Brahmanda Guruji: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಬ್ರಹ್ಮಾಂಡ ಗುರೂಜಿ, ಅಷ್ಟಕ್ಕೂ ಮನೆಯಲ್ಲಿ ಆಗಿದ್ದೇನು…?

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬ್ರಹ್ಮಾಂಡ ಗುರೂಜಿ, ಸ್ಪರ್ಧಿಗಳ ಪ್ರೀತಿಗೆ ಸೋತು ಭಾವುಕರಾದರು

Brahmanda Guruji In Bigg Boss Kannada Season 10: ಬಿಗ್ ಬಾಸ್ (Bigg Boss) ಸೀಸನ್ ಒಂದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಬ್ರಹ್ಮಾಂಡ ಗುರೂಜಿ ಯವರು ಬಿಗ್ ಬಾಸ್ ಸೀಸನ್ 10 ರಲ್ಲಿ ಮತ್ತೆ ಮನೆ ಒಳಗೆ ಪ್ರವೇಶ ಪಡೆದಿದ್ದರು. ಗುರೂಜಿ ಯವರು ಬಿಗ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಬಹಳ ಪ್ರೀತಿಯಿಂದ ಗುರೂಜಿಯನ್ನು ಬರ ಮಾಡಿಕೊಂಡರು ಅಷ್ಟೇ ಅಲ್ಲದೆ ಇಡೀ ಮನೆ ಸುತ್ತಾಡಿದ ಗುರೂಜಿಗೆ ಎಲ್ಲ ಸ್ಪರ್ಧಿಗಳನ್ನು ಒಂದು ಕಡೆ ಸೇರಿಸುವಲ್ಲಿ ಸಾಕಾಗಿಬಿಟ್ಟರು. ಇನ್ನು ಕೆಲವು ಸ್ಪರ್ಧಿಗಳಲ್ಲಿ ಗುರೂಜಿ ಯಾಕೆ ಬಂದರು? ಎಷ್ಟು ದಿನ ಇರುತ್ತಾರೆ? ಎಂದೆಲ್ಲ ಪ್ರಶ್ನೆ ಮೂಡಿತು.

Brahmanda Guruji Latest News
Image Credit: Filmibeat

ಗುರೂಜಿ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ ಸ್ಪರ್ಧಿಗಳು

ಗುರೂಜಿ ಮನೆಗೆ ಬರುತ್ತಿದ್ದಂತೆ ಅವರ ಫೇಮಸ್ ಡೈಲಾಗ್ ಗಳ ಸುರಿಮಳೆಯೇ ಹರಿಯಿತು. ಮುಂಡಾ ಮೋಚುತು ಎಂದು ಗುರೂಜಿ ಬಾಯಲ್ಲಿ ಕೇಳಿ ಎಲ್ಲರೂ ನಕ್ಕರು. ಅಷ್ಟೇ ಅಲ್ಲದೆ ಅವರ ಕಟ್ಟು ನಿಟ್ಟಿನ ಕ್ರಮ ನೋಡಿ ತುಕಾಲಿ ಸಂತೋಷ್ ಅವರು ನಮ್ಮ ಕಥೆ ಇನ್ನು ಮುಂದೆ ಮುಂಡಾ ಮೊಚತು ಎಂದು ಹೇಳಿದರು. ಹಾಗೆ ಗುರೂಜಿಯವರು ಎಲ್ಲರ ಜೊತೆ ಪ್ರೀತಿಯಿಂದ ಬೆರೆತರು.

ಟಾಸ್ಕ್ ಆಡಿಸಿದ ಗುರೂಜಿ

ಮನೆಗೆ ಬಂದ 2 ದಿನದಲ್ಲಿ ಬ್ರಹ್ಮಾಂಡ ಗುರೂಜಿ ಎಲ್ಲರಿಗೂ ಇಷ್ಟವಾದರು. ಮನೆ ಮಂದಿಗೆಲ್ಲಾ ಟಾಸ್ಕ್​ ಕೊಟ್ಟು ತಮಾಷೆ ಮಾಡಿದ್ರು. ಕೆಲವರಿಗೆ ಶಿಕ್ಷೆ ಕೂಡ ನೀಡಿದ್ರು. ತಮ್ಮ ಮಾತಿನಿಂದಲೇ ಪ್ರೇಕ್ಷಕರಿಗೂ ಮಸ್ತ್ ಮನರಂಜನೆಯನ್ನು ನೀಡಿದ್ರು. ಅವರಿಗೂ ತಾನು ಎಷ್ಟು ದಿನ ಇರ್ತೀನಿ ಎನ್ನುವ ಸುಳಿವು ಇರಲಿಲ್ಲ. ಒಂದು ದಿನ ಇರ್ತಿನೋ ಒಂದು ವಾರ ಇರ್ತಿನೋ ಗೊತ್ತಿಲ್ಲ ಕಣ್ಣಯ್ಯ ಎಂದು ಹೇಳುತ್ತಿದ್ದರು.

Brahmanda Guruji In Bigg Boss Kannada Season 10
Image Credit: Filmibeat

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬ್ರಹ್ಮಾಂಡ ಗುರೂಜಿ

ಇಂದು (ಬುಧವಾರ) ಬಿಗ್​ ಬಾಸ್​ ಬ್ರಹ್ಮಾಂಡ ಗುರೂಜಿ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಕ್ಕೆ ಧನ್ಯವಾದಗಳು ನೀವಿನ್ನು ಹೊರಡಬಹುದು ಎಂದು ಬಿಗ್ ಬಾಸ್​ ಆದೇಶ ನೀಡಿದರು, ಬ್ರಹ್ಮಾಂಡ ಗುರೂಜಿ ಒಮ್ಮೆ ನನ್ನ ಕೈರುಚಿ ನೋಡಿ, ಪಲಾವ್ ತಿಂದು ಹೋಗಿ ಎಂದು ಕಾರ್ತಿಕ್ ಹೇಳಿದ್ರು. ಬಿಗ್ ಬಾಸ್​ ಕೂಡ ಅಪ್ಪಣೆ ನೀಡಿದರು . ಈ ವೇಳೆ ಬ್ರಹ್ಮಾಂಡ ಗುರೂಜಿ ಭಾವುಕರಾದರು. ಮನೆಯವರ ಮುಂದೆಲ್ಲಾ ಕಣ್ಣೀರು ಹಾಕಿದರು. ಸ್ಪರ್ಧಿಗಳೆಲ್ಲಾ ಗುರೂಜಿಯವರನ್ನು ಸಮಾಧಾನ ಮಾಡಿ ಇನ್ನು ಒಂದು ವಾರ ಇಲ್ಲೇ ಇರಿ ನೀವು ಬಿಗ್ ಬಾಸ್​ ಗೆ ಕೇಳಿಕೊಳ್ಳಿ ಎಂದರು. ಬಿಗ್​ ಬಾಸ್​ ಮನೆಯವರ ಜೊತೆ ಬೆರೆತಿದ್ದ ಬ್ರಹ್ಮಾಂಡ ಗುರೂಜಿ ಸ್ಪರ್ಧಿಗಳಿಗೆಲ್ಲಾ ಆಶೀರ್ವಾದ ಮಾಡಿ ಖುಷಿಯಿಂದ ಮನೆಯಿಂದ ಹೊರ ಬಂದರು.

Leave A Reply

Your email address will not be published.