Chaithra Kundapura: ಚೈತ್ರ ಕುಂದಾಪುರ ಪ್ರಕರಣದಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್, ಪೋಲೀಸರ ಮುಂದೆ ಬಾಯಿಬಿಟ್ಟ ಹಾಲಶ್ರೀ.
ಚೈತ್ರ ಕುಂದಾಪುರ ಪ್ರಕರಣದಲ್ಲಿ ಇನ್ನೊಂದು ದೊಡ್ಡ ತಿರುವು.
Chaithra Kundapura Cheating Case: ಚೈತ್ರಾ ಕುಂದಾಪುರ (Chaitra Kundapura) ಮತ್ತು ಗ್ಯಾಂಗ್‌ನ ವಂಚನೆ ಪ್ರಕರಣ ಬಹಳ ದಿನದಿಂದ ನೆಡೆಯುತ್ತಿದ್ದು, ದಿನಕ್ಕೊಂದು ಗೊಂದಲವನ್ನು ಸ್ರಷ್ಟಿ ಮಾಡಿತು. ಈಗಾಗಲೇ ಸಿಬಿಐ ತನಿಖೆ ನಡೆದಿದ್ದು ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ ವಂಚನೆ ಪ್ರಕರಣ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ.
ಸ್ವಾಮೀಜಿ ಬಂಧನದ ಬಳಿಕ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಅಭಿನವ ಹಾಲಶ್ರೀ ಸಿಸಿಬಿ ತನಿಖಾಧಿಕಾರಿ (CCB Investigation Officer) ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಪೋಲೀಸರ ಮುಂದೆ ಸ್ವಾಮೀಜಿ ಎಲ್ಲಾ ವಿಷಯವನ್ನ ಬಾಯಿ ಬಿಟ್ಟಿದ್ದು ಸದ್ಯ ಅಧಿಕರು ತಮ್ಮ ತನಿಖೆಯನ್ನ ಇನ್ನಷ್ಟು ಚುರುಕು ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಅಧಿಕಾರಿಗಳ ಮುಂದೆ ಹಾಲಶ್ರೀ ಸ್ವಾಮಿ ಹೇಳಿದ್ದೇನು ಎಂದು ತಿಳಿಯೋಣ ಬನ್ನಿ.
ನಿಜ ಒಪ್ಪಿಕೊಂಡ ಸ್ವಾಮೀಜಿ
ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari)ಯಿಂದ ಹಣ ಪಡೆದಿದ್ದು ನಿಜ. MLA ಟಿಕೆಟ್ ವಿಚಾರವಾಗಿ (BJP MLA Ticket Scam) ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೆ 50 ಲಕ್ಷ ಹಣ ವಾಪಸ್ ಕೊಟ್ಟಿದ್ದೇನೆ.
ಉಳಿದ ಹಣ ಮಠದಲ್ಲಿದೆ ಅಂತ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಲ್ಲದೇ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ CCB ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಗೋವಿಂದ ಬಾಬು ಪೂಜಾರಿ ವಿರುದ್ಧ ದೂರು ದಾಖಲು
ಈ ನಡುವೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಾಗಿದೆ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ (Nataraj Sharma) ದೂರು ನೀಡಿದ್ದಾರೆ.