Chakravarthy Sulibele: ಕಳೆದ ಬಾರಿ ಬಿಜೆಪಿ ಸೋಲಲು ಕಾಂಗ್ರೆಸ್ ಗ್ಯಾರಂಟಿ ಕಾರಣವಲ್ಲ : ಸೂಲಿಬೆಲೆ ಹೇಳಿದ್ದೇನು..?
ಬಿಜೆಪಿಯ ಸೋಲಿಗೆ ಅವರ ಕೆಟ್ಟ ಆಡಳಿತವೇ ಕಾರಣ, ಕಾಂಗ್ರೆಸ್ ಅಲ್ಲ ಸೂಲಿಬೆಲೆ ಹೇಳಿಕೆ
Chakravarthy Sulibele Latest News: ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ವಿಜಯ ಸಾಧಿಸಿತು. ಬಿಜೆಪಿ ಸರ್ಕಾರ ಎಷ್ಟು ಪ್ರಚಾರ ಮಾಡಿದರು, ಸ್ವತಃ ಪ್ರಧಾನಿ ಮೋದಿಯವರೇ ರಾಜ್ಯಕ್ಕೆ ಬಂದು ಪ್ರಚಾರ ನಡೆಸಿ ಹೋಗಿದ್ದರು ಕಾಂಗ್ರೆಸ್ ಬಹುಮತದಲ್ಲಿ ಅಧಿಕಾರಕ್ಕೆ ಬಂದಿತ್ತು.
ಕಾಂಗ್ರೇಸ್ ಕೊಟ್ಟ ಗ್ಯಾರಂಟಿಗಳಿಂದಾನೇ ಬಿಜೆಪಿ ಸೋಲುವುದಕ್ಕೆ ಕಾರಣವಾಯ್ತು ಎಂದೇ ಹಲವರು ಹೇಳಿದ್ದರು. ಆದರೆ ಅದು ಸತ್ಯ ಅಲ್ಲ ಎಂಬುದಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಬಿಜೆಪಿಯ ಕೆಟ್ಟ ಆಡಳಿತ ಸೋಲಿಗೆ ಕಾರಣ
ಕಾಂಗ್ರೆಸ್ ಕೊಟ್ಟ ಗ್ಯಾರಂಟಿಯಿಂದಾನೇ ಬಿಜೆಪಿ ಸೋಲಿಗೆ ಕಾರಣವಾಯ್ತು ಎಂದು ಅನೇಕರು ಹೇಳುತ್ತಾರೆ. ಅದೇ ಸತ್ಯವಾಗಿದ್ದರೆ, ಬಿಜೆಪಿಗೆ ಶೇಕಡಾ 36 ರಷ್ಟು ಮತಗಳು ಸಹ ಬರುತ್ತಿರಲಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಗೆ ಸೋಲಾಗಿದ್ದು ಬಿಜೆಪಿಯ ಕೆಟ್ಟ ಆಡಳಿತದಿಂದಾಗಿ ಎಂದಿದ್ದಾರೆ.
ಕೆಟ್ಟ ಆಡಳಿತ, ಎಲೆಕ್ಷನ್ ಮ್ಯಾನೆಜ್‌ಮೆಂಟ್ ನಿಂದಾಗಿ ಬಿಜೆಪಿಗೆ ಸೋಲಾಗಿದೆ. ಎದುರಾಳಿ ಆರೋಪಕ್ಕರ ಸರಿಯಾದ ಉತ್ತರ ಕೊಡುವಲ್ಲಿಯೂ ವಿಫಲವಾಗಿದೆ ಎಂದಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ ಕೇವಲ 66 ಸೀಟುಗಳನ್ನು ಪಡೆದ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.
ಕಾಂಗ್ರೆಸ್ ನೀಡಿದ 05 ಗ್ಯಾರೆಂಟಿಗಳ ಪ್ರಭಾವ
ಈ ಸಲದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಗೆಲುವಿಗೆ 05 ಗ್ಯಾರೆಂಟಿ ಯೋಜನೆಗಳು ಕಾರಣ ಎನ್ನುವುದು ಕೆಲವರ ವಾದ, ಆದರೆ ಸೂಲಿಬೆಲೆ ಪ್ರಕಾರ ಬಿಜೆಪಿಯ ಕೆಟ್ಟ ಆಡಳಿತ ಹಾಗು ಚುನಾವಣಾ ಪ್ರಚಾರ ಕ್ರಮದಲ್ಲಿ ತಪ್ಪಾಗಿದೆ ಹಾಗಾಗಿ ಈ ಬಾರೀ ಹೀನಾಯವಾಗಿ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದ್ದಾರೆ.