Bigg Boss Kannada: ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಚಾರ್ಲಿ ಬಿಗ್ ಬಾಸ್ ಮನೆಗೆ ಬರಲಿಲ್ಲ ಯಾಕೆ…?
ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ, ಬಿಗ್ ಮನೆಗೆ ಬಾರದ ಚಾರ್ಲಿ.
Charlie Dog In Bigg Boss: ಕಲರ್ಸ್ ಕನ್ನಡದಲ್ಲಿ ಕಿರುತರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 10 ಈಗಾಗಲೇ ತುಂಬಾ ಗ್ರ್ಯಾಂಡ್ ಆಗಿ ಶುರುವಾಗಿದೆ. ಈ ಹಿಂದೆ ಕಿಚ್ಚ ಸುದೀಪ್ ಹೇಳಿದಂತೆ ತುಂಬಾ ವಿಭಿನ್ನವಾಗಿಯೇ ಆರಂಭವಾಗಿದೆ. ಒಟ್ಟು 19 ಸ್ಪರ್ಧಿಗಳಲ್ಲಿ 11 ಮಂದಿ ಮನೆಯೊಳಗೆ ವೀಕ್ಷಕರ ಮತಗಳ ಆಧಾರದಲ್ಲಿ ತೆರಳಿದ್ದಾರೆ. 6 ಮಂದಿ ಕಡಿಮೆ ಮತ ಪಡೆದು ಹೋಲ್ಟ್‌ನಲ್ಲಿ ಇದ್ದರು ಮತ್ತು ಇಬ್ಬರು ಸೀದಾ ವೇದಿಕೆಯಿಂದಲೇ ಮನೆಗೆ ವಾಪಸ್ ತೆರಳಿದ್ದಾರೆ.
ಆರು ಮಂದಿ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದವರ ಬಗ್ಗೆ ಒಂದು ವಾರದಲ್ಲಿ ಬಿಗ್ ಬಾಸ್ ನಿರ್ಣಯ ಕೈಗೊಳ್ಳುತ್ತಾರೆ. ವೀಕ್ಷಕರು ಯಾರನ್ನು ಆಯ್ಕೆ ಮಾಡಿದ್ದಾರೋ ಅವರು ಸೀದಾ ಮನೆಯೊಳಗೆ ಹೋಗಿದ್ದು, ವೀಕ್ಷಕರು ಕಡಿಮೆ ಮತ ನೀಡಿದ್ದವರು ಷರತ್ತಿನ ಮೇಲೆ ದೊಡ್ಮನೆ ಪ್ರವೇಶಿಸಿದ್ದಾರೆ.ಆದರೆ, ಇಷ್ಟೇಲ್ಲಾ ನಡೆದರು ವೀಕ್ಷಕರು ಮತ್ತು ಸ್ಪರ್ಧಿಗಳು ಕಾಯುತ್ತಿರುವ ಒಬ್ಬ ವಿಶೇಷ ಸ್ಪರ್ಧಿ ‘ ಚಾರ್ಲಿ’ಮಾತ್ರ ಬರಲೇ ಇಲ್ಲ.

ಬಿಗ್ ಬಾಸ್ ಗೆ ಬಾರದ ಚಾರ್ಲಿ
ರಾಷ್ಟ್ರ ಪ್ರಶಸ್ತಿ ಪಡೆದ ಸೂಪರ್ ಹಿಟ್ ಸಿನಿಮಾ ‘777 ಚಾರ್ಲಿ’ ಸಿನಿಮಾ ಮೂಲಕ ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದ ‘ಚಾರ್ಲಿ’ ಬಿಗ್ ಬಾಸ್‌ಗೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದು ಜನರ ಕನಸಾಗಿಯೇ ಉಳಿಯಿತು. ವೇದಿಕೆ ಮೇಲೆ ವೀಕ್ಷಕರು ಮತ್ತು ಸ್ಪರ್ಧಿಗಳು ಚಾರ್ಲಿಗಾಗಿ ಕಾಯುತ್ತಿದ್ದರು. ಆದರೆ, ಚಾರ್ಲಿ ಬರದ ಕಾರಣ ಬಿಗ್ ಬಾಸ್‌ಗೆ ಎಲ್ಲರು ಚಾರ್ಲಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ವೇದಿಕೆ ಮೇಲೆ ಹೆಸರು ಕೂಗಿದರೂ ಬರದ ಚಾರ್ಲಿ!
‘777 ಚಾರ್ಲಿ’ ಸಿನಿಮಾದ ಸಹನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಗೆ ವೈಟಿಂಗ್ ಲಿಸ್ಟ್ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಅವರು ವೇದಿಕೆ ಮೇಲೆ ಬಂದಾಗ ಕರ್ನಾಟಕ ಒಬ್ಬ ಅತಿಥಿಗಾಗಿ ಕಾಯುತ್ತಿದ್ದೆ ಅದು ಯಾವು ಗೊತ್ತಾ ಎಂದು ಸುದೀಪ್ ಪ್ರಶ್ನಿಸಿದ್ದರು. ಆಗ ಚಾರ್ಲಿಗಾಗಿ ಎಂದು ಸಂಗೀತಾ ಹೇಳಿದ್ದರು. ಚಾರ್ಲಿಯನ್ನು ಕರಿಯಿರಿ ಎಂದು ಸುದೀಪ್ ತಿಳಿಸಿದ್ದರು. ನಟಿ ಸಂಗೀತಾ ಹಲವು ಬಾರಿ ಚಾರ್ಲಿ… ಚಾರ್ಲಿ ಎಂದು ಕೂಗಿದರೂ ಡಾಗ್ ವೇದಿಕೆಗೆ ಬರಲೇ ಇಲ್ಲ. ಟ್ರೀಟ್ ಕೊಡ್ತಿನಿ ಬಾ ಎಂದರೂ ಬರಲಿಲ್ಲ.

ಚಾರ್ಲಿ ಮುಂದಿನ ವಾರ ಬಿಗ್ ಬಾಸ್ ಗೆ ಬರುವ ನಿರೀಕ್ಷೆ
ನಟಿ ಸಂಗೀತಾ ಕರೆದರೂ ಚಾರ್ಲಿ ಬರಲಿಲ್ಲ. ಆದರೆ ಈ ವೇಳೆ ಸುದೀಪ್ ಒಂದು ಸುಳಿವು ನೀಡಿದ್ದಾರೆ. ಸಂಗೀತಾ ಜೊತೆಗೆ ಮಾತನಾಡುತ್ತಿದ್ದ ಕಿಚ್ಚ ಸುದೀಪ್, “ಬಹುಶಃ ನೀವು ಕರೆದಿದ್ದು ಚಾರ್ಲಿಗೆ ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳೋಕೆ ಕಾದಿರುತ್ತದೆ. ನಾರ್ತ್ ಇಂಡಿಯಾಗೆ ಹೋಗಿದೆ, ಬರುತ್ತದೆ” ಎಂದಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ಚಾರ್ಲಿ ದೊಡ್ಮನೆಗೆ ಸ್ಪರ್ಧಿಯಾಗಿ ಹೋಗುವುದು ಖಚಿತ ಎನ್ನಬಹುದು.