Ration Card: ಕಾರ್ ಹೊಂದಿರುವವರಿಗೆ ಬಂತು ಹೊಸ ರೇಷನ್ ಕಾರ್ಡ್ ನಿಯಮ, ರಾಜ್ಯ ಸರ್ಕಾರದ ಆದೇಶ.
ಸ್ವಂತ ಕಾರ್ ಹೊಂದಿರುವ ಜನರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.
BPL Ration Card Latest Update: ರೇಷನ್ ಕಾರ್ಡ್ ದೇಶದಲ್ಲಿನ ಜನರಿಗೆ ಅತಿ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರಿ ಹಾಗೂ ಸರ್ಕಾರೆತರ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತಿ ಅಗತ್ಯವಾಗಿದೆ. ಬಡತನ ರೇಖೆಗಿಂತ ಮೇಲಿರುವವವರಿಗೆ APL ಕಾರ್ಡ್ ಅನ್ನು ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿವೆ BPL ಕಾರ್ಡ್ ನೀಡಲಾಗುತ್ತದೆ.
ಸಾಕಷ್ಟು ಜನರು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಅರ್ಹತೆ ಇರುವವರಿಗೆ ಮಾತ್ರ BPL ಕಾರ್ಡ್ ವಿತರಿಸುದಾಗಿ ಆದೇಶ ಹೊರಡಿಸಿದೆ. ಈ ಹಿಂದೆ ಸರ್ಕಾರ BPL ಕಾರ್ಡ್ ರದ್ದಾಗುತ್ತದೆ ಎಂದು ಆದೇಶ ಹೊರಡಿಸುತ್ತು. ಆದರೆ ಇದೀಗ ರೇಷನ್ ಕಾರ್ಡ್ ರದ್ದಾಗುತ್ತದೆ ಎಂದು ಆತಂಕದಲ್ಲಿದ್ದವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಇದರ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

ಕಾರ್ ಹೊಂದಿದ ಕುಟುಂಬದ BPL ಕಾರ್ಡ್ ಸ್ಥಗಿತಾ ಗೊಳಿಸುದಿಲ್ಲ
ಹೌದು ಸರ್ಕಾರ ಈಗಾಗಲೇ ವೈಟ್ ಬೋರ್ಡ್ ಹೊಂದಿರುವ ಕುಟುಂಬದ BPL ಕಾರ್ಡ್ ಅನ್ನು ಸ್ಥಗಿತಗೊಳಿಸುದಾಗಿ ಆದೇಶ ಹೋರಡಿಸಿತ್ತು ಆದರೆ ಇದೀಗ ಸರ್ಕಾರ ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬದ ರೇಷನ್ ಕಾರ್ಡ್ ಅನ್ನು ರದ್ದು ಮಾಡುದಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಆಹಾರ ಸಚಿವ ಮುನಿಯಪ್ಪ ಅವರು ಸಣ್ಣ ಕಾರ್ ಹೊಂದಿರುವ ಕುಟುಂಬದ BPL ಕಾರ್ಡ್ ಅನ್ನು ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂಬುದಾಗಿ ಹೇಳಿಗೆ ನೀಡಿದ್ದಾರೆ. ಕಾರ್ ಇದ್ದು ಅರ್ಹತೆ ಇರುವವರಿಗೆ BPL ಕಾರ್ಡ್ ನೀಡುವ ಕುರಿತು ಪರಿಶೀಲನೆ ನೆಡೆಸುದಾಗಿ ಮತ್ತು ಇಲ್ಲಿತನಕ ನಾವು ಯಾರ bpl ಕಾರ್ಡ್ ಅನ್ನು ಸಹ ರದ್ದು ಮಾಡಿಲ್ಲ ಮತ್ತು ರದ್ದು ಮಾಡಬೇಕು ಅನ್ನುವುದು ಹಿಂದಿನ ಸರ್ಕಾರದ ನಿರ್ಧಾರವಷ್ಟೇ ಎಂದಿದ್ದಾರೆ.

ಯಾರು APL ಕಾರ್ಡ್ ಅಡಿ, ಹಾಗೂ ಯಾರು BPL ಕಾರ್ಡ್ ಅಡಿ ಬರುತ್ತಾರೆ ಎಂದು ಪರಿಶೀಲನೆ ಮಾಡಿ ಅವರಿಗೆ ಸೂಕ್ತವಾದ ಕಾರ್ಡ್ ಅನ್ನು ನೀಡುತ್ತೇವೆ. ಅರ್ಹತೆ ಇರುವವರಿಗೆ ಯಾವುದೇ ರೀತಿಯ ತೊಂದರೆ ಆಗುದಿಲ್ಲ ಸದ್ಯಕ್ಕೆ ರೇಷನ್ ಕಾರ್ಡ್ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
BJP ಸರ್ಕಾರದ ಅವಧಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈಗ ಅವುಗಳ ವಿಲೇವಾರಿ ಬಾಕಿ ಇದೆ ಈಗ ಅರ್ಜಿ ಹಾಕಿರುವವರಲ್ಲಿ ಅರ್ಹರಿಗೆ BPL ಕಾರ್ಡ್ ನೀಡಲಾಗುತ್ತದೆ ಎಂದಿದ್ದಾರೆ. ಕಾರ್ ಇರುವವರಿಗೆ BPL ಕಾರ್ಡ್ ಕೊಡಬಾರದು ಎಂಬುದು ಹಿಂದಿನ ಸರ್ಕಾರ ಅವಧಿಯಲ್ಲಿದಾಗ ನಿರ್ಧಾರವಾಗಿದ್ದು. ಆದರೆ ನಮ್ಮ ಸರ್ಕಾರ ಅದನ್ನು ಜಾರಿಗೊಳಿಸುದಿಲ್ಲ, ಯಾರಿಗೆ ಅರ್ಹತೆ ಇರುತ್ತದೆಯೋ ಅವರಿಗೆ BPL ಕಾರ್ಡ್ ವಿತರಿಸುತ್ತೇವೆ ಎಂದು ಹೇಳಿದ್ದಾರೆ.