Whatsapp Chatbot: BSNL ಗ್ರಾಹಕರಿಗೆ ಆರಂಭ ಆಯಿತು ಹೊಸ ವಾಟ್ಸಾಪ್ ಸೇವೆ, ಗ್ರಾಹಕರಿಗಾಗಿ ಸರ್ಕಾರದ ಹೊಸ ಯೋಜನೆ.

BSNL ಗ್ರಾಹಕರಿಗೆ ಇನ್ನುಮುಂದೆ ವಾಟ್ಸಾಪ್ ಸೇವೆ ಸಿಗಲಿದ್ದು, ಸುರಕ್ಷಿತ ಹಾಗು ಸುಲಭ ವಿಧಾನದಲ್ಲಿ ವಾಟ್ಸಾಪ್.

BSNL Launches Whatsapp Chatbot Service: BSNL ಬಳಕೆದಾರರೆ ನಿಮಗಿದು ಸಿಹಿ ಸುದ್ದಿ, ಅದೇನೆಂದರೆ WhatsApp ಚಾಟ್‌ಬಾಟ್ ಸೇವೆಯನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅಧಿಕೃತವಾಗಿ ಪ್ರಾರಂಭಿಸಿದೆ. ಬಳಕೆದಾರರು ಬಹಳ ಸರಳವಾಗಿ ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ. ನೀವು ಬಿಎಸ್‌ಎನ್‌ಎಲ್ ಬಳಕೆದಾರರಾಗಿದ್ದಾರೆ ಈಗ ಕಂಪನಿ ಅಧಿಕೃತವಾಗಿ ತನ್ನ WhatsApp ಚಾಟ್‌ಬಾಟ್ ಈಗ ಲೈವ್ ಆಗಿದ್ದು ಬಳಕೆದಾರರು ಸಲೀಸಾಗಿ ಚಾಟ್ ಅನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.

ಬಳಕೆದಾರರಿಗೆ ಭಾರತ್ ಫೈಬರ್‌ನ ವಿವಿಧ ಸೇವೆಗಳನ್ನು ಪ್ರವೇಶಿಸಲು ಅನುಕೂಲಕರ ಮಾರ್ಗವನ್ನು ನೀಡುತ್ತದೆ. ಬಿಎಸ್‌ಎನ್‌ಎಲ್‌ ನಿಂದ ಈ ಚಾಟ್‌ಬಾಟ್ ಭಾರತ್ ಫೈಬರ್ ಗ್ರಾಹಕರಿಗೆ ವರ್ಚುವಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು BSNL ಹೇಳುತ್ತದೆ.

BSNL Launches Whatsapp Chatbot Service
Image Credit: Newscrab

BSNL ನಲ್ಲಿ WhatsApp ಚಾಟ್‌ಬಾಟ್ ಬಳಸುವ ವಿಧಾನ

BSNL ನಲ್ಲಿ WhatsApp ಸಂವಾದವನ್ನು ಪ್ರಾರಂಭಿಸಲು ಬಳಕೆದಾರರು ಸರಳವಾಗಿ ‘Hi’ ಎಂದು ಟೈಪ್ ಮಾಡಿ ಮತ್ತು ಅದನ್ನು 18004444 ಕಳುಹಿಸಬಹುದು. BSNL ನಿಂದ ಅಧಿಕೃತ ಅಪ್‌ಡೇಟ್ ಪ್ರಕಾರ BSNL ವಾಟ್ಸಾಪ್ ಚಾಟ್‌ಬಾಟ್‌ನ ವೈಶಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ. ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಚಾಟ್‌ಗೆ ಹೋಗಬಹುದು https://wa.me/18004444 ಮೂಲಕ ನಿಮ್ಮ ದೂರು / ಸಮಸ್ಯೆಗಳನ್ನು ಕೇಳಬಹುದು. ಇದರೊಂದಿಗೆ ನೀವು ಹೊಸ ಬಿಎಸ್‌ಎನ್‌ಎಲ್ ಫೈಬರ್ ಕನೆಕ್ಷನ್ ಸಹ ಬುಕ್ ಮಾಡಬಹುದು.

ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಬಿಎಸ್‌ಎನ್‌ಎಲ್ ಚಾಟ್‌ಬಾಟ್ ಮೂಲಕ ನೇರವಾಗಿ ದೂರನ್ನು ಬುಕ್ ಮಾಡುವ ಮೂಲಕ ಗ್ರಾಹಕರು ಸಮಸ್ಯೆಗಳನ್ನು ಅಥವಾ ಕಾಳಜಿಗಳನ್ನು ವರದಿ ಮಾಡಬಹುದು. BSNL ಬಳಕೆದಾರರು ಸಲ್ಲಿಸಿದ ದೂರುಗಳ ಸ್ಟೇಟಸ್ ಬಗ್ಗೆ ಮಾಹಿತಿ ಪಡೆಯಬಹುದು. ಈ ಯೋಜನೆ ಬದಲಾವಣೆ ವೈಶಿಷ್ಟ್ಯದ ಮೂಲಕ ಅಸ್ತಿತ್ವದಲ್ಲಿರುವ ಯೋಜನೆಗೆ ಬದಲಾವಣೆಗಳನ್ನು ಅನ್ವೇಷಿಸಿ ಮತ್ತು ರಿಕ್ವೆಸ್ಟ್ ನೀಡಬಹುದು.

Whatsapp Chatbot Service
Image Credit: Telegraphindia

ಸುರಕ್ಷಿತ ಆನ್‌ಲೈನ್‌ನಲ್ಲಿ ಬಿಲ್ ಪಾವತಿ

BSNL ಬಳಕೆದಾರರು ಇನ್ನು ಮುಂದೆ ಸುರಕ್ಷಿತ ಆನ್‌ಲೈನ್ ಪಾವತಿ ವೈಶಿಷ್ಟ್ಯವನ್ನು ಬಳಸಿಕೊಂಡು ಗ್ರಾಹಕರು ಲ್ಯಾಂಡ್‌ಲೈನ್ ಮತ್ತು FTTH ಬಿಲ್‌ಗಳನ್ನು ಪಾವತಿಸಬಹುದು. ನಿಮ್ಮ ಬಿಲ್‌ಗಳು, ಇನ್‌ವಾಯ್ಸ್‌ಗಳು ಮತ್ತು ಬಳಕೆಯ ವಿವರಗಳನ್ನು ಪ್ರವೇಶಿಸಿ ಮತ್ತು ವೀಕ್ಷಿಸಬಹುದು. ನಿಮ್ಮ ದಾಖಲೆಗಳಿಗಾಗಿ PDF ಇನ್‌ವಾಯ್ಸ್‌ಗಳನ್ನು ಡೌನ್‌ಲೋಡ್ ಮಾಡಿ. ಬಿಎಸ್‌ಎನ್‌ಎಲ್ ಬಳಕೆದಾರರು ವಿವರವಾದ ಟ್ರಾನ್ಸಾಕ್ಷನ್ ಹಿಸ್ಟರಿಯನ್ನು ಸಹ ನೀವು ಟ್ರ್ಯಾಕ್ ಮಾಡಬಹುದು.

Leave A Reply

Your email address will not be published.