DA And DR Hike: ಸರ್ಕಾರೀ ನೌಕರರಿಗೆ ಭರ್ಜರಿ ಗುಡ್ ನ್ಯೂಸ್, DA ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ ಕೇಂದ್ರ.

ಸರ್ಕಾರೀ ನೌಕರರಿಗೆ ಕೇಂದ್ರದಿಂದ ಶುಭ ಸುದ್ದಿ, DA ಬಗ್ಗೆ ಮಹತ್ವದ ಹೇಳಿಕೆ.

Central Government Employees DA Hike: ಕೇಂದ್ರ ಸರ್ಕಾರದ ನೌಕರರಿಗೆ ಈ ಸಲದ ಹಬ್ಬಕ್ಕೆ ನರೇಂದ್ರ ಮೋದಿ ಅವರು ನೀಡುವ ಉಡುಗೊರೆ ಬಗ್ಗೆ ನಿರೀಕ್ಷೆ ದುಪ್ಪಾಟ್ಟಾಗಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ (DA)ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.

ಹಬ್ಬದ ಸೀಸನ್‌ ಮುನ್ನವೇ ಕೇಂದ್ರ ಸರ್ಕಾರ ಈ ಬಗ್ಗೆ ಮಹತ್ವದ ಘೋಷಣೆ ನೀಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್‌ ನೀಡಬಹುದು ಎಂದೂ ಹೇಳಲಾಗುತ್ತಿದೆ. ಈ ಮಹತ್ವದ ಸುದ್ದಿಯ ಕುರಿತಾಗಿ ಅಕ್ಟೋಬರ್ 4 ರಂದು DNA ವರದಿ ಮಾಡಿದೆ. ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಡೆಸಿದ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ.

Central Government Employees Latest News
Image Credit: Sambadenglish

ಚುನಾವಣೆ ಆದೇಶಕ್ಕೂ ಮುನ್ನವೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಬಹುದು

ಕೇಂದ್ರ ಸಚಿವ ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯೆರಡೂ ಬುಧವಾರ ಸಭೆ ನಡೆಸಿದ್ದು, ಸಭೆಯಲ್ಲಿ ಕೇಂದ್ರ ಸರ್ಕಾರವು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಬಿದ್ದ ಕೂಡಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಈ ವೇಳೆ ಈ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕೆ ಸವಾಲಾಗಬಹುದು. ಹಾಗಾಗೀ ಕೆಲವೇ ದಿನಗಳಲ್ಲಿ ಹಬ್ಬದ ಮುನ್ನವೇ ನೌಕರರಿಗೆ ಗಿಫ್ಟ್‌ ನೀಡಲು ಕೇಂದ್ರ ಯೋಜಿಸಿದೆ ಎನ್ನಲಾಗಿದೆ.

ಎಷ್ಟು ಏರಿಕೆ ಆಗಬಹುದು…?

ಒಂದು ವೇಳೆ ಕೇಂದ್ರ ಇದೇ ತಿಂಗಳು DA ಗೆ ಸಂಬಂಧಿಸಿದಂತೆ ಎರಡನೇ ಘೋಷಣೆಯನ್ನು ಮಾಡಿದರೆ, ಜುಲೈ 1ರಿಂದ ನೌಕರರಿಗೆ ಪ್ರಯೋಜನ ಲಭ್ಯವಾಗುತ್ತದೆ. ಸದ್ಯ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 42ರ ಬಡ್ಡಿ ದರದಲ್ಲಿ ಡಿಎ ನೀಡಲಾಗುತ್ತಿದೆ.

ಇದನ್ನು ಹೆಚ್ಚಿಸುವ ಯೋಜನೆಯಲ್ಲಿ ಸರ್ಕಾರವು ಇದನ್ನು 45% ಕ್ಕೆ ಏರಿಕೆ ಮಾಡಬಹುದು ಎನ್ನಲಾಗಿದೆ. ಅಂದರೆ 42% ರಿಂದ 45% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕೇಂದ್ರದ ಈ ನಿರ್ಧಾರವು 47 ಲಕ್ಷ ಉದ್ಯೋಗಿಗಳಿಗೆ ಮತ್ತು 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ, ಏರುತ್ತಿರುವ ಹಣದುಬ್ಬರದ ಹೊರೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು.

Central Government Employees DA Hike
Image Credit: News24online

ವರ್ಷಕ್ಕೆ ಎರಡು ಬಾರಿ DA ಮತ್ತು DR ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. DA ಯನ್ನು ಸರ್ಕಾರಿ ನೌಕರರಿಗೆ ಮತ್ತು DA ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. ಇದೀಗ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

Leave A Reply

Your email address will not be published.