Salary Hike: ಸರ್ಕಾರೀ ನೌಕರರಿಗೆ ಇನ್ನೊಂದು ಗಣೇಶ ಹಬ್ಬದ ಉಡುಗೊರೆ.
ಸರ್ಕಾರೀ ನೌಕರರಿಗೆ ಹಬ್ಬದ ದಿನದಂದು ಭರ್ಜರಿ ಆಫರ್ ಕೊಟ್ಟ ಕೇಂದ್ರ ಸರ್ಕಾರ
Central Government DA Hike: ಸರ್ಕಾರಿ ನೌಕರರು ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿ ಇರುವುದು ಸಹಜ. ಯಾವಾಗ ಸಂಬಳ ಹೆಚ್ಚಾಗತೊ ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಶುಭಸುದ್ದಿ. ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಶೀಘ್ರದಲ್ಲೇ ತುಟ್ಟಿಭತ್ಯೆಯನ್ನ (DA) ಹೆಚ್ಚಿಸುವ ಸಾಧ್ಯತೆ ಇದೆ. ಹಣದುಬ್ಬರದ ವಿರುದ್ಧ ಹೋರಾಡಲು, ಕೇಂದ್ರ ಸರ್ಕಾರವು ನಿಯತಕಾಲಿಕವಾಗಿ ತುಟ್ಟಿಭತ್ಯೆಯನ್ನ ಹೆಚ್ಚಿಸುತ್ತದೆ. ಇದನ್ನ ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ ಎನ್ನಲಾಗಿದೆ .
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳ
ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನ ಲೆಕ್ಕಹಾಕಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನ ಲೆಕ್ಕಹಾಕಲು ಒಂದು ನಿರ್ದಿಷ್ಟ ಸೂತ್ರವಿದೆ, ಹಾಗಾಗಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಎಷ್ಟು ಹೆಚ್ಚಳ ಆಗುತ್ತದೆ ಎಂದು ಮಾಹಿತಿ ನೀಡಿಲ್ಲ.
ಡಿಎ ಹೆಚ್ಚಳ ಮತ್ತು ಪಾವತಿಯ ಪ್ರಕಟಣೆ ಸ್ವಲ್ಪ ತಡವಾಗಲಿದೆ
ನಾವು ಈಗಾಗಲೇ ಸೆಪ್ಟೆಂಬರ್ ದ್ವಿತೀಯಾರ್ಧದಲ್ಲಿದ್ದೇವೆ ಮತ್ತು ಮುಂದಿನ ಹೆಚ್ಚಳದ ಪ್ರಕಟಣೆ ಬಹಳ ದೂರವಿಲ್ಲ. ಈ ಬಾರಿ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆಯನ್ನು ಮುಂದಿನ ವರ್ಷದ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ ಎನ್ನಲಾಗಿದೆ .