Dasara Holidays: ದಸರಾ ರಜೆಯ ಖುಷಿಯಲ್ಲಿದ್ದ ಮಕ್ಕಳಿಗೆ ಹೊಸ ಮಾರ್ಗಸೂಚಿ, ರಾಜತ ಸರ್ಕಾರ ಆದೇಶ.

ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆ ಕಡಿತ

Cancelled Dasara Holidays For Schools In The State: ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದ ರಜೆಯ (Dasara Holidays) ನಿರೀಕ್ಷೆಯಲ್ಲಿದ್ದಾರೆ.

ದಸರಾ ರಜೆ ಅಂದರೆ ಸಾಕು ಎಲ್ಲರೂ ಖುಷಿಯಿಂದ ಕುಣಿದಾಡಿ ಬಿಡುತ್ತಾರೆ. ದಸರಾ ರಜೆಯಲ್ಲಿ ಪ್ರವಾಸ, ಹಬ್ಬ, ಊರು ಎಂದು ರಜೆಯನ್ನು ಸಂಭ್ರಮದಿಂದ ಕಳೆಯುತ್ತಾರೆ. ಪರೀಕ್ಷೆ ಎಲ್ಲ ಮುಗಿಸಿ ದಸರಾ ರಜೆಗೆ ಕಾಯುವ ವಿದ್ಯಾರ್ಥಿ ಹಾಗು ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಬೇಸರದ ಸುದ್ದಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸರ್ಕಾರ ದಸರಾ ರಜೆಯ ಮಾರ್ಗಸೂಚಿ ಪ್ರಕಟ ಮಾಡಿದೆ. 

Cancelled Dasara Holidays For Schools In The State
Image Credit: News18

ದಸರಾ ರಜೆಯಲ್ಲಿ ಕಡಿತ
ಪ್ರತಿ ವರ್ಷದ ಅಕ್ಟೋಬರ್ ತಿಂಗಳು ರಜೆಯಲ್ಲೇ ಕಳೆಯುವ ವಿದ್ಯಾರ್ಥಿಗಳಿಗೆ ಇದು ಬೇಸರದ ಸಂಗತಿಯಾಗಿದೆ. ಅಕ್ಟೋಬರ್ 02 ನೇ ತಾರೀಕಿನಿಂದ ಅಕ್ಟೋಬರ್ 29 ರ ವರೆಗೆ ಶಾಲೆಗಳಿಗೆ ರಜೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಇಷ್ಟೊಂದೆಲ್ಲಾ ರಜೆ ನೀಡಲಾಗುವುದಿಲ್ಲವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ವಿವಿಧ ಕಾರಣಗಳಿಂದ ದಸರಾದ ಒಂದು ತಿಂಗಳ ರಜೆಯಲ್ಲಿ ಕಡಿತಗೊಳಿಸಲಾಗಿದೆ.

ಕೊರೊನ ಎಫೆಕ್ಟ್ 
ಹಿಂದಿನ ವರ್ಷದಲ್ಲಿ ಕೊರೊನ ಕಾರಣದಿಂದ ಅಧಿಕ ರಜೆ ಮಕ್ಕಳಿಗೆ ಸಿಕ್ಕಿದ್ದರಿಂದ ತರಗತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಾಗು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಸರ್ಕಾರ ದಸರಾ ರಜೆಯನ್ನು ಕಡಿತಗೊಳಿಸಿತ್ತು. ಆದರೆ ಈ ವರ್ಷ ಕೊರೊನ ಸಮಸ್ಯೆ ಇಲ್ಲದೆ ಇದ್ದರು ರಜೆಯನ್ನು ಕಡಿತಗೊಳಿಸಿರುವುದು ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಬೇಸರ ಉಂಟುಮಾಡಿದೆ.

Dasara holiday updates
Image Credit: Deccanherald

ಶಾಲಾ ರಜೆಗಳ ಮಾಹಿತಿ 
ಈ ವರ್ಷವೂ ದಸರಾ ರಜೆಯಲ್ಲಿ ಬದಲಾವಣೆಗಳಿದ್ದು ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 08 ರಿಂದ ಅಕ್ಟೋಬರ್ 24 ರ ವರೆಗೆ ರಜೆ ನೀಡಲಾಗಿದೆ. ವಿಶೇಷ ಶಾಲೆಗಳಿಗೆ ದಸರಾ ರಜೆಯನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. ಹಾಗಾಗಿ ಶಿಕ್ಷಕರು ತಮ್ಮ ಕರ್ತವ್ಯ ಕ್ಕೆ ಹಾಜರಾಗಬೇಕಾಗಿದೆ. ಈ ರೀತಿಯಾಗಿ ದಸರಾ ರಜೆಯಲ್ಲಿನ ಬದಲಾವಣೆಯು ವಿದ್ಯಾರ್ಥಿಗಳು ಹಾಗು ಶಿಕ್ಷಕರ ಮೇಲೆ ಪ್ರಭಾವ ಬೀರಿದೆ.

Leave A Reply

Your email address will not be published.