Canara Bank: ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್, ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ ಬ್ಯಾಂಕ್
ಬಡ್ಡಿದರಲ್ಲಿ ಬಾರಿ ಬದಲಾವಣೆ ಮಾಡಿದ ಕೆನರಾ ಬ್ಯಾಂಕ್, ಗ್ರಾಹಕರಿಗೆ ಬಂಪರ್ ಆಫರ್.
Canara Bank Interest Rate Hike: ಕೆನರಾ ಬ್ಯಾಂಕ್ (Canara Bank) ತನ್ನ ಬಡ್ಡಿದರದಲ್ಲಿ ಬಹಳ ಬದಲಾವಣೆಯನ್ನು ಮಾಡಿದೆ. ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್‌ಗಳ (Fixed Deposit) ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಪರಿಷ್ಕರಣೆಯ ಬಳಿಕ ಹಿರಿಯ ನಾಗರಿಕರು 444 ದಿನಗಳ ಅವಧಿಯ ಎಫ್‌ಡಿಗೆ 7.75% ವರೆಗೆ ಬಡ್ಡಿ ಗಳಿಸಬಹುದು. ಆದರೆ ಸಾಮಾನ್ಯ ನಾಗರಿಕರು 7.25% ವರೆಗೆ ಬಡ್ಡಿ ಪಡೆಯಬಹುದು.
ಕೆನರಾ ಬ್ಯಾಂಕ್ ಈಗ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಇರುವ ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಶೇಕಡ 4.00 ರಿಂದ ಶೇಕಡ 6.70 ನಡುವೆ ನೀಡುತ್ತದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಕೆನರಾ ಬ್ಯಾಂಕ್ ನೀಡುವ ಇತ್ತೀಚಿನ ಎಫ್‌ಡಿ ದರಗಳು ಅಕ್ಟೋಬರ್ 27, 2023 ರಿಂದ ಜಾರಿಗೆ ಬರುತ್ತದೆ.

ಕೆನರಾ ಬ್ಯಾಂಕ್ ಎಫ್‌ಡಿ ದರಗಳು
91 ಮತ್ತು 179 ದಿನಗಳ ನಡುವಿನ ಅವಧಿಯ ಡೆಪಾಸಿಟ್‌ಗಳಿಗೆ ಕೆನರಾ ಬ್ಯಾಂಕ್ 5.50% ಬಡ್ಡಿದರವನ್ನು ನೀಡುತ್ತಿದೆ. 180 ಮತ್ತು 269 ದಿನಗಳ ನಡುವೆ ಮಾಡಿದ ಡೆಪಾಸಿಟ್‌ಗಳಿಗೆ ದರವು 6.15% ಆಗಿದೆ. 270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವು 6.25% ಆಗಿದ್ದರೆ, ಒಂದು ವರ್ಷದಲ್ಲಿ ಕೊನೆಯಾಗುವ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವು ಕೇವಲ 6.90% ಆಗಿದೆ. ಕೆನರಾ ಬ್ಯಾಂಕ್ 7 ರಿಂದ 45 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 4ರಷ್ಟು ಬಡ್ಡಿದರವನ್ನು ನೀಡುತ್ತದೆ. ಕೆನರಾ ಬ್ಯಾಂಕ್ 46 ರಿಂದ 90 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 5.25 ಬಡ್ಡಿದರವನ್ನು ನೀಡುತ್ತದೆ.
ಕೆನರಾ ಬ್ಯಾಂಕ್ ನಿವ್ವಳ ಲಾಭ ಹೆಚ್ಚಳ
ಕೆನರಾ ಬ್ಯಾಂಕ್ ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವರ್ಷದ ತನ್ನ ಹಣಕಾಸು ವರದಿಗಳನ್ನು ಅಕ್ಟೋಬರ್ 26ರಂದು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 2023 ರ ನಿವ್ವಳ ಲಾಭವು 3,606 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷ ಅಂದರೆ ಸೆಪ್ಟೆಂಬರ್ 2022 ರ ನಿವ್ವಳ ಲಾಭವು 2,525 ಕೋಟಿ ರೂಪಾಯಿ ಆಗಿದೆ.
444 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿಗಳ ಮೇಲೆ ಬ್ಯಾಂಕ್ ಗರಿಷ್ಠ 7.25% ಆದಾಯವನ್ನು ಪಾವತಿಸುತ್ತಿದೆ. ಕೆನರಾ ಬ್ಯಾಂಕ್ 1 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ ಡೆಪಾಸಿಟ್‌ಗೆ 6.85% ಬಡ್ಡಿದರವನ್ನು ನೀಡುತ್ತಿದೆ. 3 ವರ್ಷ ಮತ್ತು ಮೇಲ್ಪಟ್ಟ ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಶೇಕಡ 6.80 ರಷ್ಟು ಬಡ್ಡಿದರ ನೀಡುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದರೆ 10 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಕೆನರಾ ಬ್ಯಾಂಕ್ 6.70% ಬಡ್ಡಿದರವನ್ನು ಜಮೆ ಮಾಡುತ್ತದೆ.

ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ
ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 0.50 ರಷ್ಟು ಹೆಚ್ಚವರಿ ಬಡ್ಡಿದರವನ್ನು ನೀಡುತ್ತದೆ. 2 ಕೋಟಿ ಮತ್ತು 180 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗೆ ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ.
444 ದಿನಗಳ ಎಫ್‌ಡಿ ಮೇಲೆ ಕೆನರಾ ಬ್ಯಾಂಕ್ 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚವರಿಯಾಗಿ ಶೇಕಡ 0.60 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ಕಾಲೇಬಲ್ ಡೆಪಾಸಿಟ್‌ಗಳ ಮೇಲೆ ಶೇಕಡ 7.85 ಮತ್ತು ನಾನ್ ಕಾಲೇಬಲ್ ಡೆಪಾಸಿಟ್‌ಗಳ ಮೇಲೆ ಶೇಕಡ 8 ರಷ್ಟು ಬಡ್ಡಿದರವನ್ನು ನೀಡುತ್ತದೆ.