೇ ಕುಟುಂಬದವರಾದರು ಬೇರೆ ಬೇರೆ ಪಡಿತರ ಚೀಟಿ ಹೊಂದಿರುತ್ತಾರೆ.
ಒಂದೇ ಕುಟುಂಬದವರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿಭಜಿಸಿ ಹೊಸ ಕಾರ್ಡ್ ನೀಡಿದರೆ ದುರ್ಬಳಕೆ ಆಗುವ ಜೊತೆಗೆ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟವಾಗಲಿದೆ. ಈ ಸಂಬಂಧ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಕಾರ್ಡ್ ವಿಭಜಿಸದಂತೆ ಸೂಚನೆ ನೀಡಿದೆ.

ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯವಾಗಿದೆ
ಹಣಕಾಸು ಇಲಾಖೆ ಹೇಳುವ ಪ್ರಕಾರ, ಬಡತನ ರೇಖೆಗಿಂತ ಕೆಳಗಿನವರಿಂದ ಬಿಪಿಎಲ್ ಪಡಿತರ ಯೋಜನೆ ದುರ್ಬಳಕೆ ಆಗುವುದು ತಪ್ಪಲಿದೆ. ಅಂದರೆ ಒಂದೇ ಕುಟುಂಬದವರು ಬೇರ್ಪಟ್ಟು ಹೊಸ ಕಾರ್ಡ್ ಪಡೆಯುವುದನ್ನು ತಪ್ಪಿಸಲು ಸರ್ಕಾರ ಹೀಗೆ ನಿರ್ಧರಿಸಿದೆ ಎನ್ನಲಾಗಿದೆ.
ಸದ್ಯ ರಾಜ್ಯದಲ್ಲಿ 1.2 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದ, ಒಟ್ಟು 4.4 ಕೋಟಿ ಫಲಾನುಭವಿಗಳು ಇದರ ವ್ಯಾಪ್ತಿಗೆ ಬರುತ್ತಾರೆ.ಸರ್ಕಾರದ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಫಲಾನುಭವಿಗಳು ಹೆಚ್ಚು ಸೇರ್ಪಡೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ ಬಿಪಿಎಲ್ ಕಾರ್ಡ್ಗಳನ್ನು ವಿಭಜಿಸಲು ಅವಕಾಶ ನೀಡದಂತೆ ಹಣಕಾಸು ಇಲಾಖೆ ಒತ್ತಾಯಿಸಿದೆ ಎಂದು TNIE ವರದಿ ಮಾಡಿದೆ.

ಸರ್ಕಾರಕ್ಕೆ ನಷ್ಟ ಆಗುವ ಸಂಭವ ಇದೆ
ರಾಜ್ಯದಲ್ಲಿ 1.15 ಕೋಟಿ ಕುಟುಂಬಗಳು ಅಂದರೆ ಜನಸಂಖ್ಯೆ ಶೇಕಡಾ 70 ಕ್ಕಿಂತಲೂ ಹೆಚ್ಚು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿವೆ. ಆದರೆ ಈ ಸೌಲಭ್ಯಗಳ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಕೆಲವರು ಒಂದೇ ಕುಟುಂಬದಲ್ಲಿದ್ದು ಹೊಸ ಪಡಿತರ ಚೀಟಿ ಪಡೆಯಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆ ಉಂಟು ಮಾಡಲಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಪ್ರಸ್ತುತದಲ್ಲಿ ಪಡಿತರ ಕಾರ್ಡ್ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್ಗಳನ್ನು ನೀಡದಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ 2,000 ರೂ.ಆರ್ಥಿಕ ಸಹಾಯ ಪಡೆಯುವವರು ಆ ಹಣವನ್ನು GST ವ್ಯಾಪ್ತಿಗೆ ಬರುವ ವಸ್ತುಗಳ ಖರೀದಿಗೆ ಬಳಸುವುದರಿಂದ ಆರ್ಥಿಕತೆಗೆ ಸಹಕಾರ ದೊರೆತಂತಾಗುತ್ತದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಬಾಕಿ ಉಳಿದ ಅರ್ಜಿ ಇತ್ಯರ್ಥಕ್ಕೆ ಸೂಚನೆ
ಸೆ.29 ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ಕಾರಿ ಆದೇಶ ಹೊರಡಿಸಿದೆ. ಅದರ ಮೂಲಕ ಹೊಸ ಪಡಿತರ ಚೀಟಿಗಾಗಿ ಮಾರ್ಚ್ 2023 ರಿಂದ ಸಲ್ಲಿಕೆಯಾದ ಅರ್ಜಿಗಳ ಪೈಕಿ ಬಾಕಿ ಉಳಿದ 2.96 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.