Actor Jaggesh: ನಟ ಜಗ್ಗೇಶ್ ವಿರುದ್ಧ ದಾಖಲಾಯಿತು ದೂರು, ಬೇಸರ ಹೊರಹಾಕಿದ ಅಭಿಮಾನಿಗಳು.
ನವರಸ ನಾಯಕ ಜಗ್ಗೇಶ್ ವಿರುದ್ಧ ದೂರು ದಾಖಲು, ಹುಲಿ ಉಗುರಿನ ಲಾಕೆಟ್ ಬಳಸುತ್ತಿದ್ದರಾ ಈ ನಟ?
Case Against Actor Jaggesh: ಹುಲಿ ಉಗುರು ಬಳಕೆಯ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಜೈಲು ಸೇರಿದ ನಂತರ ಅನೇಕ ಜನರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿದೆ. ವರ್ತುರ್ ಸಂತೋಷ್ ಅವರ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ ಹಾಗು ವಿನಯ್ ಗುರೂಜಿ ಅವರ ಹೆಸರು ಕೇಳಿ ಬರುತ್ತಿತ್ತು.
ಆದರೆ ಈಗ ಅದೇ ವಿಚಾರವಾಗಿ ನವರಸ ನಾಯಕ ಜಗ್ಗೇಶ್ (Jaggesh) ಅವರು ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಸಿಕ್ಕಿ ಕೊಂಡವರ ವಿಚಾರಣೆ ಪ್ರಾರಂಭವಾಗಿದ್ದು, ಈಗ ಹೊಸದಾಗಿ ಜಗ್ಗೇಶ್ ವಿರುದ್ಧ ದೂರು ದಾಖಲಾಗಿದೆ.

ನಟ ಜಗ್ಗೇಶ್ ವಿರುದ್ಧ ದೂರು ದಾಖಲು
ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಸ್ಯಾಂಡಲ್ ವುಡ್ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ದೂರು ದಾಖಲಾಗಿದೆ.ಹುಲಿ ಉಗುರು ಧರಿಸಿದ್ದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಇರುವವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ನಟ ದರ್ಶನ್, ವಿನಯ್ ಗುರೂಜಿ, ಧನಂಜಯ ಗುರೂಜಿ ಬಳಿಕ ಈಗ ನಟ ಜಗ್ಗೇಶ್ ಸರದಿ. ಇನ್ನು ಯಾರ ಹೆಸರು ಈ ಪ್ರಕರಣದಲ್ಲಿ ಸಿಲುಕುವುದೋ ಕಾದು ನೋಡಬೇಕಿದೆ.

ನಟ ಜಗ್ಗೇಶ್ ಅವರು ಹುಲಿ ಉಗುರಿನ ಲಾಕೆಟ್ ಬಳಕೆ ಮಾಡುವ ಬಗ್ಗೆ ವಿಡಿಯೋ ವೈರಲ್
ನಟ ಜಗ್ಗೇಶ್ ಹುಲಿ ಉಗುರು ಧರಿಸಿದ್ದ ಲಾಕೆಟ್ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ‘ನಾನು 20 ವರ್ಷದವನಿದ್ದಾಗ ಇದು ನನ್ನ ಅಮ್ಮ ಕೊಟ್ಟಿದ್ದರು’ ಎಂದು ಸಂದರ್ಶನವೊಂದರಲ್ಲಿ ಈ ಹಿಂದೆ ಹೇಳಿದ್ದ ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಈಗ ಮಾಜಿ ಎಂಎಲ್ ಸಿ ಪಿ.ಆರ್.ರಮೇಶ್, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.
ಜಗ್ಗೇಶ್ ಬಳಿ ಇರುವ ಹುಲಿ ಉಗುರು ಅಸಲಿಯೋ, ನಕಲಿಯೋ? ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಸತ್ಯ ಸಾಬೀತಾದರೆ ಶಿಕ್ಷೆ ಖಚಿತ ಆಗಿರುತ್ತದೆ ಎನ್ನಲಾಗಿದೆ. ಸದ್ಯ ಜಗ್ಗೇಶ್ ಅವರು ಹುಲಿ ಉಗುರನ್ನ ಸರ್ಜರಕ್ಕೆ ಒಪ್ಪಿಸಿದ್ದಾರೆ.