TRAI: ಪ್ರತಿ ತಿಂಗಳು ಟಿವಿ ರಿಚಾರ್ಜ್ ಮಾಡುವವರಿಗೆ ಸಂತಸದ ಸುದ್ದಿ, ಇನ್ನೊಂದು ಮಹತ್ವದ ಘೋಷಣೆ.
ಇನ್ನುಮುಂದೆ ಕಡಿಮೆ ರಿಚಾರ್ಜ್ ಮಾಡಿದರೂ ಟಿವಿ ಆನ್ ಇರಲಿದೆ.
Cable TV Bill Reduction: ಪ್ರಸ್ತುತ ಜನರು ಹಣದುಬ್ಬರದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯ ಬಿಸಿ ಜನರನ್ನು ಕಂಗಾಲು ಮಾಡುತ್ತಿದೆ. ವರ್ಷದ ಪ್ರತಿ ತಿಂಗಳ ಆರಂಭ ಒಂದೊಂದು ವಸ್ತುವಿನ ಬೆಲೆಯಲ್ಲಿ ಏರಿಕೆ ಪರಿಣಾಮವನ್ನು ಎದುರಿಸಬೇಕಾಗಿದೆ. ಇದೀಗ ಕೆಲವು ದಿನಗಳ ಹಿಂದೆ ಕೆಲ ವಸ್ತುಗಳ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬರುತ್ತಿದೆ.

ದೂರದರ್ಶನ ಬಳಸುವವರಿಗೆ ಮಹತ್ವದ ಮಾಹಿತಿ
ಟೈಮ್ ಪಾಸ್ ಮಾಡಲು ಜನರು ಹೆಚ್ಚಾಗಿ ಟಿವಿಗಳಲ್ಲಿ ಸಿನಿಮಾ, ಧಾರಾವಾಹಿಗಳನ್ನು ನೋಡುತ್ತಲೇ ಇರುತ್ತಾರೆ. ಇನ್ನು ಡಿಟಿಹೆಚ್ ಕಂಪನಿಗಳು ವಿವಿಧ ರೀತಿಯ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತದೆ. ಟೆಲಿಕಾಂಕಂಪನಿಗಳ ರೀತಿಯೇ ಡಿಟುಹೆಚ್ ಕಂಪನಿಗಳ ನಡುವೆಯೂ ಸ್ಪರ್ಧೆ ಇರುತ್ತದೆ. ಇದೀಗ ಬೆಲೆ ಏರಿಕೆಯ ಪರಿಣಾಮ ಎದುರಿಸುತ್ತಿರುವ ಜನರಿಗೆ ಸಿಹಿ ಸುದ್ದಿ ಲಭಿಸಿದೆ. ಟಿವಿ ರಿಚಾರ್ಜ್ ಗಳ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗುವ ಸಾಧ್ಯತೆ ಇದೆ.
ಟಿವಿ ಕೇಬಲ್ ಬಿಲ್ ಗಳ ದರ ಇಳಿಕೆ ಸಾಧ್ಯತೆ
ಪ್ರಸ್ತುತ ಬೆಲೆ ಏರಿಕೆಯ ಪರಿಣಾಮವಾಗಿ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಇತ್ತೀಚಿಗೆ ಹಣದ ಖರ್ಚು ಹೆಚ್ಚಾಗುತ್ತಿದೆ. ಬೆಲೆ ಏರಿಕೆಯ ಪರಿಣಾಮ ಒಂದು ರೀತಿಯಲ್ಲಿ ಡಿಟುಹೆಚ್ ಕಂಪನಿಗಳ ಮೇಲೇ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಡಿಟುಹೆಚ್ ಆಪರೇಟರ್ ಗಳಿಗೆ ದೊಡ್ಡ ಪರಿಹಾರ ಸಿಗಲಿದೆ. ಬಳಕೆದಾರರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.

ಟ್ರಾಯ್ ಶಿಫಾರಸ್ಸು ಮಾಡಿರುವ ಪ್ರಕಾರ, ಹಣಕಾಸು ವರ್ಷದಲ್ಲಿ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸಬಾರದು ಎಂದು ಪ್ರಸ್ತಾಪಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಡಿಟುಹೆಚ್ ಆಪರೇಟರ್ ಗಳ ಪರವಾನಗಿ ಶುಲ್ಕವನ್ನು ಶೂನ್ಯಕ್ಕೆ ತರಲು ಪ್ರಸ್ತಾಪಿಸಲಾಗಿದೆ. ಶುಲ್ಕಗಳನ್ನು ಸಂಪೂರ್ಣವಾಗಿ ಕೊನೆಗೊಳಿಸದೆ ಕ್ರಮೇಣ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ.
ಡಿಟಿಹೆಚ್ ಪ್ಲಾಟ್ ಫಾರಂ ಗಳಲ್ಲಿ ಸಕ್ರಿಯ ಚಂದಾದಾರರ ಸಂಖ್ಯೆ ಪ್ರಸ್ತುತ ಕಡಿಮೆಯಾಗಿದೆ. ಟ್ರಾಯ್ ಪ್ರಸ್ತುತ ಸುಂಕದಲ್ಲಿ 8 % ಮತ್ತು ಎಜಿಆರ್ 3 % ಕಡಿತವನ್ನು ಮನವಿ ಮಾಡಿದೆ. ಇನ್ನು ಈ ಕಡಿತದಿಂದ ಮುಂದಿನ ದಿನಗಳಲ್ಲಿ ಜನರು ರಿಚಾರ್ಜ್ ಮಾಡುವ ಬಿಲ್ ನಲ್ಲಿ ಕೂಡ ಕಡಿಮೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಮುಂದಿನ ದಿನಗಳಲ್ಲಿ ಜನರ ಟಿವಿ ರಿಚಾರ್ಜ್ ಕೊಂಚ ಕಡಿಮೆ ಆಗುವ ಸಾಧ್ಯತೆ ಇದೆ ತಿಳಿದುಬಂದಿದೆ.