Brahmanda Guruji: ಬಿಗ್ ಬಾಸ್ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ, ಬಿಗ್ ಬಾಸ್ ನಲ್ಲಿ ಇನ್ನಷ್ಟು ಕುತೂಹಲ.

ಬಿಗ್ ಬಾಸ್ ಮನೆಗೆ ದಿಡೀರ್ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ.

Brahmanda Guruji In Bigg Boss Season 10: ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ಪ್ರಾರಂಭ ಆದಾಗಿನಿಂದ ಒಂದಲ್ಲ ಒಂದು ವಾರದಲ್ಲಿ ಮನೆಗೆ ಗೆಸ್ಟ್ ಬಂದು ಹೋಗಿದ್ದನ್ನು ಕಾಣಬಹುದು. ಆದ್ರೆ ಈ ವಾರ ಬ್ರಹ್ಮಾಂಡ ಗುರೂಜಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು, ಸ್ವಲ್ಪ ಅನುಮಾನ ಸ್ರಷ್ಟಿಸಿದೆ. ಪ್ರತಿಯೊಬ್ಬ ಸ್ಪರ್ಧಿ ಮನಸ್ಸಲ್ಲೂ ಒಂದು ಪ್ರಶ್ನೆ ಮೂಡಿದೆ, ಇವರು ಗೆಸ್ಟ್ ಆಗಿ ಬಂದಿದ್ದ ಅಥವಾ ವೈಲ್ಡ್ ಕಾರ್ಡ್ ಎಂಟ್ರಿನಾ ಎಂದು.

ಗುರೂಜಿ ಯಾಕೆ ಬಂದಿದ್ದಾರೆ ಎಂದು ತನಿಷಾ ಕ್ಯಾಮೆರಾ ಮುಂದೆ ಬಂದು ಬಿಗ್ ಬಾಸ್ ಬಳಿ ಕೇಳಿದ್ದಾರೆ. ನರೇಂದ್ರ ಬಾಬು ಶರ್ಮಾ ಗುರೂಜಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಬಗ್ಗೆ ಕಲರ್ಸ್ ಕನ್ನಡ ಪ್ರೊಮೋ ಹಾಕಿದ್ದು, ಈ ವಾರದ ಆರಂಭವೇ ನಗೆ ಹಬ್ಬ ಎನ್ನಬಹುದು, ಚೆನ್ನಾಗಿ ಸ್ಪರ್ಧಿಗಳ ಜೊತೆ ಮಾತನಾಡಿ ಎಲ್ಲರನ್ನು ನಗಿಸುತ್ತಿದ್ದಾರೆ ಗುರೂಜಿ. 

Brahmanda Guruji In Bigg Boss Season 10
Image Credit: Filmibeat

ಹಲವು ಅತಿಥಿಗಳ ಆಗಮನ

ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಲಾರ್ಡ್ ಪ್ರಥಮ್ ಆಗಿ ಪ್ರಥಮ್ ಎಂಟ್ರಿಯನ್ನು ಕೊಟ್ಟಿದ್ದರು. ನಂತರ ಬೃಂದಾವನ ಧಾರಾವಾಹಿಯ ತಂಡ ಹಾಗೂ ನಟಿ ತಾರಾ, ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಎಂಟ್ರಿ ಕೊಟ್ಟು ಮನೆಯಲ್ಲಿದ್ದ ಸದಸ್ಯರಿಗೆ ಹುರುಪು ತುಂಬುವ ಕೆಲಸವನ್ನು ಮಾಡಿದ್ದರು. ಈಗ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‌ಇನ್ನೂ ಮನೆಯಲ್ಲಿ ಮೂರು ಬಣಗಳಾಗಿದ್ದು ಮನೆಯಲ್ಲಿರುವ ಕೆಲವು ಸದಸ್ಯರ ನಡುವಳಿಕೆಗಳನ್ನು ಬ್ರಹ್ಮಾಂಡ ಗುರೂಜಿ ತಿದ್ದಿ ಹೋಗುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.

ಪ್ರೀತಿಯಿಂದ ಬರಮಾಡಿಕೊಂಡ ಬಿಗ್ ಸ್ಪರ್ಧಿಗಳು

ನರೇಂದ್ರ ಬಾಬು ಶರ್ಮಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಮನೆಯ ಸದಸ್ಯರೆಲ್ಲರೂ ಕೂಡ ಅವರನ್ನ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಬಾಗಿಲು ತೆಗೆದ ತಕ್ಷಣವೇ ಎಲ್ಲರೂ ಓಡಿಹೋಗಿ ವೆಲ್ಕಮ್ ಹೇಳಿದ್ದಾರೆ. ತದನಂತರ ಗುರೂಜಿಯವರು ಬಿಗ್ ಬಾಸ್ ಮನೆಯ ತುಂಬೆಲ್ಲ ಓಡಾಟವನ್ನ ನಡೆಸಿದ ನಂತರ ಅಯ್ಯೋ ಬಿಗ್ ಬಾಸ್ ನನ್ನ ಕೈಲಿ ಇನ್ನೂ ನಡೆಯೋಕೆ ಆಗೋದಿಲ್ಲ ಮನೆಯವರನ್ನೆಲ್ಲಾ ಸ್ಟ್ಯಾಚು ಮಾಡಿಬಿಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಏನು ರೆಸ್ಪಾನ್ಸ್ ಮಾಡಿದ್ದಕ್ಕೆ ನಾನು ಹೇಳಿದ್ದು ಕೇಳಿಸಲಿಲ್ವಾ ಎಂದು ಹೇಳುವ ಮೂಲಕ ಮನೆಯವರನ್ನೆಲ್ಲಾ ನಗಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಗುರೂಜಿಯ ಮಾಸ್ ಡೈಲಾಗ್

ಬ್ರಹ್ಮಾಂಡ ಗುರೂಜಿಯ ಮಾತುಗಳು ಯಾವಾಗಲು ಎಲ್ಲರನ್ನೂ ನಗು ತರಿಸುವಂತಿರುತ್ತದೆ. ಅವರ ಮುಂಡಾ ಮೋಚ್ತು ಡೈಲಾಗ್ ಕೇಳಿದ ಮನೆಯ ಸದಸ್ಯರೆಲ್ಲರೂ ಖುಷಿಯಾಗಿದ್ದಾರೆ. ಇನ್ನು ವಿನಯ್ ನೀವು ಬಯ್ಯೋಕೆ ಶುರು ಮಾಡಿದರೆ ಮಜಾವೇ ಬೇರೆ ಎಂದು ಹೇಳಿದ್ದಾರೆ. ಇದಕ್ಕೆ ಬ್ರಹ್ಮಾಂಡ ಗುರೂಜಿ ಅವರು ಹಾಳಾಗಿ ಹೋಗಲಿ ಪುಟ್ಗೊಸಿ ಪಿಂಡ ಎಲ್ಲಿಗೆ ಹೋಗುತ್ತಾನೆ ಎಂದು ಹೇಳುವ ಮೂಲಕ ಎಲ್ಲರ ಮುಖದಲ್ಲಿ ನಗುವನ್ನು ತರಿಸಿದ್ದಾರೆ.ಅಷ್ಟೇ ಅಲ್ಲದೆ ತುಕಾಲಿಯವರು ಇನ್ನು ನಮ್ಮ ಕಥೆ ಮುಂಡಾ ಮೋಚ್ತು ಎಂದು ಹೇಳಿ ಎಲ್ಲಾರ ನಗುವಿಗೆ ಕಾರಣ ಆಗಿದ್ದಾರೆ.

Leave A Reply

Your email address will not be published.