Tiger Nail: ನಟ ದರ್ಶನ್ ಮೇಲೆ ದಾಖಲಾಯಿತು ಇನ್ನೊಂದು ಕೇಸ್, ಆತಂಕ ಹೊರಹಾಕಿದ ಅಭಿಮಾನಿಗಳು.
ನಟ ದರ್ಶನ ಮೇಲೆ ದಾಖಲಾಯಿತು ಮತ್ತೊಂದು ಕೇಸ್, ಸಂಕಷ್ಟದಲ್ಲಿ ನಟ ದರ್ಶನ್.
Case Against Actor Darshan: ಈಗ ಎಲ್ಲಾ ಕಡೆ ಹರಿದಾಡುತ್ತಿರುವ ಬಹಳ ಮುಖ್ಯವಾದ ವಿಚಾರವೇನೆಂದರೆ ಹುಲಿ ಉಗುರು ಪೆಂಡೆಂಟ್. ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿ ಬಿಗ್ ಮನೆ ಪ್ರವೇಶ ಮಾಡಿದ ವರ್ತೂರ್ ಸಂತೋಷ್ ಅವರು ಹುಲಿ ಉಗುರು ಪೆಂಡೆಂಟ್ ಧರಿಸಿದ್ದರಿಂದ ಜೈಲು ಸೇರಿದ ವಿಚಾರ ನಮಗೆಲ್ಲ ಗೊತ್ತು.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಆಗಿದ್ದ ರೈತ ವರ್ತೂರ್ ಸಂತೋಷ್ ಹುಲಿ ಉಗುರಿನ ಆರೋಪದಲ್ಲಿ ಅರಣ್ಯ ಅಧಿಕಾರಿಗಳು ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ದರು. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡ್ ನಟರ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಮಕ್ಕೆ ಆಗ್ರಹಿಸಲಾಗಿದೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ವಿರುದ್ಧ ದೂರು ದಾಖಲು
ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ನಟ ದರ್ಶನ್ ಹಾಗು ವಿನಯ್ ಗುರೂಜಿ ಅವರ ವಿರುದ್ಧಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವರ್ತೂರು ಸಂತೋಷ್ ಅವರ ಫೋಟೋ ಹಿಡಿದುಕೊಂಡು ಅವರನ್ನು ಕರೆಸಿ ಹೇಗೆ ವಿಚಾರಣೆ ಬಳಿಕ ಪ್ರಕರಣ ದಾಖಲಿಸಿದರೋ, ಅದೇ ರೀತಿ ವಿನಯ್ ಗುರೂಜಿ ಮತ್ತು ದರ್ಶನ್ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು. ಈಗಾಗಲೇ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳು ವೈರಲ್ ಆಗಿದ್ದು, ಅದರ ಆಧಾರದಲ್ಲಿ ಅವರನ್ನು ವಿಚಾರಣೆ ನಡೆಸಬೇಕು. ಅದು ಸತ್ಯವೇ ಆಗಿದ್ದರೇ ಅವರನ್ನು ಬಂಧಿಸಬೇಕು” ಎಂದು ಹೇಳಿದ್ದಾರೆ.
ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು
ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯ ಅಂತ ಆಗಬಾರದು. ಕಾನೂನು ಪ್ರಕಾರ ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ನಟ ದರ್ಶನ್ ತೂಗುದೀಪ ತಮ್ಮ ಚಿನ್ನದ ಚೈನಿನಲ್ಲಿ ಹುಲಿಯ ಉಗುರು ಧರಿಸಿದ್ದಾರೆ. ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ. ಹೀಗಾಗಿ ಜನ ಸಾಮಾನ್ಯರ ಮೇಲೆ ಕ್ರಮ ಕೈಗೊಳ್ಳುವಂತೆಯೇ ಇವರ ಮೇಲೆಯೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ನಾವು ಇಂದು ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ, ದೂರು ನೀಡಿದ್ದೇವೆ. ಅವರು ದೂರು ಸ್ವೀಕರಿಸಿದ್ದಾರೆ” ಎಂದು ಹೇಳಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ
ನಟ ದರ್ಶನ, ಹಾಗು ವಿನಯ್ ಗುರೂಜಿ ವಿರುದ್ಧವಾಗಿ ದೂರು ನೀಡಿದ ಮೂಲಕ ಮುಂದುವರಿದು ಮಾತನಾಡಿರುವ ಶಿವಕುಮಾರ್ ಅವರು, “ನಾಳೆ ಅರಣ್ಯಾಧಿಕಾರಿಗಳ ಕಚೇರಿ ಬಳಿ 10, 10:30 ಸಮಯಕ್ಕೆ ಮತ್ತೆ ಇಲ್ಲಿಗೆ ಬರುತ್ತೇವೆ. ಅವರು ಕಾನೂನು ರೀತಿ ಕ್ರಮ ತೆಗೆದುಕೊಂಡು ನಟ ದರ್ಶನ್ ಮತ್ತು ಅವಧೂತ ವಿನಯ್ ಗುರೂಜಿ ಅವರನ್ನು ಕರೆಸಿ ಕ್ರಮ ತೆಗೆದುಕೊಳ್ಳದಿದ್ದರೇ ದೊಡ್ಡ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ತಪ್ಪು ಮಾಡಿರುವುದು ಸಾಬೀತಾದರೆ ಶಿಕ್ಷೆ ಖಚಿತ ಎನ್ನಲಾಗಿದೆ.