BSNL Prepaid Plan: 365 ದಿನ ಉಚಿತ ಕರೆ ಮತ್ತು ಡೇಟಾ, BSNL ಗ್ರಾಹಕರಿಗೆ ಇನ್ನೊಂದು ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ.
365 ದಿನಗಳ ಆಕರ್ಷಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ BSNL.
BSNL Prepaid Plan: BSNL ಭಾರತದ ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ತನ್ನ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. BSNL ಈಗಾಗಲೇ ಹಲವು ರೀತಿಯ ಆಫರ್ ಹಾಗು ಪ್ರಯೋಜನಗಳನ್ನು ತನ್ನ ಬಳಕೆದಾರರಿಗೆ ನೀಡಿದ್ದು, ಈಗ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ಅನ್ನು ಬಹಳ ಕಡಿಮೆ ಬೆಲೆಗೆ ನೀಡುತ್ತಿದೆ.
ಅಷ್ಟೇ ಅಲ್ಲದೆ ಈ ಪ್ಲಾನ್ ನಲ್ಲಿ ಹಲವು ಪ್ರಯೋಜನಗಳನ್ನು ನಾವು ಕಾಣಬಹುದಾಗಿದೆ. ಈ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿದರೆ ವರ್ಷಕ್ಕೆ ಒಮ್ಮೆ ರಿಚಾರ್ಜ್ ಮಾಡಿದರೆ ನಿಮ್ಮ ಕೆಲಸ ಮುಗಿದಂತೆ, ಪ್ರತಿ ತಿಂಗಳು ರಿಚಾರ್ಜ್ ಮಾಡುವ ತಲೆನೋವು ನಿಮಗೆ ಇರುವುದಿಲ್ಲ.
BSNL ವಾರ್ಷಿಕ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ
ಇತರ ಎಲ್ಲಾ ಸಿಮ್ ಗಳಿಂತ ಉತ್ತಮವಾದ ಕಡಿಮೆ ಬೆಲೆಯ ಪ್ಲಾನ್ ಅನ್ನು BSNL ಜಾರಿಗೆ ತಂದಿದೆ.ಬಿಎಸ್‌ಎನ್‌ಎಲ್ ಈ ಯೋಜನೆ ನಿಮಗೆ ಪೂರ್ತಿ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಬಿಎಸ್‌ಎನ್‌ಎಲ್ ಯೋಜನೆಯು ಸಿಮ್ ಅನ್ನು ದೀರ್ಘಕಾಲದ ವರೆಗೆ ಸಕ್ರಿಯವಾಗಿರಿಸಿಕೊಳ್ಳಬೇಕಾದ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ. ಆರ್ಥಿಕತೆಯ ವಿಷಯದಲ್ಲಿ ಇದಕ್ಕಿಂತ ಉತ್ತಮವಾದ ಯಾವುದೇ ಯೋಜನೆಯನ್ನು ನೀವು ಕಂಡುಕೊಳ್ಳುವುದಿಲ್ಲ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.
BSNL 1515 Rs Prepaid Plan
BSNL ನ ಈ ಯೋಜನೆಯಲ್ಲಿ ನೀವು 365 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ. ಯೋಜನೆಯೊಂದಿಗೆ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ದೈನಂದಿನ 2GB ಡೇಟಾ ಖಾಲಿಯಾದ ನಂತರವೂ ನಿಮ್ಮ ಇಂಟರ್ನೆಟ್ ಸಂಪರ್ಕವು ನಿಲ್ಲುವುದಿಲ್ಲ ಆದರೆ ಇಲ್ಲಿ ವೇಗವು 40kbps ಗೆ ಕಡಿಮೆಯಾಗುತ್ತದೆ.
ಈ ಯೋಜನೆಯಲ್ಲಿ ನೀವು ಸಂಪೂರ್ಣ 730GB ಡೇಟಾವನ್ನು ಪಡೆಯುತ್ತೀರಿ. ಭಾರತದಲ್ಲಿ Airtel, Jio, Vodafone Idea ನಂತಹ ಕಂಪನಿಗಳು 365 ದಿನಗಳ ವ್ಯಾಲಿಡಿಟಿಯೊಂದಿಗೆ 2,000 ರೂ.ಗಳಿಂದ 3,000 ರೂ.ಗಳಿಗೆ ಯೋಜನೆಗಳನ್ನು ನೀಡುತ್ತವೆ. ಆದರೆ ಬಿಎಸ್‌ಎನ್‌ಎಲ್ ರೂ 1,515 ಯೋಜನೆಯು ತುಂಬಾ ಅಗ್ಗವಾಗಿದೆ. ಇದರಲ್ಲಿ ನೀವು ಅನಿಯಮಿತ ವಾಯ್ಸ್ ಕರೆಯನ್ನು ಪಡೆಯುತ್ತೀರಿ. ಗಮನಿಸಿ ಇದು ಇತರ ಟೆಲಿಕಾಂ ಸೇವಾ ಪೂರೈಕೆದಾರರಂತೆ ಕಂಪನಿಯು ಯೋಜನೆಯೊಂದಿಗೆ OTT ಚಂದಾದಾರಿಕೆಯನ್ನು ಒದಗಿಸುವುದಿಲ್ಲ.