Chaitra Kundapur: ಚೈತ್ರ ಕುಂದಾಪುರ ಒಟ್ಟು ಆಸ್ತಿ ಎಷ್ಟು ಗೊತ್ತಾ…? ವಿಚಾರಣೆ ಮಾಡಿದ CCB ಅಧಿಕಾರಿಗಳಿಗೆ ಆಶ್ಚರ್ಯ.
ಚೈತ್ರ ಕುಂದಾಪುರ ಅವರು ಈಗ ಕೋಟಿ ಕೋಟಿ ಒಡತಿ, ಸಿಸಿಬಿ ಶಾಕ್.
Chaitra Kundapura Property Seized: ಕೆಲವು ದಿನಗಳಿಂದ ಚೈತ್ರ ಕುಂದಾಪುರ ಅವರ ಹೆಸರು ಎಲ್ಲ ಕೆಡೆ ಹರಿದಾಡುತ್ತಿದೆ. ಹಿಂದೂ ಪರ ಹೋರಾಟಗಾರ್ತಿ ಎಂದು ತಿಳಿದಿದ್ದ ಇವರು ಕೋಟಿ ಕೋಟಿಯ ಒಡತಿ ಆಗಿದ್ದಾರೆ. ಹಲವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಅವರ ಖಜಾನೆ ಕಂಡು ಸಿಸಿಬಿ ಶಾಕ್ ಆಗಿದ್ದಾರೆ.

ಚೈತ್ರಾ ಕುಂದಾಪುರ ಅವರ ಒಟ್ಟು ಆಸ್ತಿ
ಚೈತ್ರಾ ಕುಂದಾಪುರ ಅವರು ಬಿಜೆಪಿ ಸೀಟು ಕೊಡಿಸುದಾಗಿ ಕೋಟಿ ಕೋಟಿ ಹಣ ಪಡೆದ ಬಗ್ಗೆ ಮೋಸ ಹೋದವರು ಅವರ ವಿರುದ್ಧ ಆರೋಪ ಮಾಡಿದ್ದೂ, ಸಿಸಿಬಿ ತನಿಖೆಯಲ್ಲಿ ಚೈತ್ರ ಅವರ ಮನೆಯಲ್ಲಿ65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.
ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂ. ನಗದು ಪತ್ತೆಯಾಗಿದ್ದು, ಚೈತ್ರಾ ಕುಂದಾಪುರ ಖಜಾನೆ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದಾರೆ. ಇನ್ನು ಸಿಸಿಬಿ ಮುಂದೆ ಇಷ್ಟೆಲ್ಲಾ ಸತ್ಯ ಬಾಯಿಬಿಟ್ಟ ಈಕೆ ಇನ್ನು ಎಷ್ಟು ವಿಷಯ ಮುಚ್ಚಿಟ್ಟಿದ್ದರೋ ಎಂದು ತಿಳಿಯಬೇಕಿದೆ.