Chandra Grahan 2023: ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದು…? ಶಾಸ್ತ್ರ ಹೇಳುವುದೇನು…?

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಅನುಸರಿಸಬೇಕಾದ ಪ್ರಮುಖ ನಿಯಮಗಳು ಹಾಗು ಇಂತಹ ಕೆಲಸಗಳನ್ನು ಮಾಡಲೇಬೇಡಿ.

Moon Eclipse: ಗ್ರಹಣ (Eclipse) ಅನ್ನುವುದು ವೈಜ್ಞಾನಿಕವಾಗಿ ಕೆಲವು ನಿಯಮಗಳನ್ನು ಒಳಗೊಂಡಿದ್ದರೆ, ಸಾಂಪ್ರದಾಯಕವಾಗಿ ಹಲವು ಆಚಾರ ವಿಚಾರಗಳನ್ನು ಒಳಗೊಂಡಿರುತ್ತದೆ ಅಷ್ಟೇ ಅಲ್ಲದೆ ಇದನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದು ಅಷ್ಟೇ ಮುಖ್ಯವಾಗಿದೆ.

ಗ್ರಹಣ ಸಮಯದಲ್ಲಿ ಯಾವ ಕೆಲಸ ಮಾಡಬಹುದು ಯಾವ ಕೆಲಸ ಮಾಡಬಾರದು ಅನ್ನುವುದು ಬಹಳ ಮುಖ್ಯವಾದ ಸಂಗತಿ ಆಗಿದೆ. ಅದರಲ್ಲೂ ಗರ್ಭಿಣಿ ಹೆಂಗಸರು ಬಹಳ ಜಾಗರೂಕರಾಗಿರುವುದು ಬಹಳ ಮುಖ್ಯ ಆಗಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣವನ್ನು ಗರ್ಭಿಣಿಯರಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ.                                                           

Chandra Grahan 2023
Image Source: Zee Business

                                                                                                                         

ಚಂದ್ರಗ್ರಹಣ ಸಮಯದಲ್ಲಿ ಗರ್ಭಿಣಿ ಮಹಿಳೆಗೆ ಮುನ್ನೆಚ್ಚರಿಕೆಗಳು

ಪ್ರತಿ ವರ್ಷ ಚಂದ್ರ ಗ್ರಹಣ ಹಾಗು ಸೂರ್ಯ ಗ್ರಹಣ ಸಂಭವಿಸುತ್ತಿರುತ್ತದೆ ಅದಕ್ಕೆ ಅನುಗುಣವಾಗಿ ನಾವು ಜಾಗರೂಕರಾಗಿರುವುದು ಬಹಳ ಮುಖ್ಯ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ತಿಳಿಸಲಾಗಿದೆ. ಇವುಗಳನ್ನು ಅನುಸರಿಸುದು ಮುಖ್ಯವೆಂದು ಪರಿಗಣಿಸಲಾಗಿದೆ.

ಗರ್ಭಿಣಿ ಹೆಂಗಸರು ಚಂದ್ರಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು

ಗರ್ಭಿಣಿಯರು ಗ್ರಹಣದ ಸಂದರ್ಭದಲ್ಲಿ ಮನೆಯಿಂದ ಹೊರ ಬಂದರೆ ಚಂದ್ರನ ಕಿರಣವು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ ಇದರಿಂದ ಮಗುವಿನ ಆರೋಗ್ಯ ಹಾಳಾಗಬಹುದು. ಚಂದ್ರಗ್ರಹಣದ ಬೆಳಕಿನೊಂದಿಗೆ ಸಂಪರ್ಕಕ್ಕೆ ಬರುವ ಗರ್ಭಿಣಿಯರು ತಮ್ಮ ಹುಟ್ಟಲಿರುವ ಮಗುವಿನ ದೇಹದ ಮೇಲೆ ಗುರುತುಗಳು ಅಥವಾ ಕಲೆಗಳನ್ನು ಅಭಿವೃದ್ಧಿ ಪಡಿಸುತ್ತದೆ ಎಂದು ಹೇಳಲಾಗುತ್ತದೆ.

ಗ್ರಹಣದ ಸಮಯದಲ್ಲಿ ಆಹಾರ ಸೇವನೆ ನಿಷೇಧ

ಚಂದ್ರ ಗ್ರಹಣದ ಸಮಯದಲ್ಲಿ ವಿಷಕಾರಿ ಕಿರಣಗಳು ಬೀಳುವುದರಿಂದ ನೀರು ಹಾಗು ಆಹಾರವನ್ನು ಸೇವಿಸಬಾರದು ಅದರಲ್ಲೂ ಗರ್ಭಿಣಿ ಮಹಿಳೆಯರು ಏನು ತಿನ್ನದೇ ಇರಬೇಕಾಗುತ್ತದೆ.

Chandra Grahan 2023
Image Source: India Today

ಗ್ರಹಣದ ನಂತರ ಸ್ನಾನ ಕಡ್ಡಾಯ

ಚಂದ್ರಗ್ರಹಣ ಮುಗಿದ ನಂತರ, ಗರ್ಭಿಣಿಯರು ನೀರಿಗೆ ಕಲ್ಲು ಉಪ್ಪು ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಗ್ರಹಣದ ಎಲ್ಲಾ ದುಷ್ಪರಿಣಾಮಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

ಗ್ರಹಣದ ಸಮಯದಲ್ಲಿ ತೆಂಗಿನಕಾಯಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ

ಗರ್ಭಿಣಿ ಮಹಿಳೆಯು ಚಂದ್ರಗ್ರಹಣದ ಸಮಯದಲ್ಲಿ ತನ್ನೊಂದಿಗೆ ತೆಂಗಿನಕಾಯಿಯನ್ನು ಇಟ್ಟುಕೊಳ್ಳಬೇಕು. ಈ ಕಾರಣದಿಂದಾಗಿ ಗ್ರಹಣವು ಗರ್ಭಿಣಿ ಮಹಿಳೆ ಮತ್ತು ಗರ್ಭದಲ್ಲಿರುವ ಮಗುವಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ.

 

ಧ್ಯಾನ, ಪೂಜಿಸುವುದು ಸೂಕ್ತ ಹಾಗು ದಾನ ಮಾಡಿ

ಚಂದ್ರಗ್ರಹಣದ ಸಮಯದಲ್ಲಿ, ಗರ್ಭಿಣಿಯರು ತಮ್ಮ ನಾಲಿಗೆಯಲ್ಲಿ ತುಳಸಿ ಎಲೆಯನ್ನು ಇಟ್ಟುಕೊಂಡು ಹನುಮಾನ್ ಚಾಲೀಸಾ ಮತ್ತು ದುರ್ಗಾ ಚಾಲೀಸಾವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಗ್ರಹಣವು ನಿಮ್ಮ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಚಂದ್ರಗ್ರಹಣದ ನಂತರ ಹಾಲು ಮತ್ತು ಹಾಲಿನ ಉತ್ಪನ್ನಗಳು, ಬಿಳಿ ಎಳ್ಳು, ಬಿಳಿ ಬಟ್ಟೆ ಇತ್ಯಾದಿಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ.

Leave A Reply

Your email address will not be published.