Ration Card: ಬಿಡುಗಡೆ ಆಯಿತು ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್, ಈ ಕುಟುಂಬಗಳಿಗೆ ಸಿಗಲ್ಲ ಈ ಉಚಿತ ಸೇವೆಗಳು.
ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ.
Cancelled Ration Card List: ರಾಜ್ಯದಲ್ಲಿನ ಯಾವುದೇ ಯೋಜನೆಯ ಫಲಾನುಭವಿಗಳಾಗಲು ಪಡಿತರ ಚೀಟಿ ಬಹಳ ಮುಖ್ಯ ಆಗಿದೆ. ಹಲವರು ಪಡಿತರ ಚೀಟಿ ಇಲ್ಲದೆ ಚಿಂತಿಸುತ್ತಿದ್ದಾರೆ, ಇನ್ನು ಹಲವು ಜನರು ಪಡಿತರ ಚೀಟಿಯನ್ನು ಯಾವುದಕ್ಕೂ ಉಪಯೋಗಿಸದೇ ಇಟ್ಟುಕೊಂಡಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಪಡಿತರ ಚೀಟಿ ಇರುವುದು ಕಾನೂನು. ಸರಕಾರದಿಂದ ಸೌಲಭ್ಯ ಪಡೆಯಲು ಈ ಪಡಿತರ ಚೀಟಿ ಬಹಳ ಮುಖ್ಯ ಆಗಿದ್ದು, ಕೆಲವರು ಇದನ್ನು ಉಪಯೋಗಿಸಿಕೊಳ್ಳುತ್ತಿಲ್ಲ ಅಂತಾದರೆ ಅವರು ಬಡವರು ಅಲ್ಲ ಅಂತ ಸಾಬೀತಾಗುತ್ತದೆ. ಹಾಗಾಗಿ ಕಳೆದ 6 ತಿಂಗಳಿನಿಂದ ಪಡಿತರ ಪಡೆಯದೇ ಇರುವವರ ಪಡಿತರ ಚೀಟಿಯನ್ನು ಸರ್ಕಾರ ರದ್ದು ಮಾಡಿದೆ.

ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ
ಪಡಿತರ ಚೀಟಿಯನ್ನು ರದ್ದು ಮಾಡುವ ಕುರಿತು ಆಹಾರ ಇಲಾಖೆ ವರದಿ ನೀಡಿದ್ದು , ಯಾರು ಪ್ರತಿ ತಿಂಗಳು ರೇಷನ್ ಪಡೆಯುದಿಲ್ಲವೋ ಅಂತಹವರ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ. ಅದೇ ರೀತಿ ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ನ್ನು ಕೂಡ ರದ್ದು ಮಾಡಲಾಗಿದೆ.ಒಂದು ವೇಳೆ ರೇಷನ್ ಕಾರ್ಡ್ ರದ್ದಾಗಿದ್ದರೆ ನಿಮಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಸೌಲಭ್ಯ ಸುಗುವುದಿಲ್ಲ .ಕಳೆದ 6 ತಿಂಗಳಿನಿಂದ ಪಡಿತರ ಪಡೆಯದವರ ಪಡಿತರ ಚೀಟಿಯನ್ನು ಆಹಾರ ಇಲಾಖೆ ರದ್ದು ಮಾಡಿದ್ದು , ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೀಯ ಎಂದು ಪರೀಕ್ಷೆ ಮಾಡುವ ವಿಧಾನ
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ವೋ ಅಂತ ಪರಿಶೀಲಿಸಲು ಬಯಸಿದರೆ ಮೊದಲು https://ahara.kar.nic.in/ಈ ವೆಬ್ ಸೈಟ್ ಗೆ ಭೇಟಿ ನೀಡಿ. ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಡೆಸ್ಕ್ ಟಾಪ್ ವೀವ್ (desk top view) ಎನ್ನುವ ಆಯ್ಕೆಯನ್ನು ಸೆಲೆಕ್ಟ್ (select) ಮಾಡಿಕೊಳ್ಳಿ. ವೆಬ್ಸೈಟ್ ಗೆ ಹೋದ ನಂತರ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು,ನಂತರ ನೀವು ‘ರಾಜ್ಯ ಪೋರ್ಟಲ್ ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ನಂತರ ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ಇದರ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು ಮತ್ತು ನಂತರ ನಿಮ್ಮ ಬ್ಲಾಕ್ ಅನ್ನು ಸಹ ಆಯ್ಕೆ ಮಾಡಬೇಕು, ನಂತರ ನೀವು ನಿಮ್ಮ ಪಂಚಾಯತ್ ಅನ್ನು ಸಹ ಆಯ್ಕೆ ಮಾಡಬೇಕು.

ಈಗ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಸಹ ಹೇಳಬೇಕು, ನಂತರ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ, ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ, ಈಗ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಹುಡುಕಬೇಕು, ನಂತರ ಹುಡುಕಿದ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಅಂತ ಅರ್ಥ. ಆದರೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಅಂತ ಅರ್ಥ. ಒಂದು ವೇಳೆ ನೀವು ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ಲೋಪದೋಷ ಇಲ್ಲದೆ ಇದ್ದರೂ ಕೂಡ ನಿಮ್ಮ ಹೆಸರು ಬಂದಿದ್ದರೆ ತಕ್ಷಣಕ್ಕೆ ಆಹಾರ ಇಲಾಖೆಯ ಕಚೇರಿಗೆ ಹೋಗಿ ರೇಷನ್ ಕಾರ್ಡ್ ರದ್ದುಪಡಿಸಿರುವುದನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಂದು ಅರ್ಜಿ ಸಲ್ಲಿಸಬೇಕು. ಈ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣ ಮಾಹಿತಿ ಪಡೆಯಿರಿ.