Google Search: ದೀಪಾವಳಿ ದಿನದಂದು ಗೂಗಲ್ ನಲ್ಲಿ ಜನರು ಹೆಚ್ಚು ಸರ್ಚ್ ಮಾಡಿದ್ದೇನು ಗೊತ್ತಾ…? ಇದು ದೀಪಾವಳಿ ಮಹಿಮೆ.
ದೀಪಾವಳಿ ಹಬ್ಬದಂದು ಗೂಗಲ್ ಈ ವಿಷಯ ಅತೀ ಹೆಚ್ಚು ಚರ್ಚೆಗೆ ಕಾರಣವಾಗಿದೆ.
CEO Sundar Pichai Shared 5 Most Searched Questions On Google About Diwali: ದೇಶದಲ್ಲಿ ದೀಪಾವಳಿ ಹಬ್ಬ ಬಹಳ ಭರ್ಜರಿ ಆಗಿ ನೆರವೇರಿತು. ಇನ್ನು ಕೂಡ ನಾವು ಹಬ್ಬದ ಗುಂಗಲ್ಲೇ ಇದ್ದೀವಿ ಅಂತಾನೂ ಹೇಳಬಹುದು. ನಮ್ಮ ಭಾರತೀಯರ ಹಬ್ಬ ಅಂದರೆ ಹಾಗೆ ಅದಕ್ಕೊಂದು ಇತಿಹಾಸ,ಆಚಾರ, ವಿಚಾರ , ಸಂಪ್ರದಾಯ ಹಾಗು ಅಚ್ಚುಕಟ್ಟಾಗಿ ಹಬ್ಬವನ್ನು ಆಚರಿಸುವುದರಲ್ಲಿ ನಾವು ಯಾವಾಗಲು ಎತ್ತಿದ ಕೈ.
ಭಾರತೀಯರು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಒಂದು ಇತಿಹಾಸ ಅಂತ ಇದೆ ಅವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಆದರೆ ಈ ಸಲದ ದೀಪಾವಳಿ ಹಬ್ಬದ ಮಹತ್ವವನ್ನು ನಮ್ಮ ಗೂಗಲ್ (Google) ಎಲ್ಲರಿಗೂ ತಿಳಿಸಿದೆ. ದೀಪಾವಳಿ ಹಬ್ಬದಂದು ಗೂಗಲ್ ಈ ವಿಷಯ ಅತೀ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಇಡೀ ವಿಶ್ವದ್ಯಾಂತ Google ಶೇಕಡಾ 91.55% ಮಾರುಕಟ್ಟೆ ಸರ್ಚ್ ಪಾಲನ್ನು ಹೊಂದಿದೆ
ಪ್ರಪಂಚದಾದ್ಯಂತ ಇಂಟರ್‌ನೆಟ್‌ನಲ್ಲಿ ಈ ಸರ್ಚ್ ಬ್ರೌಸರ್‌ಗಳನ್ನು ಯಾವುದೇ ವಿಷಯಗಳನ್ನು ಹುಡುಕಲು ಹೆಚ್ಚು ಬಳಸಲಾಗುತ್ತದೆ. 2023 ಅಕ್ಟೋಬರ್‌ನಲ್ಲಿ Statcounter ಗ್ಲೋಬಲ್ ನ ವರದಿಗಳ ಪ್ರಕಾರ ಇಡೀ ವಿಶ್ವದ್ಯಾಂತ Google ಶೇಕಡಾ 91.55% ಮಾರುಕಟ್ಟೆ ಸರ್ಚ್ ಪಾಲನ್ನು ಹೊಂದಿದ್ದು ಎರಡನೇಯದಾಗಿ Bing ಶೇಕಡಾ 3.11% ಪಾಲು ಹೊಂದಿದ್ದು ಮೂರನೇಯದಾಗಿ YANDEX ಶೇಕಡಾ 1.83% ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ. ಇದರ ಕ್ರಮವಾಗಿ ಕೇವಲ ಭಾರತದಲ್ಲಿನ ಸರ್ಚ್ ನೋಡುವುದಾದರೆ ಬರೋಬ್ಬರಿ 98.45% ಶೇಕಡಾರಷ್ಟು ಸರ್ಚ್ ಪಾಲುದಾರಿಕೆಯನ್ನು ಹೊಂದಿವೆ.
ದೀಪಾವಳಿಯ ವಿಚಾರ ಸಾಕಷ್ಟು ಸರ್ಚ್ ಆಗಿದೆ
ದೀಪಾವಳಿಯ ಹಬ್ಬಕ್ಕೆ ಹೆಚ್ಚು ಸರ್ಚ್ ಆದ ವಿಷಯದ ಕುರಿತು ಅತಿದೊಡ್ಡ ಕಂಪನಿಗಳಾದ ಆಲ್ಫಾಬೆಟ್ ಮತ್ತು ಗೂಗಲ್‌ನ CEO Sundar Pichai ಅವರು ಹಂಚಿಕೊಂಡಿದ್ದಾರೆ. ದೀಪಾವಳಿಯಂದು ಪ್ರಪಂಚದಾದ್ಯಂತ ಸಾಕಷ್ಟು ಸರ್ಚ್ ನಡೆದಿವೆ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಪಂಚದಾದ್ಯಂತ ದೀಪಾವಳಿಗೆ ಸಂಬಂಧಿಸಿದಂತೆ 5 ಹೆಚ್ಚು ಸರ್ಚ್ ಮಾಡಿರುವ ಪ್ರಶ್ನೆಗಳಿವೆ. ಇದಕ್ಕಾಗಿ Google CEO ಈ GIF ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 5 ಚುಕ್ಕೆಗಳಿದ್ದು ಇವುಗಳ ಸಹಾಯದಿಂದ ಗೂಗಲ್ ನಲ್ಲಿ ಈ ಐದು ಪ್ರಶ್ನೆಗಳನ್ನು ಹೆಚ್ಚು ಹುಡುಕಲಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ ಸುಂದರ್ ಪಿಚೈ ಅವರು ಪ್ರತ್ಯೇಕ ಪೋಸ್ಟ್‌ನಲ್ಲಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ಗೂಗಲ್‌ನಲ್ಲಿ ಈ 5 ಪ್ರಶ್ನೆಗಳು ಹೆಚ್ಚಾಗಿ ಸರ್ಚ್ ಮಾಡಲಾಗಿದೆ
ಭಾರತೀಯರು ದೀಪಾವಳಿಯನ್ನು ಏಕೆ ಆಚರಿಸುತ್ತಾರೆ? (Why Indians celebrate Diwali)
ದೀಪಾವಳಿಯಂದು ನಾವು ರಂಗೋಲಿಯನ್ನು ಏಕೆ ಮಾಡುತ್ತೇವೆ? (Why do we do rangoli on Diwali)
ದೀಪಾವಳಿಯಂದು ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ? (Why do we light lamps on Diwali)
ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡುತ್ತಾರೆ? (Why is Lakshmi puja done on Diwali)
ದೀಪಾವಳಿಯಂದು ಎಣ್ಣೆ ಸ್ನಾನ ಮಾಡುವುದೇಕೆ? (Why oil bath on Diwali)