ATM Card: ಕಾರ್ಡ್ ಇಲ್ಲದೆ ಏಟಿಎಂ ನಲ್ಲಿ ಹಣ ತಗೆಯುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಇನ್ನು ಮುಂದೆ ಕಾರ್ಡ್ ಇಲ್ಲದೆ ATM ನಿಂದ ಹಣ ಡ್ರಾ ಮಾಡುವ ಸುಲಭ ವಿಧಾನ.
Cardless Cash Withdrawal: ಈಗಿನ ದಿನಗಳಲ್ಲಿ ಜನರು ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ATM ಕಾರ್ಡ್ ಅನ್ನು ಬಳಸುತ್ತಿದ್ದಾರೆ. ATM ಕಾರ್ಡ್ (ATM Card) ವ್ಯವಸ್ಥೆ ಬಂದಮೇಲೆ ಹೆಚ್ಚಿನ ಜನರು ಬ್ಯಾಂಕ್ ಕಡೆ ಹೋಗುವುದನ್ನೇ ಬಿಟ್ಟಿದ್ದಾರೆ.
ಇನ್ನುಮುಂದೆ ಕಾರ್ಡ್ ಬಳಸದೆ ಕೂಡ ಹಣ ತೆಗೆಯುವ ಇನ್ನು ಸುಲಭ ವ್ಯವಸ್ಥೆ ಜಾರಿಗೆ ಬಂದಿದೆ. ನಿಮ್ಮ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳನ್ನು ಮನೆಯಲ್ಲಿಯೇ ಬಿಟ್ಟು ಬಂದರು, ಡೆಬಿಟ್ ಕಾರ್ಡ್ ಬಳಸದೆಯೇ ಎಟಿಎಂನಿಂದ ಹಣವನ್ನು ಡ್ರಾ ಮಾಡಬಹುದು.
ವಂಚನೆಗೆ ಒಳಗಾಗುವ ಭಯ ಬೇಡ
ಈ ಸೌಲಭ್ಯ ಬಳಸುವ ಮೂಲಕ ನಿಮ್ಮ ಕಾರ್ಡ್ ಡೇಟಾ ಕಳವಾಗುತ್ತೆ ಎಂದು ಚಿಂತಿಸಬೇಕಾಗಿಲ್ಲ. ಇದರ ಜೊತೆ ಎಟಿಎಂನಲ್ಲಿ ವಂಚಕರು ಅಳವಡಿಸುವ ಸಿಕ್ರೇಟ್ ಕ್ಯಾಮಾರಗಳ ಮೂಲಕ ಪಿನ್ ಕಳವಾಗುತ್ತೆ ಎಂಬ ಭಯವು ಪಡಬೇಕಾಗಿಲ್ಲ.
ರಿಜಿಸ್ಟ್ರಡ್ ಫೋನ್ ನಂಬರ್, ಮೊಬೈಲ್ ಅಪ್ಲಿಕೇಶನ್ ಪಾಸ್‌ವರ್ಡ್ ಮತ್ತು ತಾತ್ಕಾಲಿಕ ಪಿನ್ ಈಗೇ ಮೂರು ಆಯ್ಕೆ ಬಳಸಿಕೊಂಡು ಕಾರ್ಡ್‌ಲೆಸ್ ಕ್ಯಾಶ್ ವಿಥ್‌ಡ್ರಾ ಮಾಡುವಾಗ ವಂಚನೆಯಾಗದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದು. ದೊಡ್ಡ ಮಟ್ಟದ ವಂಚನೆಯಾಗದಂತೆ ತಡೆಯಲು ಕಾರ್ಡ್‌ರಹಿತ ಕ್ಯಾಶ್ ವಿಥ್ ಡ್ರಾ ಸೌಲಭ್ಯದಲ್ಲಿ ಬ್ಯಾಂಕ್‌ಗಳು ದಿನವೊಂದಕ್ಕೆ 10,000 ದಿಂದ 25,000 ರೂಪಾಯಿಗಳವರೆಗೆ ಮಾತ್ರ ಟ್ರಾನ್ಸಕ್ಷನ್ ಲಿಮಿಟ್ ನಿಗದಿಪಡಿಸಿವೆ.
ಕಾರ್ಡ್ ಇಲ್ಲದೇ ಹಣ ಡ್ರಾ ಮಾಡುವ ವಿಧಾನ
ಮೊಬೈಲ್ ಬಳಸಿ ಮಾಹಿತಿಯನ್ನು ನಮೂದಿಸಿ (ಕೆಲವು ಬ್ಯಾಂಕ್‌ಗಳಲ್ಲಿ ನೆಟ್‌ಬ್ಯಾಂಕಿಂಗ್) ಅಥವಾ ATM ನಲ್ಲಿಯೇ ವಿವರಗಳನ್ನು ಭರ್ತಿ ಮಾಡಿ ಮತ್ತು ATM ನಲ್ಲಿ QR ಕೋಡ್ ಸ್ಕ್ಯಾನಿಂಗ್ ಸೌಲಭ್ಯವನ್ನು ಬಳಸಿಕೊಂಡು.ಮೊದಲ ವಿಧಾನದಲ್ಲಿ, ನೀವು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ ನಿಮ್ಮ ಪಾಸ್‌ವರ್ಡ್‌ನ್ನು ಎಂಟ್ರಿ ಮಾಡಬೇಕು. ಸರ್ವಿಸ್ ಆಫ್ಶನ್ ಇರುವಲ್ಲಿ ಎಟಿಎಂ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ‘ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ’ ವಹಿವಾಟನ್ನು ಆಯ್ಕೆಮಾಡಿ.
ನೀವು ಡ್ರಾ ಮಾಡಲು ಬಯಸುವ ಮೊತ್ತವನ್ನು ಎಂಟ್ರಿ ಮಾಡಿ. ಈ ಹಂತದಲ್ಲಿ ವಹಿವಾಟಿನ ಸಂಖ್ಯೆ ಜೊತೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ತಾತ್ಕಾಲಿಕ ಪಿನ್ ಬರುತ್ತದೆ. ಇದಾದ ಬಳಿಕ ಎಟಿಎಂ ಗೆ ಹೋಗಿ ಮತ್ತು ‘ಕಾರ್ಡ್‌ಲೆಸ್ ವಿತ್‌ಡ್ರಾವಲ್’ ಆಯ್ಕೆಯನ್ನು ಆರಿಸಿ. ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಫೋನ್‌ನಲ್ಲಿ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ.
ಎಟಿಎಂ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ. ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನಲ್ಲಿ BHIM/ UPI ಆಯ್ಕೆಯನ್ನು ಬಳಸಿಕೊಂಡು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಎಟಿಎಂನಿಂದ ಡ್ರಾ ಆದ ಹಣವನ್ನು ಪಡೆಯಿರಿ.
ಯಾವ ಬ್ಯಾಂಕ್ ಅಪ್ಲಿಕೇಶನ್ ಅನ್ನು ಬಳಸುತ್ತಿರೋ ಅದೇ ಬ್ಯಾಂಕ್ ನ ATM ಅನ್ನು ಬಳಸಬೇಕಾಗುತ್ತದೆ.
ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾ ಮಾಡಲು ನೀವು ICICI ಬ್ಯಾಂಕ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ನೀವು ಅದೇ ಬ್ಯಾಂಕಿನ ATM ಅನ್ನು ಬಳಸಬೇಕಾಗುತ್ತದೆ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಇದೇ ರೀತಿ ಇದೆ. ಆದಾಗ್ಯೂ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಮತ್ತು ಕೆಲವು ಪಾವತಿ ವ್ಯಾಲೆಟ್‌ಗಳ ಸಂದರ್ಭದಲ್ಲಿ, ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ (ICCW) ವಹಿವಾಟುಗಳನ್ನು ನಡೆಸುವ ಅವಕಾಶವಿದೆ.