Home Loan: ಕೇಂದ್ರ ಸರ್ಕಾರದ ಗೃಹಸಾಲದ ಸಬ್ಸಿಡಿ ಹಣ ಯಾರು ಯಾರಿಗೆ ಸಿಗಲಿದೆ…? ಕೇಂದ್ರದ ಘೋಷಣೆ.

ಶೀಘ್ರದಲ್ಲೇ ಹೊಸ ʻಗೃಹ ಸಾಲ ಸಬ್ಸಿಡಿ ಯೋಜನೆʼ ಜಾರಿಗೆ ತರಲಿದೆ ಮೋದಿ ಸರ್ಕಾರ.

Central Government Home Loan Subsidy: ಮೋದಿ ಸರ್ಕಾರದ ಹಲವು ಯೋಜನೆಯಲ್ಲಿ ಗೃಹ ಸಾಲ ಸಬ್ಸಿಡಿ ಯೋಜನೆಯು ಒಂದಾಗಿದೆ. ಶೀಘ್ರದಲ್ಲೇ ಹೊಸ ಗೃಹ ಸಾಲ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯ ಪ್ರಕಾರ, ಸಣ್ಣ ಮನೆ ಖರೀದಿದಾರರಿಗೆ ಸಹಾಯಕವಾಗಲೆಂದು ಕೇಂದ್ರ ಸರ್ಕಾರದ ಈ ಗೃಹ ಸಾಲ ಸಬ್ಸಿಡಿ ಯೋಜನೆಯನ್ನು ಪರಿಚಯಿಸಿದ್ದು, ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯದ ಗುಂಪಿನ ಸುಮಾರು 25 ಲಕ್ಷ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ಸಬ್ಸಿಡಿ ಮೊತ್ತವು ಅಂತಹ ಮನೆಗಳ ಬೇಡಿಕೆಯನ್ನು ಅವಲಂಬಿಸಿರುತ್ತದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

Central Government Home Loan Subsidy
Image Credit: Kannadanews

ಶೀಘ್ರದಲ್ಲೇ ಹೊಸ ʻಗೃಹ ಸಾಲ ಸಬ್ಸಿಡಿ ಯೋಜನೆʼ ಜಾರಿಗೆ ಬರಲಿದೆ

ಸಣ್ಣ ನಗರ ವಸತಿಗಾಗಿ ಸಬ್ಸಿಡಿ ಸಾಲವನ್ನು ಒದಗಿಸಲು ಮೋದಿ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ 600 ಶತಕೋಟಿ ರೂಪಾಯಿಗಳನ್ನು ($7.2 ಶತಕೋಟಿ) ಖರ್ಚು ಮಾಡಲು ಪರಿಗಣಿಸುತ್ತಿದೆ ಎಂದು ಎರಡು ಸರ್ಕಾರಿ ಮೂಲಗಳು ರಾಯಿಟರ್ಸ್ಗೆ ತಿಳಿಸಿವೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು 2024ರ ಆರಂಭದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಬ್ಯಾಂಕ್‌ಗಳು ಈ ಯೋಜನೆಯನ್ನು ಕೆಲವೇ ತಿಂಗಳುಗಳಲ್ಲಿ ಜಾರಿಗೊಳಿಸುವ ಸಾಧ್ಯತೆಯಿದೆ.

ಬಡ್ಡಿ ರಿಯಾಯಿತಿಯನ್ನು ಫಲಾನುಭವಿಗಳ ಗೃಹ ಸಾಲ ಖಾತೆಗೆ ಮುಂಗಡವಾಗಿ ಜಮಾ ಮಾಡಲಾಗುವುದು

20 ವರ್ಷಗಳ ಅವಧಿಗೆ ತೆಗೆದುಕೊಂಡಿರುವ 50 ಲಕ್ಷಕ್ಕಿಂತ ಕಡಿಮೆ ಗೃಹ ಸಾಲಗಳು ಉದ್ದೇಶಿತ ಯೋಜನೆಗೆ ಅರ್ಹತೆ ಪಡೆಯುತ್ತವೆ ಎಂದು ಮೂಲಗಳು ತಿಳಿಸಿವೆ. ಸರಕಾರಿ ಅಧಿಕಾರಿಯೊಬ್ಬರು ಮಾತನಾಡಿ, ‘ಬಡ್ಡಿ ರಿಯಾಯಿತಿಯನ್ನು ಫಲಾನುಭವಿಗಳ ಗೃಹ ಸಾಲ ಖಾತೆಗೆ ಮುಂಗಡವಾಗಿ ಜಮಾ ಮಾಡಲಾಗುವುದು. ಪ್ರಸ್ತಾವಿತ ಯೋಜನೆಯು 2028 ರವರೆಗೆ ಅನ್ವಯಿಸುತ್ತದೆ. ಇದು ಅಂತಿಮ ರೂಪಕ್ಕೆ ಬರುತ್ತಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಅಗತ್ಯವಿದೆ ಎಂದಿದ್ದಾರೆ.

Home Loan Subsidy
Image Credit: Newsnationtv

ನಗರ ಪ್ರದೇಶಗಳಲ್ಲಿ ವಾಸಿಸುವ ಕಡಿಮೆ ಆದಾಯ ಹೊಂದಿರುವ ಜನರಿಗೆ ಈ ಯೋಜನೆ

ಸರ್ಕಾರವು ನಗರ ಪ್ರದೇಶಗಳಲ್ಲಿ ಕಡಿಮೆ ಆದಾಯದ ಜನರಿಗೆ ಬಡ್ಡಿ ಸಹಾಯಧನವನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇದೇ ರೀತಿಯ ಯೋಜನೆಯನ್ನು 2017-2022 ರ ನಡುವೆ ನಡೆಸಲಾಯಿತು, ಇದರ ಅಡಿಯಲ್ಲಿ 12.27 ಮಿಲಿಯನ್ (1 ಕೋಟಿ 20 ಲಕ್ಷಕ್ಕೂ ಹೆಚ್ಚು) ಮನೆಗಳನ್ನು ಅನುಮೋದಿಸಲಾಗಿದೆ.

ಆಗಸ್ಟ್ 15 ರ ತಮ್ಮ ಭಾಷಣದಲ್ಲಿ, ʻಮುಂಬರುವ ವರ್ಷಗಳಲ್ಲಿ ನಾವು ಹೊಸ ಯೋಜನೆಯೊಂದಿಗೆ ಬರಲಿದ್ದೇವೆ, ಈ ಯೋಜನೆಯು ನಗರಗಳಲ್ಲಿ ವಾಸಿಸುವ ಅಂದರೆ, ಬಾಡಿಗೆ ಮನೆಗಳು, ಕೊಳೆಗೇರಿಗಳು, ಚಾಲ್‌ಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆʼ

Leave A Reply

Your email address will not be published.