Crash Detection: ವಾಹನ ಚಾಲಕರಿಗೆ ಗೂಗಲ್ ನಿಂದ ಹೊಸ ಸೇವೆ ಆರಂಭ, ನಿಮ್ಮ ಜೀವ ಉಳಿಸಲು ಹೊಸ ಫೀಚರ್ ಬಿಡುಗಡೆ.
ಅಪಘಾತವಾದ ಸಂದರ್ಭದಲ್ಲಿ ಗೂಗಲ್ ನಿಮಗೆ ಸಹಾಯ ಮಾಡಲಿದೆ, ಗೂಗಲ್ ನಿಂದ ಹೊಸ ಫೀಚರ್.
Car Crash Detection Features: ದೇಶದಲ್ಲಿ ವಾಹನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಿನ ಬೆಳಗಾದರೆ ರಸ್ತೆಯಲ್ಲಿ ಕಾಲಿಡಲು ಜಾಗ ಇಲ್ಲದೆ ಇರೋ ಪರಿಸ್ಥಿತಿ ಇದೆ. ಒಂದು ಮನೆಯಲ್ಲಿ ಒಂದು ವಾಹನ ಅಲ್ಲದೆ ಹತ್ತಾರು ವಾಹನಗಳನ್ನು ಇಟ್ಟುಕೊಂಡಿರುತ್ತಾರೆ.
ಈವಾಗ ರಸ್ತೆಯಲ್ಲಿ ಎಷ್ಟು ವಾಹನಗಳ ಸಂಖ್ಯೆ ಇದೆಯೋ ಅದಕ್ಕಿಂತ ಹೆಚ್ಚು ಅಪಘಾತಗಳ ಸಂಖ್ಯೆ ಇರುತ್ತದೆ.ಪ್ರತಿದಿನ ಸಾವಿರಾರು ಸಣ್ಣ ಮತ್ತು ದೊಡ್ಡ ರಸ್ತೆ ಅಪಘಾತಗಳು ಜರುಗುತ್ತಲೇ ಇರುತ್ತವೆ. ಅದರಲ್ಲೂ ಬೆಂಗಳೂರಂತ ಮಹಾನಗರಗಳಲ್ಲಿ ಅಪಘಾತಗಳಿಗೇನೂ ಕೊರತೆಯಿಲ್ಲ. ಅಪಘಾತವಾದ ಸಂದರ್ಭದಲ್ಲಿ ಅನೇಕರು ಸರಿಯಾದ ಚಿಕಿತ್ಯೆ ಸಿಕ್ಕದೆ ಪ್ರಾಣ ಬಿಟ್ಟಿರುವ ಘಟನೆ ಹೆಚ್ಚಾಗಿದೆ . ಆದ್ದುದರಿಂದ ಗೂಗಲ್ (Google) ಒಂದು ಮಹತ್ವವಾದ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಗೂಗಲ್ನ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್
ಗೂಗಲ್ನ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ (Car crash detection features) ಭಾರತದಲ್ಲಿ ಆಗುವ ಕಾರು ಅಪಘಾತಗಳಲ್ಲಿ ಸಿಲುಕಿದ ಪ್ರಯಾಣಿಕರ ಜೀವವನ್ನು ಉಳಿಸುವಲ್ಲಿ ಇನ್ಮುಂದೆ ಬಳಕೆ ಆಗಲಿದೆ. 2019 ರಲ್ಲಿಯೇ ಈ ಫೀಚರ್ಸ್ ಅನ್ನು ಗೂಗಲ್ ಘೋಷಣೆ ಮಾಡಿತ್ತು. ಆದರೆ, ಈವರೆಗೂ ಯುಎಸ್ ಬಳಕೆದಾರರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಆದರೆ ಇನ್ಮುಂದೆ ಗೂಗಲ್ನ ಈ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ಭಾರತ, ಆಸ್ಟ್ರಿಯಾ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ವಿಟ್ಜರ್ಲೆಂಡ್ನ ಜನರಿಗೆ ಲಭ್ಯ ಇರಲಿದೆ.
ನೀವಿಲ್ಲಿ ಗನಿಸಬೇಕಾದ ವಿಷಯ ಏನೆಂದರೆ ಈ ವಿಶೇಷ ಫೀಚರ್ಸ್ ಗೂಗಲ್ನ ಪಿಕ್ಸೆಲ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅಂದರೆ ಪಿಕ್ಸೆಲ್ 4A, ಪಿಕ್ಸೆಲ್ 6A, ಪಿಕ್ಸೆಲ್ 7, ಪಿಕ್ಸೆಲ್ 7 ಪ್ರೊ, ಪಿಕ್ಸೆಲ್ 7A, ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್ಗಳಲ್ಲಿ (Pixel 4A, Pixel 6A, Pixel 7, Pixel 7 Pro, Pixel 7A, Pixel 8 and Pixel 8 Pro phones) ಲಭ್ಯವಿರುತ್ತದೆ.
ಗೂಗಲ್ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ಕೆಲಸ ಮಾಡುವ ವಿಧಾನ
ಗೂಗಲ್ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ಕಾರು ಅಪಘಾತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಆಯ್ದ ಪಿಕ್ಸೆಲ್ ಫೋನ್ಗಳಲ್ಲಿ ವೈಯಕ್ತಿಕ ಭದ್ರತಾ ಫೀಚರ್ಸ್ ಅನ್ನು ಮೊದಲೇ ಇನ್ ಸ್ಟಾಲ್ ಮಾಡಲಾಗಿದೆ. ಈ ಫೀಚರ್ಸ್ ಕಾರ್ಯನಿರ್ವಹಿಸಲು ಫೋನ್ಗೆ ಲೊಕೇಶನ್, ಮೈಕ್ರೋಫೋನ್ ಸೇರಿದಂತೆ ಅಗತ್ಯ ಅನುಮತಿಗಳನ್ನು ನೀಡಬೇಕಾಗಿದೆ.
ಇನ್ನು ವಿಶೇಷ ಫೀಚರ್ಸ್ ಸರಿಯಾಗಿ ಕಾರ್ಯನಿರ್ವಹಿಸಲು ಫೋನ್ ಸಿಮ್ ಅಗತ್ಯವಾಗಿದ್ದು, ಈ ಫೀಚರ್ಸ್ ಆಕ್ಟಿವೇಟೆಡ್ ಫೋನ್ ಅನ್ನು ಬಳಕೆ ಮಾಡುವ ವ್ಯಕ್ತಿಗೆ ಕಾರು/ಇತರ ವಾಹನದಲ್ಲಿ ಪ್ರಯಾಣಿಸುವಾಗ ಅಪಘಾತವಾದರೆ ಅಕ್ಸೆಲೆರೊಮೀಟರ್, ಲೊಕೇಶನ್ ಮತ್ತು ಮೈಕ್ರೊಫೋನ್ ಬಳಕೆ ಮಾಡಿ ಅಪಘಾತವನ್ನು ಪತ್ತೆ ಮಾಡಲಾಗುತ್ತದೆ. ನಂತರದಲ್ಲಿ ಪಿಕ್ಸೆಲ್ ಫೋನ್ ಆಟೋಮ್ಯಾಟಿಕ್ ಆಗಿ ಸ್ಥಳೀಯ ತುರ್ತು ಸೇವೆಗಳಿಗೆ ಕರೆ ಮಾಡುತ್ತದೆ.
ಮೊಬೈಲ್ ಸಂಖ್ಯೆಗಳಿಗೆ ತುರ್ತು ಸಂದೇಶ ರವಾನೆ ಆಗುತ್ತದೆ
ಅಪಘಾತವಾದ ಸಂದರ್ಭದಲ್ಲಿ ಫೋನ್ನಲ್ಲಿ ಮೊದಲೇ ಹೊಂದಿಸಲಾದ ಸಂಖ್ಯೆಗಳಿಗೆ ತುರ್ತು ಮೆಸೆಜ್ ರವಾನೆ ಆಗಲಿದ್ದು, ಆ ಮೂಲಕ ಫೋನ್ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಆತ್ಮೀಯರು ತಕ್ಷಣದಲ್ಲೇ ಮಾಹಿತಿ ಪಡೆದುಕೊಳ್ಳಬಹುದು. ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಿದರೆ, ಫೋನ್ ಅನ್ನು ನಿರ್ವಹಿಸುವ ಯಾರಾದರೂ ಅಪಘಾತದ ನಂತರ ಫೋನ್ ಲಾಕ್ ಆಗಿದ್ದರೂ ಸಹ ಲಾಕ್ ಸ್ಕ್ರೀನ್ ಮೆಸೆಜ್ ಮತ್ತು ತುರ್ತು ವಿವರಗಳನ್ನು ನೋಡಬಹುದಾಗಿದೆ.
ಅಪಘಾತವಾದಾಗ ಫೋನ್ನಲ್ಲಿ ಮೂರು ಆಯ್ಕೆಗಳು ಬರುತ್ತವೆ. ಅಂದರೆ ಬಳಕೆದಾರರು ತುರ್ತು ಡಯಲ್ ಅನ್ನು ನಿಲ್ಲಿಸಲು 60 ಸೆಕೆಂಡುಗಳನ್ನು ನೀಡಲಾಗುತ್ತದೆ. ಅದರಲ್ಲಿ ನೋ ಕ್ರ್ಯಾಶ್, ಮೈನರ್ ಕ್ರ್ಯಾಶ್ ಮತ್ತು ಕಾಲ್ 112 (No crash, minor crash, call 112) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತವೆ. ಈ ವೇಳೆ ತುರ್ತು ಡಯಲ್ ನೊಂದಿಗೆ ಮುಂದುವರಿದರೆ ವೈದ್ಯಕೀಯ, ಅಗ್ನಿಶಾಮಕ ಅಥವಾ ಪೊಲೀಸ್ ಸಹಾಯವನ್ನು ಈ ವೇಳೆ ಸುಲಭವಾಗಿ ಪಡೆದುಕೊಳ್ಳಬಹುದು.